August 1 ರಿಂದ ಜಾರಿಗೆ ಬರಲಿವೆ 5 ಹೊಸ ನಿಯಮಗಳು: ಎಲ್ಪಿಜಿ ದರ,ತತ್ಕಾಲ್ ಬುಕಿಂಗ್ ಮತ್ತು ಬ್ಯಾಂಕಿಂಗ್ ಮೇಲೆ ಭಾರಿ ಪ್ರಭಾವ

August 1, 2026ರಿಂದ ದೇಶಾದ್ಯಂತ ಹಣಕಾಸು, ಬ್ಯಾಂಕಿಂಗ್, ಸಾರಿಗೆ ಹಾಗೂ ಅಂಚೆ ಸೇವೆಗಳಿಗೆ ಸಂಬಂಧಿಸಿದ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕೃತವಾಗುವ ನಿಯಮಗಳಂತೆ ಈ ಬಾರಿಯೂ ಎಲ್ಪಿಜಿ (LPG) ದರ, ರೈಲ್ವೆ ತತ್ಕಾಲ್ ಟಿಕೆಟ್, ಬ್ಯಾಂಕಿಂಗ್ ಸೇವೆಗಳು, ಅಂಚೆ ಶುಲ್ಕ ಹಾಗೂ FASTag KYC ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಈ ಹೊಸ ನಿಯಮಗಳು ಸಾರ್ವಜನಿಕರ ದಿನನಿತ್ಯದ ವೆಚ್ಚದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
1. ಎಲ್ಪಿಜಿ (LPG) ಸಿಲಿಂಡರ್ ದರ ಪರಿಷ್ಕರಣೆ
ಪ್ರತಿ ತಿಂಗಳ ಮೊದಲ ದಿನದಂತೆ ಆಗಸ್ಟ್ 1ರಂದು ತೈಲ ಕಂಪನಿಗಳು ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ದರವನ್ನು ಪರಿಷ್ಕರಿಸಲಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ತೈಲ ಬೆಲೆ ಆಧರಿಸಿ ದರ ಏರಿಕೆ ಅಥವಾ ಇಳಿಕೆಯಾಗಬಹುದು.

2. ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ಗೆ ಹೊಸ ವ್ಯವಸ್ಥೆ
ಭಾರತೀಯ ರೈಲ್ವೆ ಮೀಸಲಾತಿ ಕೌಂಟರ್ಗಳಲ್ಲಿ ತತ್ಕಾಲ್ ಟಿಕೆಟ್ ಪಡೆಯುವ ಪ್ರಯಾಣಿಕರಿಗೆ ಟೋಕನ್ ವಿತರಣಾ ವ್ಯವಸ್ಥೆಯನ್ನು ಸುಧಾರಿಸಿದೆ.
ಟೋಕನ್ ವಿತರಣೆ ಮತ್ತು ಬುಕ್ಕಿಂಗ್ ಆರಂಭದ ಸಮಯವನ್ನು ಒಂದೇ ವೇಳೆ ನಡೆಸಲಾಗುವುದರಿಂದ ದೀರ್ಘ ಸಾಲು ಹಾಗೂ ಅಕ್ರಮ ಬುಕ್ಕಿಂಗ್ಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.
3. ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ
ಆಗಸ್ಟ್ 1ರಿಂದ ಹಲವು ಬ್ಯಾಂಕುಗಳು ಸೇವಾ ಶುಲ್ಕ, ಎಸ್ಎಂಎಸ್ ಅಲರ್ಟ್ ಶುಲ್ಕ ಹಾಗೂ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ನಿಯಮಗಳನ್ನು ಪರಿಷ್ಕರಿಸಲಿವೆ.
ವಿಶೇಷವಾಗಿ ಕರೆಂಟ್ ಬಿಲ್, ಗ್ಯಾಸ್ ಬಿಲ್ ಪಾವತಿ ಹಾಗೂ ವಾಲೆಟ್ ಲೋಡಿಂಗ್ಗೆ ನೀಡಲಾಗುತ್ತಿದ್ದ ರಿವಾರ್ಡ್ ಪಾಯಿಂಟ್ಗಳ ಮಿತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ.
ಇದನ್ನು ಓದಿ : ಗಮನಿಸಿ, ನಾಳೆಯಿಂದ ದೇಶಾದ್ಯಂತ 6 ಮಹತ್ವದ ಬದಲಾವಣೆಗಳು ಜಾರಿ!

4. ಅಂಚೆ ಸೇವೆಗಳಲ್ಲಿ ಹೊಸ ಶುಲ್ಕ ಜಾರಿ
ಭಾರತೀಯ ಅಂಚೆ ಇಲಾಖೆ ಪತ್ರ ಹಾಗೂ ಪಾರ್ಸೆಲ್ ಸೇವೆಗಳ ವರ್ಗೀಕರಣವನ್ನು ಪರಿಷ್ಕರಿಸಿದೆ. ಆಧಾರ್, ಪಾನ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ಬುಕ್, ಚೆಕ್ಬುಕ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಕಡಿಮೆ ದರದಲ್ಲಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ, ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಹಾಗೂ ಹೈದರಾಬಾದ್ ಸೇರಿದಂತೆ ಆರು ಮಹಾನಗರಗಳಲ್ಲಿ 24 ಗಂಟೆ ಮತ್ತು 48 ಗಂಟೆಗಳ ಆದ್ಯತೆಯ ಸ್ಪೀಡ್ ಪೋಸ್ಟ್ ಸೇವೆ ಲಭ್ಯವಿರಲಿದೆ.
5. FASTag KYC ಕಡ್ಡಾಯ
ಆಗಸ್ಟ್ 1ರಿಂದ FASTag ಖಾತೆಗಳಿಗೆ ಕಡ್ಡಾಯ KYC ನಿಯಮ ಜಾರಿಗೆ ಬರಲಿದೆ. KYC ಪೂರ್ಣಗೊಳಿಸದ ವಾಹನ ಸವಾರರ FASTag ಖಾತೆಗಳು ಬ್ಲಾಕ್ ಆಗುವ ಸಾಧ್ಯತೆ ಇದ್ದು, ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಅಥವಾ ಹೆಚ್ಚುವರಿ ದಂಡ ವಿಧಿಸಬಹುದು.
ಸಾರ್ವಜನಿಕರಿಗೆ ಸಲಹೆ
ಹೊಸ ನಿಯಮಗಳು ಜಾರಿಗೆ ಬರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕ್ನ ಅಧಿಕೃತ ಸಂದೇಶಗಳು ಹಾಗೂ ಇ-ಮೇಲ್ಗಳನ್ನು ಪರಿಶೀಲಿಸುವುದು, FASTag KYC ಪೂರ್ಣಗೊಳಿಸುವುದು ಹಾಗೂ LPG ದರ ಮತ್ತು ಇತರೆ ಸೇವೆಗಳ ಹೊಸ ಶುಲ್ಕಗಳ ಬಗ್ಗೆ ಮುಂಚಿತ ಮಾಹಿತಿ ಪಡೆದುಕೊಳ್ಳುವುದು ಸೂಕ್ತವಾಗಿದೆ.

ಇದನ್ನು ನೋಡಿ : ಸಂಸತ್ನಲ್ಲಿ BJP ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಂಸದೆ PRIYANKA GANDHI




