Murder|ಪ್ರಿಯಕರನ ಜೊತೆ ಸೇರಿ ಆರು ವರ್ಷದ ಮಗಳ ಬರ್ಬರ ಹತ್ಯೆಗೈದ ತಾಯಿ!

6 ವರ್ಷದ ಬಾಲಕಿಯ ಅನುಮಾನಸ್ಪದ ಸಾವಿಗೆ ಮೂರು ತಿಂಗಳ ಬಳಿಕ ಕೊಲೆಯ ಟ್ವಿಸ್ಟ್ ಸಿಕ್ಕಿದೆ.
ಬೆಂಗಳೂರು ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ಮೂರು ತಿಂಗಳ ಹಿಂದೆ 6 ವರ್ಷದ ವೆನ್ನಿಲಾ ಅನ್ನೋ ಬಾಲಕಿಯೋರ್ವಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಳು.
ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾಯ್ತಾ ಕಂದಮ್ಮ?
ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವು ಅಲ್ಲಾ Murder ಎನ್ನಲಾಗ್ತಿದೆ. ಬೆಂಗಳೂರು ಮೂಲದ ಪ್ರಿಯಾಂಕಾ ಹಾಗೂ ದಾವಣಗೆರೆಯ ಪ್ರವೀಣ್ 2007 ರಲ್ಲಿ ಮದುವೆಯಾಗಿದ್ದು,ಈ ದಂಪತಿಗೆ 17 ವರ್ಷದ ಹಾಗೂ 5 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದರು. ಈ ನಡುವೆ ಕೆಲ ವರ್ಷಗಳ ಹಿಂದೆ ಪ್ರಿಯಾಂಕಾಳಿಗೆ ತನ್ನ ಕಾಲೇಜು ಗೆಳೆಯ ಮೋಹನ್ ಜೊತೆ ಸಲುಗೆ ಬೆಳೆದು ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ಪ್ರಿಯಾಂಕಾ ಪತಿ ಪ್ರವೀಣ್ ಕಿವಿಗೆ ಬಿದ್ದಿದ್ದು ಪ್ರಶ್ನಿಸಿದಾಗ ಪ್ರಿಯಾಂಕ ತನಗೆ ಡಿವೋರ್ಸ್ ಕೊಡುವಂತೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ.

ಪ್ರಿಯಕರನ ಜೊತೆ ಸೇರಿ ಹೆತ್ತ ಮಗಳನ್ನೇ ಕೊಲೆಗೈದ ತಾಯಿ..?
ಮೃತ ವೆನ್ನಿಲಾ ಜೊತೆಗೆ ಪ್ರವೀಣ್,ಪ್ರಿಯಾಂಕ ದಂಪತಿ ಕಾಡುಗೋಡಿಯಲ್ಲಿ ವಾಸವಾಗಿದ್ದರು.ಮಾ.24ರಂದು ಮಗು ಏಕಾಏಕಿ ಮೃತಪಟ್ಟಿದ್ದು ಏನಾಯ್ತು ಎಂದು ಕೇಳಿದಾಗ ಮಗುವಿಗೆ ಬಿರಿಯಾನಿ ತಿನ್ನಲು ಕೊಟ್ಟಿದ್ದೆ,ಆಮೇಲೆ ಏನಾಯ್ತು ಗೊತ್ತಿಲ್ಲ ಎಂದಿದ್ದಳು.
ಮತ್ತೊಮ್ಮೆ ಐಸ್ ಕ್ರೀಮ್ ಕೊಟ್ಟು ಎಸಿ ಹಾಕಿ ಕಾರಿನಲ್ಲಿ ಮಲಗಿಸಿದ್ದೆ, ಆದರೆ ಮನೆಗೆ ಬಂದು ನೋಡಿದಾಗ ಮಗು ಮೃತಪಟ್ಟಿರೋದಾಗಿ ಪ್ರಿಯಾಂಕ ಸುಳ್ಳಿನ ಕಥೆ ಕಟ್ಟಿದ್ದಳು. ಈ ಬಗ್ಗೆ ಅನುಮಾನಗೊಂಡ ಪತಿ ಪ್ರವೀಣ್, ಮಗುವಿನ ಮರಣೋತ್ತರ ಪರೀಕ್ಷೆ ವರದಿಯನ್ನ ತನ್ನ ಸಂಬಂಧಿ ವೈದ್ಯರೊಬ್ಬರಿಗೆ ಕಳುಹಿಸಿದ್ದರು.
ವಿದೇಶದಲ್ಲಿದ್ದ ವೈದ್ಯರು ಐಸ್ ಕ್ರೀಮ್ ಅಥವಾ ಬಿರಿಯಾನಿ ತಿಂದು ಮಗು ಸತ್ತಿಲ್ಲ,ಮಗುವಿನ ಅಪ್ಡೊಮನ್ ಗೆ ಹೊಡೆತ ಬಿದ್ದು ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ : Ramanagara ದಲ್ಲಿ ತರಕಾರಿ ಗಿಡ ವಿಚಾರಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ..!!

Murder – ಮಗಳ ಬಣ್ಣ ಕಪ್ಪು ಎಂದು ಹಿಯಾಳಿಸುತ್ತಿದ್ದ ನಿಷ್ಕರುಣಿ ತಾಯಿ..!
ನನ್ನ ಮಗಳನ್ನು ಉಸಿರು ಗಟ್ಟಿಸಿ ಕೊಲ್ಲಲಾಗಿದೆ ಎಂದು ಪ್ರವೀಣ್ ಇದೀಗ ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳು ವೆನಿಲ್ಲಾ ಕಪ್ಪು ಬಣ್ಣ ಇದ್ದಿದ್ದರಿಂದ ಆಕೆಯನ್ನ ಕಂಡರೆ ತಾಯಿ ಪ್ರಿಯಾಂಕಗೆ ಪ್ರೀತಿ ಇರಲಿಲ್ಲಾ ಎಂದು ಪತಿ ಪ್ರವೀಣ್ ಆರೋಪಿಸಿದ್ದಾರೆ.
ಸದ್ಯ ಆರೋಪಿ ಪ್ರಿಯಾಂಕಾ ತಲೆಮರೆಸಿಕೊಂಡಿದ್ದು, ಆಕೆಯ ಪ್ರಿಯಕರ ಮೋಹನ್ ನ ಕಾಡುಗೋಡಿ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನು ನೋಡಿ : RAJANNAರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ತಿರಾ ಸಾರ್? – RAJANNA ಬಗ್ಗೆ DCM PARAMESHWAR ಏನಂದ್ರು?



