ನಾಳೆ ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ತುಮಕೂರಿನಲ್ಲಿ ಭರ್ಜರಿ ವ್ಯಾಪಾರ, ಹೂ-ಹಣ್ಣುಗಳ ಬೆಲೆ ದುಪ್ಪಟ್ಟು

ನಾಳೆ ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಹೂವು-ಹಣ್ಣುಗಳ ಖರೀದಿಗೆ ಮಾರುಕಟ್ಟೆಗೆ ಜನರು ಮುಗಿಬಿದ್ದಿದ್ದು, ಹಬ್ಬದ ಸಿದ್ಧತೆಯಲ್ಲಿ ಜನರು ಫುಲ್ ಬ್ಯುಸಿಯಾಗಿದ್ದಾರೆ. ಇತ್ತ ಕಲ್ಪತರು ನಾಡು Tumakuru ಜಿಲ್ಲೆಯ ಜನರಲ್ಲಿಯೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಲೆ ಏರಿಕೆಯ ಬಿಸಿಯ ನಡುವೆಯೂ ಜನರು ಹೂ ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಮಾರುಕಟ್ಟೆಯಲ್ಲಿ ಜನಜಂಗುಳಿ
ನಾಳೆ ವರಮಹಾಲಕ್ಷ್ಮೀ ಹಬ್ಬ. ಹೀಗಾಗಿ ಹಬ್ಬದ ಸಿದ್ಧತೆಗಾಗಿ ತುಮಕೂರಿನ ಅಂತರಸನಹಳ್ಳಿ ಮಾರುಕಟ್ಟೆಗೆ ಜನರು ಲಗ್ಗೆ ಇಟ್ಟಿದ್ದಾರೆ. ಬೆಳಗಿನ ಜಾವ ಐದು ಗಂಟೆಯಿಂದಲೇ ಮಾರುಕಟ್ಟೆಯಲ್ಲಿ ಜನಜಂಗುಳಿ ಶುರುವಾಗಿದೆ.
ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಕೇವಲ ನಗರದಿಂದ ಮಾತ್ರವಲ್ಲ, ಜಿಲ್ಲೆಯ ಬೇರೆ ಬೇರೆ ಊರು, ಹಳ್ಳಿಗಳಿಂದಲೂ ಆಗಮಿಸಿ ಹಬ್ಬದ ಸಾಮಗ್ರಿಗಳನ್ನ ಖರೀದಿ ಮಾಡಿದ್ರು.
READ THIS : ತರಕಾರಿ ಬೆಲೆ ಏರಿಕೆ ..ಯಾವ ತರಕಾರಿ ಎಷ್ಟು ದುಬಾರಿ..?

ತುಮಕೂರಿನಲ್ಲಿ ಭರ್ಜರಿ ವ್ಯಾಪಾರ
ಇನ್ನು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಹೂವು-ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.
ಆದ್ರೆ ಹಬ್ಬದ ಸಂಭ್ರಮದ ನಡುವೆ ಹೂವುಗಳ ಬೆಲೆ ಗ್ರಾಹಕರಿಗೆ ಶಾಕ್ ನೀಡಿದೆ. ಬಹುತೇಕ ಹೂವುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ದುಪ್ಪಟ್ಟಾಗಿದೆ.
ಅಲಂಕಾರಿಕ ಹೂವುಗಳ ಬೆಲೆ ಭಾರೀ ಏರಿಕೆ!
ಅದರಲ್ಲೂ ಅಲಂಕಾರಿಕ ಹೂವುಗಳ ಬೆಲೆ ಭಾರೀ ಏರಿಕೆಯಾಗಿದೆ. ಬೆಲೆ ಹೆಚ್ಚಾದ್ರೂ ಹಬ್ಬದ ಕಾರಣಕ್ಕೆ ಅನಿವಾರ್ಯವಾಗಿ ಖರೀದಿ ಮಾಡಬೇಕಾದ ಪರಿಸ್ಥಿತಿ ಗ್ರಾಹಕರದ್ದು. ಜೊತೆಗೆ ಹೂವುಗಳಷ್ಟೇ ಅಲ್ಲ.
ಹೂವಿನ ಹಾರಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದ್ದು, ತಾವರೆ ಹಾರ 500 ರಿಂದ ಎರಡೂವರೆ ಸಾವಿರ ರೂಪಾಯಿ ಇದ್ರೆ, ದುಂಡು ಮಲ್ಲಿಗೆ ಹಾರ ಎರಡು ಸಾವಿರದಿಂದ ಐದು ಸಾವಿರ ಇದೆ.

ಹೂ-ಹಣ್ಣುಗಳ ಖರೀದಿಯ ಭರಾಟೆ ಜೋರು
ಒಟ್ಟಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ಖರೀದಿಯ ಭರಾಟೆ ಜೋರಾಗಿದ್ದು, ಬೆಲೆಗಳು ಏರಿಕೆಯಾದ್ರೂ ಹಬ್ಬದ ಸಂಭ್ರಮಕ್ಕೆ ಕಡಿವಾಣ ಬಿದ್ದಿಲ್ಲ.
MUST WATCH : NAGESH ಒಬ್ಬ ಸಜ್ಜನ ರಾಜಕಾರಣಿಯಾಗಿದ್ರು ಕಂಬನಿ ಮಿಡಿದ ಶಾಸಕ SURESHGOWDA





