ನಗರಾಭಿವೃದ್ಧಿ ಖಾತೆಗಾಗಿ ಭಾರೀ ಪೈಟ್ – Bengaluru ಖಾತೆ ಯಾಕಿಷ್ಟು ಪವರ್ಫುಲ್.?

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸರ್ಕಾರ ರಚನೆ ಆದ ಮೂರೇ ದಿನಕ್ಕೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಾಗಿ ಸಚಿವರ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ.
ರಾಜ್ಯದ ಅತ್ಯಂತ ಪ್ರಭಾವಿ ಖಾತೆಗಳಲ್ಲಿ ಒಂದಾಗಿರುವ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಮೇಲೆ ಹಲವು ಸಚಿವಾಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ.
ಈ ಖಾತೆ ನೀಡದ್ದಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ
ಇನ್ನು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು Bengaluru ನಗರಾಭಿವೃದ್ಧಿ ಖಾತೆ ನೀಡದಿದ್ದರೆ ಸಚಿವ ಸ್ಥಾನ ಬೇಡ ಎಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಕೆ.ಹೆಚ್. ಮುನಿಯಪ್ಪನವರು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಯೋಜನೆಗಳು ಈ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಈ ಖಾತೆಗೆ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಸ್ಥಾನವಿದ್ದು, ಇದಕ್ಕಾಗಿ ಪೈಪೋಟಿ ಶುರುವಾಗಿದೆ.
ಇದನ್ನು ಓದಿ : ರಾಜೀನಾಮೆ ಹಿಂಪಡೆಯಲು CM, ಸುರ್ಜೆವಾಲಾ ಮನವಿ ಮಾಡಿದ್ದಾರೆ – ರಾಮಲಿಂಗಾರೆಡ್ಡಿ

ಅಧಿಕಾರ ದಕ್ಕಿಸಿಕೊಳ್ಳಲು ಯಾಕಿಷ್ಟು ಪೈಪೋಟಿ?
ಇನ್ನು ಬೆಂಗಳೂರಿನ ಅಧಿಕಾರ ದಕ್ಕಿಸಿಕೊಳ್ಳಲು ಯಾಕಿಷ್ಟು ಪೈಪೋಟಿ.? ಸಚಿವರು ಈ ಸ್ಥಾನಕ್ಕಾಗಿ ಇಷ್ಟೊಂದು ಒತ್ತಾಯ ಮಾಡಲು ಇರುವ ಅಸಲಿ ಕಾರಣಗಳೇನು ಅನ್ನೋದನ್ನ ನೋಡೊದಾದ್ರೆ, ಈ ಖಾತೆಯಡಿಯಲ್ಲಿ ಮೆಟ್ರೋ ವಿಸ್ತರಣೆ, ರಸ್ತೆ ಅಭಿವೃದ್ಧಿ, ಸುರಂಗ ಮಾರ್ಗಗಳು, ಕೆರೆಗಳ ಅಭಿವೃದ್ಧಿ, ಟ್ರಾಫಿಕ್ ನಿರ್ವಹಣೆ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಮೇಲ್ವಿಚಾರಣೆ ಈ ಇಲಾಖೆಯ ಮೂಲಕ ನಡೆಯುತ್ತದೆ. ಇದ್ರಿಂದ ಯಾವುದೇ ಒಬ್ಬ ರಾಜಕಾರಣಿಗೆ ಅತ್ಯುನ್ನತ ರಾಜಕೀಯ ಗೌರವ ಮತ್ತು ಶಕ್ತಿಯನ್ನು ತಂದುಕೊಡುತ್ತದೆ. ಹೀಗಾಗಿಯೇ ಈ ಇಲಾಖೆಗೆ ಇಷ್ಟೊಂದು ಮಹತ್ವ ಇದೆ.

ಅಷ್ಟಕ್ಕೂ ಈ ಖಾತೆಗಾಗಿ ಶಾಸಕರ ಮಧ್ಯೆ ಯಾಕಿಷ್ಟು ಪೈಪೋಟಿ
ಇನ್ನು ಇದರ ಜೊತೆಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಸಂಸ್ಥೆಗಳ ಆಡಳಿತಾತ್ಮಕ ಪ್ರಭಾವವೂ ಈ ಇಲಾಖೆಯ ಅಡಿಯಲ್ಲಿ ಇರುತ್ತದೆ. ಹೀಗಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಆಡಳಿತಾತ್ಮಕ ಹಿಡಿತ ಎರಡೂ ಹೆಚ್ಚಾಗುತ್ತದೆ. ಮುಂದಿನ ಬಿಬಿಎಂಪಿ ಚುನಾವಣೆ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ನಾಯಕರು ಈ ಖಾತೆಯ ಮೇಲೆ ಆಸಕ್ತಿ ತೋರಿದ್ದು, ಈ ಖಾತೆಗಾಗಿ ಡಿಮ್ಯಾಂಡ್ ಮಾಡ್ತಿದ್ದಾರೆ.
ಈ ಕಾರಣಕ್ಕಾಗಿ Bengaluru ಖಾತೆ ನಾಯಕರ ಅಚ್ಚುಮೆಚ್ಚು
ಸದ್ಯ ಈ ಪ್ರತಿಷ್ಠಿತ ಖಾತೆಯನ್ನ ಕೃಷ್ಣ ಬೈರೇಗೌಡ ಅವರಿಗೆ ಕೊಟ್ಟಿದ್ದು, ರಾಮಲಿಂಗಾರೆಡ್ಡಿ ಈ ಖಾತೆಯೇ ಬೇಕೆಂದು ಮುನಿಸಿಕೊಂಡು ರಾಜೀನಾಮೆ ನೀಡಿದ್ದಾರೆ.
ಇತ್ತ ಸಿಎಂ ರಾಮಲಿಂಗಾರೆಡ್ಡಿಯನ್ನ ಭೇಟಿ ಮಾಡಿ ಜಲಸಂಪನ್ಮೂಲ ಖಾತೆ ಜೊತೆ ಮತ್ತೊಂದು ಖಾತೆಯನ್ನ ಆಫರ್ ಮಾಡಿದ್ದು, ಈ ನಿರ್ಧಾರಕ್ಕೆ ರಾಮಲಿಂಗಾರೆಡ್ಡಿ ಮನವೊಲಿಯುತ್ತಾರಾ..? ಅಥವಾ ಖಾತೆ ಹಂಚಿಕೆಯಲ್ಲಿ ಬದಲಾವಣೆ ಆಗುತ್ತಾ ಎಂಬುದನ್ನ ಕಾದು ನೋಡ್ಬೇಕಿದೆ.
ಇದನ್ನು ನೋಡಿ : ವಿಧಾನಸೌಧ ಮುತ್ತಿಗೆ ಯತ್ನಿಸಿದ ರೈತರು – ಪ್ರತಿಭಟನಾನಿರತ ರೈತರು ಪೊಲೀಸ್ ವಶಕ್ಕೆ





