ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ( UGCET ) ಫಲಿತಾಂಶವನ್ನುKEA ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (KCET/ UGCET ) ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಮಧ್ಯಾಹ್ನ 2 ಗಂಟೆಯ ನಂತರ KEAಯ ಅಧಿಕೃತ ವೆಬ್ಸೈಟ್ನಲ್ಲಿ [https://cetonline. karnataka.gov.in](https://cetonline.karnataka.gov.in) ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಪರೀಕ್ಷೆಗೆ 3.09 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ
ಕಳೆದ ಏಪ್ರಿಲ್ 23 ಮತ್ತು 24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ KCET ಪರೀಕ್ಷೆ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ಒಟ್ಟು 3,30,646 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 3,09,014 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ವಿಷಯವಾರು ಹಾಜರಾತಿ ವಿವರ:
- ಭೌತಶಾಸ್ತ್ರ: 3,09,014
- ರಸಾಯನಶಾಸ್ತ್ರ: 3,08,946
- ಗಣಿತ: 3,02,384
- ಜೀವಶಾಸ್ತ್ರ: 2,31,023
ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗಾಗಿ ಏಪ್ರಿಲ್ 22ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು.

AI ತಂತ್ರಜ್ಞಾನ ಬಳಕೆ; ಪಾರದರ್ಶಕ ಪರೀಕ್ಷೆ
ಈ ಬಾರಿಯ KCET ಪರೀಕ್ಷೆಯಲ್ಲಿ ಮುಖಚಹರೆ ಗುರುತಿಸುವಿಕೆ (Facial Recognition) ಮತ್ತು ವೆಬ್ ಕಾಸ್ಟಿಂಗ್ ಸೇರಿದಂತೆ ಆಧುನಿಕ AI ತಂತ್ರಜ್ಞಾನಗಳನ್ನು ಬಳಸಲಾಗಿತ್ತು. ಪರೀಕ್ಷೆ ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶ ನೀಡಲಾಗಿಲ್ಲ ಎಂದು KEA ತಿಳಿಸಿದೆ.
ಪರೀಕ್ಷೆ ಮುಗಿದ ಕೇವಲ 5 ದಿನಗಳ ದಾಖಲೆ ಅವಧಿಯಲ್ಲಿ ಎಲ್ಲ ವಿದ್ಯಾರ್ಥಿಗಳ ಒಟ್ಟು 11,51,367 ಓಎಂಆರ್ ಶೀಟ್ಗಳನ್ನು ಕೆಇಎ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಇವು ಸಾರ್ವಜನಿಕ ವಿಮರ್ಶೆಗೆ ಲಭ್ಯವಿವೆ. ದ್ವಿತೀಯ ಪಿಯುಸಿಯ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತಿ ಹೆಚ್ಚಿನ ಅಂಕಗಳನ್ನು ಪರಿಗಣಿಸಿ ಸಿಇಟಿ ರ್ಯಾಂಕ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಸಿಬಿಎಸ್ಇ ಹಾಗೂ ಸಿಐಎಸ್ಸಿಳಇ ಬೋರ್ಡ್ ವಿದ್ಯಾರ್ಥಿಗಳ 12ನೇ ತರಗತಿಯ ಅಂಕಗಳನ್ನು ಮತ್ತು ಇದೇ ಮೊದಲ ಬಾರಿಗೆ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯದ ವಿದ್ಯಾರ್ಥಿಗಳ ಫಲಿತಾಂಶವನ್ನು API ಮೂಲಕ ನೇರವಾಗಿ ಆನ್ಲೈನ್ನಲ್ಲಿ ಪಡೆದು ರ್ಯಾಂಕ್ ನೀಡಲಾಗಿದೆ. ಸುಮಾರು 25 ಸಾವಿರ ಅಭ್ಯರ್ಥಿಗಳು ಓಎಂಆರ್ ಶೀಟ್ನಲ್ಲಿ ಮಾಡಿದ್ದ ತಪ್ಪುಗಳನ್ನು ಪೂರಕ ದಾಖಲೆಗಳೊಂದಿಗೆ ಪರಿಶೀಲಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫಲಿತಾಂಶ ನೀಡಲಾಗಿದೆ.
ಇದನ್ನು ಓದಿ : ಮತ್ತೆ ಶುರುವಾಯ್ತು ಜನಿವಾರ ವಿವಾದ – ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ .?

‘KEA Connect’ ಆ್ಯಪ್ ಬಿಡುಗಡೆ
ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಮಾರ್ಗದರ್ಶನ ನೀಡಲು KEA ‘KEA Connect’ ಎಂಬ ಹೊಸ ಆ್ಯಪ್ ಅನ್ನು ಪರಿಚಯಿಸಿದೆ.
ಕಳೆದ ವರ್ಷ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದ ಹಿರಿಯ ವಿದ್ಯಾರ್ಥಿಗಳು ಈ ಆ್ಯಪ್ ಮೂಲಕ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಕೌನ್ಸೆಲಿಂಗ್ನಲ್ಲಿ ಪ್ರಮುಖ ಬದಲಾವಣೆಗಳು
1. ವಿಶೇಷ ಚೇತನ ಅಭ್ಯರ್ಥಿಗಳಿಗೆ ಸರಳೀಕೃತ ಪ್ರಕ್ರಿಯೆ
ವೈದ್ಯಕೀಯ ತಪಾಸಣೆ ಮಾಹಿತಿ ನೇರವಾಗಿ ವೈದ್ಯರಿಂದಲೇ ಪೋರ್ಟಲ್ನಲ್ಲಿ ದಾಖಲಾಗಲಿದೆ.
2. ವೈದ್ಯಕೀಯೇತರ ಕೋರ್ಸ್ಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್
NEET-UG ಫಲಿತಾಂಶ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಸೇರಿದಂತೆ ಇತರ ಕೋರ್ಸ್ಗಳಿಗೆ ಮೊದಲು ಕೌನ್ಸೆಲಿಂಗ್ ನಡೆಸಲಾಗುತ್ತದೆ.
3. ‘ಪ್ರಿ-ರೌಂಡ್’ ಕೌನ್ಸೆಲಿಂಗ್ ಪರಿಚಯ
ಮೊದಲ ಬಾರಿಗೆ ಪ್ರಿ-ರೌಂಡ್ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಅಭ್ಯರ್ಥಿಗಳಿಗೆ ಹೆಚ್ಚಿನ ಆಯ್ಕೆಯ ಅವಕಾಶ ಕಲ್ಪಿಸಲಾಗಿದೆ.
4. ವೈದ್ಯಕೀಯ ಸೀಟುಗಳ ನಿಯಮ ಸಡಿಲಿಕೆ
ಅಖಿಲ ಭಾರತ ಕೋಟಾ ಹಾಗೂ KEA ಎರಡೂ ಕಡೆ ಸೀಟು ಪಡೆದ ಅಭ್ಯರ್ಥಿಗಳು ಅಖಿಲ ಭಾರತ ಕೋಟಾದ ಸೀಟು ಆಯ್ಕೆ ಮಾಡಿಕೊಂಡರೆ KEA ಸೀಟು ಬಿಟ್ಟುಕೊಡಲು ಯಾವುದೇ ದಂಡ ಪಾವತಿಸುವ ಅಗತ್ಯವಿಲ್ಲ.

ಕೌನ್ಸೆಲಿಂಗ್ ಪ್ರಕ್ರಿಯೆಯ ಆಪ್ಷನ್ ಎಂಟ್ರಿಗೆ ಅಗತ್ಯವಿರುವ ದತ್ತಾಂಶಗಳು ಸದ್ಯ ಸಿದ್ಧವಾಗಿದ್ದು, ಪ್ರಕ್ರಿಯೆಗಳು ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನು ನೋಡಿ : ಶಾಸಕ SHADAKSHARI ವಿರುದ್ಧ ಜಾತಿ ನಿಂದನೆ ಆರೋಪ – ಪೊಲೀಸ್ ಠಾಣೆ ಮೆಟ್ಟಿಲೇರಿದ ಮುಖಂಡ.!




