ಟಿ20 ತಂಡ ಪ್ರಕಟ | Shreyas Iyer ಟೀಂ ಇಂಡಿಯಾದ ನೂತನ ನಾಯಕ – ವೈಭವ್ ಸೂರ್ಯವಂಶಿಗೂ ತಂಡದಲ್ಲಿ ಸ್ಥಾನ.

BCCI ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮತ್ತು ಮುಂದಿನ ಏಷ್ಯನ್ ಗೇಮ್ಸ್ಗೆ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ.
ಟೀಂ ಇಂಡಿಯಾದ ನೂತನ ನಾಯಕ
ಜೂನ್ 26ರಿಂದ ಐರ್ಲೆಂಡ್ ವಿರುದ್ಧ ಹಾಗೂ ಜುಲೈ 1ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ನಾಯಕತ್ವದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಶ್ರೇಯಸ್ ಐಯ್ಯರ್ಗೆ ಟಿ20 ತಂಡದ ನಾಯಕತ್ವ ನೀಡಲಾಗಿದ್ದು, ತಿಲಕ್ ವರ್ಮಾ ಉಪನಾಯಕನಾಗಿದ್ದಾರೆ.

IPL ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಬಿಸಿಸಿಐ ಆದ್ಯತೆ
ಹಿಂದಿನ ಟಿ20 ವಿಶ್ವಕಪ್ನಲ್ಲಿ ನಾಯಕತ್ವ ವಹಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಈ ಬಾರಿ ತಂಡದಿಂದ ಕೈಬಿಡಲಾಗಿದ್ದು, ಜೊತೆಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಸ್ಥಾನ ಕಳೆದುಕೊಂಡಿದ್ದಾರೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಬಿಸಿಸಿಐ ಈ ಬಾರಿ ಹೆಚ್ಚು ಆದ್ಯತೆ ನೀಡಿದೆ.
ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ
15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಇದು ಆಯ್ಕೆ ಸಮಿತಿಯ ಅಚ್ಚರಿಯ ನಿರ್ಧಾರವಾಗಿದೆ. ಜೊತೆಗೆ ಅಭಿಷೇಕ್ ಆರ್ಮಾ, ವರುಣ ಚಕ್ರವರ್ತಿ, ಮೊಹಮದ್ ಸಿರಾಜ್ ಸೇರಿದಂತೆ ಹಲವು ಯುವ ಆಟಗಾರರು ಸ್ಥಾನ ಪಡೆದಿದ್ದಾರೆ.
ಇದನ್ನು ಓದಿ : ಕೊಹ್ಲಿಗೆ ಗಾಯ – ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಔಟ್

ಏಷ್ಯನ್ ಗೇಮ್ಸ್ – Shreyas Iyer ನಾಯಕತ್ವ
ವಿಕೆಟ್ ಕೀಪರ್ ಬ್ಯಾಟರ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಬೂಮ್ರಾ ಸೇರಿದಂತೆ ಅನುಭವ ಹಾಗೂ ಯುವ ಶಕ್ತಿಯ ಸಮನ್ವಯವನ್ನು ಬಿಸಿಸಿಐ ರೂಪಿಸಿದೆ.
ಇದೇ ವೇಳೆ, ಮುಂದಿನ ಏಷ್ಯನ್ ಗೇಮ್ಸ್ಗಾಗಿ ಪ್ರಕಟಿಸಿದ ತಂಡದಲ್ಲೂ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದು, ತಿಲಕ್ ವರ್ಮಾ ಉಪನಾಯಕನಾಗಿ ಮುಂದುವರಿಯಲಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಬೂಮ್ರಾ ಸೇರಿದಂತೆ ಪ್ರಮುಖ ಆಟಗಾರರಿಗೆ ಸ್ಥಾನ ನೀಡಲಾಗಿದೆ.

ಇದನ್ನು ನೋಡಿ : ನಗರಾಭಿವೃದ್ಧಿ ಖಾತೆಗಾಗಿ ಭಾರೀ ಪೈಟ್ – ಬೆಂಗಳೂರು ಖಾತೆ ಯಾಕಿಷ್ಟು ಪವರ್ಫುಲ್.?




