ಸಚಿನ್ ದಾಖಲೆ ಮುರಿದ Vaibhav.

ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿದೆ. ಅದರಲ್ಲೂ ಈ ಸೀಸನ್ನಲ್ಲಿ ರನ್ಗಳ ಮಳೆ ಹರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ 15 ವರ್ಷದ ವೈಭವ್ ಸೂರ್ಯವಂಶಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿದೆ. ವೈಭವ್ ಭಾರತದ ಹಿರಿಯರ ತಂಡದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಸಚಿನ್ ದಾಖಲೆಯನ್ನು ಮುರಿದ ವೈಭವ್
ಬಿಹಾರದ ಯುವ ಆಟಗಾರ Vaibhav ಕೇವಲ 15 ವರ್ಷ 71 ದಿನಗಳ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ 36 ವರ್ಷದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
1989ರಲ್ಲಿ ಸಚಿನ್ ತೆಂಡೂಲ್ಕರ್ 16 ವರ್ಷ 194 ದಿನಗಳ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಭಾರತ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಅವರ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ವೈಭವ್ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನು ಓದಿ : ಟೀಂ ಇಂಡಿಯಾಗೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ – ಸೂರ್ಯವಂಶಿ ಎಂಟ್ರಿ

ಐಪಿಎಲ್ ಪ್ರದರ್ಶನಕ್ಕೆ ಸಿಕ್ಕ ಪ್ರತಿಫಲ
2026ರ ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದರು. ಅವರ ನಿರಂತರ ಉತ್ತಮ ಪ್ರದರ್ಶನಕ್ಕೆ ಪ್ರತಿಫಲವಾಗಿ BCCI ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಿದೆ.
ಪ್ಲೇಯಿಂಗ್ 11ರಲ್ಲಿ ಅವಕಾಶ ಸಿಗುತ್ತಾ?
ತಂಡದಲ್ಲಿ ಸ್ಥಾನ ಪಡೆದಿದ್ದರೂ ವೈಭವ್ ಸೂರ್ಯವಂಶಿಗೆ ತಕ್ಷಣವೇ ಪ್ಲೇಯಿಂಗ್ 11ರಲ್ಲಿ ಅವಕಾಶ ಸಿಗುವುದು ಸುಲಭವಲ್ಲ ಎನ್ನಲಾಗುತ್ತಿದೆ. ಆರಂಭಿಕ ಬ್ಯಾಟರ್ಗಳಾಗಿ ಅಭಿಷೇಕ್ ಆರ್ಮಾ ಹಾಗೂ ಸ್ಯಾಮ್ಸನ್ ಈಗಾಗಲೇ ತಂಡದಲ್ಲಿದ್ದಾರೆ. ಇವರಲ್ಲಿ ಯಾರಾದರೂ ಕಳಪೆ ಪ್ರದರ್ಶನ ನೀಡಿದರೆ ಅಥವಾ ತಂಡದ ಸಮತೋಲನದ ಅಗತ್ಯವಿದ್ದರೆ ವೈಭವ್ಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.

ಇದನ್ನು ನೋಡಿ : ತುಮಕೂರಿಗೆ ಸಿಎಂ ಸ್ಥಾನ ಮಿಸ್ ಆಯ್ತಾ..? – DCM PARAMESHWAR ಹೀಗ್ಯಾಕಂದ್ರು.?




