The Girlfriend Collection Day 1 : ತೆಲುಗಿನ ಬಹುನಿರೀಕ್ಷಿತ ಸಿನಿಮಾ ‘ದಿ ಗರ್ಲ್ಫ್ರೆಂಡ್’ (The Girlfriend) ನವೆಂಬರ್ 7ರಂದು ತೆರೆಕಂಡಿದೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿಗೆ ಕನ್ನಡಿಗ ನಟ ದೀಕ್ಷಿತ್ ಶೆಟ್ಟಿ (Deekshith Shetty) ಜತೆ ಪರದೆ ಹಂಚಿಕೊಂಡಿದ್ದಾರೆ.

The Girlfriend Collection Day 1 : ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೆ ಮಿಂಚಿದ್ದಾರೆ
ತೆಲುಗಿನ ಬಹುನಿರೀಕ್ಷಿತ ಸಿನಿಮಾ ‘ದಿ ಗರ್ಲ್ಫ್ರೆಂಡ್’ (The Girlfriend) ನವೆಂಬರ್ 7ರಂದು ತೆರೆಕಂಡಿದೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿಗೆ ಕನ್ನಡಿಗ ನಟ ದೀಕ್ಷಿತ್ ಶೆಟ್ಟಿ (Deekshith Shetty) ಜತೆ ಪರದೆ ಹಂಚಿಕೊಂಡಿದ್ದಾರೆ.
ರಾಹುಲ್ ರವೀಂದ್ರ ನಿರ್ದೇಶನದ ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರವು ಪ್ರೇಕ್ಷಕರ ಹಾಗೂ ವಿಮರ್ಶಕರ ಗಮನ ಸೆಳೆದಿದೆ.
ಮೊದಲ ದಿನದ ಕಲೆಕ್ಷನ್ ಎಷ್ಟು?
ಬಹು ನಿರೀಕ್ಷಿತ ಈ ಮಹಿಳಾ ಪ್ರಧಾನ ಚಿತ್ರಕ್ಕೆ ಪ್ರಾರಂಭದಲ್ಲಿ ದೊಡ್ಡ ಓಪನಿಂಗ್ ಸಿಗಲಿಲ್ಲ. ಮೂಲಗಳ ಪ್ರಕಾರ, ‘ದಿ ಗರ್ಲ್ಫ್ರೆಂಡ್’ ಚಿತ್ರವು ಮೊದಲ ದಿನ ಕೇವಲ ₹1.3 ಕೋಟಿ ರೂ. ಕಲೆಕ್ಷನ್ ಗಳಿಸಿದೆ.
ಇದು ಇತ್ತೀಚಿನ ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ನಟನೆಯ ಅತೀ ಕಡಿಮೆ ಕಲೆಕ್ಷನ್ ಪಡೆದ ತೆಲುಗು ಚಿತ್ರ ಎಂದು ಪರಿಗಣಿಸಲಾಗಿದೆ.

ಹಿಂದಿನ ಚಿತ್ರಗಳ ಹೋಲಿಕೆ
ರಶ್ಮಿಕಾ ಮಂದಣ್ಣ ಅವರ ಹಿಂದಿನ ಕೆಲವು ತೆಲುಗು ಚಿತ್ರಗಳು ಮೊದಲ ದಿನದಲ್ಲೇ ಭರ್ಜರಿ ಕಲೆಕ್ಷನ್ ಮಾಡಿದ್ದವು:
- ಆಡವಲ್ಲು ಮೀಕು ಜೋಹಾರ್ಲು – ₹1.56 ಕೋಟಿ
- ಸೀತಾ ರಾಮಮ್ – ₹3.05 ಕೋಟಿ
- ಗೀತಾ ಗೋವಿಂದಂ – ₹10 ಕೋಟಿ
ಈ ಹಿನ್ನಲೆಯಲ್ಲಿ ‘ದಿ ಗರ್ಲ್ಫ್ರೆಂಡ್’ ನ ಮೊದಲ ದಿನದ ಗಳಿಕೆ ಕಡಿಮೆಯಾಗಿದ್ದರೂ, ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ.
ರಶ್ಮಿಕಾದ ಅಭಿನಯಕ್ಕೆ ಮೆಚ್ಚುಗೆ
ಚಿತ್ರದ ಕಥೆ ರಶ್ಮಿಕಾ ಪಾತ್ರದ ಸುತ್ತ ಹೆಣೆದಿದ್ದು, ಅವರು ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ವಿಮರ್ಶಕರ ಪ್ರಕಾರ, ಇದು ರಶ್ಮಿಕಾ ವೃತ್ತಿ ಜೀವನದ ಅತ್ಯುತ್ತಮ ಅಭಿನಯಗಳಲ್ಲಿ ಒಂದು. ಮಹಿಳಾ ಪ್ರಧಾನ ಕಥೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಚಿತ್ರವನ್ನು ವಿಶಿಷ್ಟಗೊಳಿಸಿವೆ.
ದೀಕ್ಷಿತ್ ಶೆಟ್ಟಿಯ ಗಮನಾರ್ಹ ಪ್ರದರ್ಶನ
‘ದಿ ಗರ್ಲ್ಫ್ರೆಂಡ್’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ದೀಕ್ಷಿತ್ ಶೆಟ್ಟಿ ತಮ್ಮ ‘ದಸರಾ’ ನಂತರ ಮತ್ತೊಮ್ಮೆ ಛಾಪು ಮೂಡಿಸಿದ್ದಾರೆ.
ಪ್ರೇಮದಲ್ಲಿ ಪೊಸೆಸಿವ್, ಭಾವನಾತ್ಮಕ ಯುವಕನ ಪಾತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಚಿತ್ರದ ಬಾಕ್ಸ್ ಆಫೀಸ್ ಭವಿಷ್ಯ
ಚಿತ್ರಕ್ಕೆ ಪಾಸಿಟಿವ್ ಮಾತುಗಳು ಹರಿದಾಡುತ್ತಿದ್ದರಿಂದ, ವೀಕೆಂಡ್ ವೇಳೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ. ತೆಲುಗು ಪ್ರೇಕ್ಷಕರು ರಶ್ಮಿಕಾ-ದೀಕ್ಷಿತ್ ಜೋಡಿಯನ್ನು ಮೆಚ್ಚಿಕೊಂಡಿದ್ದು, ಚಿತ್ರವು ವರ್ಡ್ ಆಫ್ ಮೌತ್ನಿಂದ ಲಾಭ ಪಡೆಯಬಹುದು.




