ISRO Recruitment 2026: ಇಸ್ರೋದಲ್ಲಿ ಬಂಪರ್ ನೇಮಕಾತಿ; ಅರ್ಹತೆ, ವೇತನ ಮತ್ತು ಅರ್ಜಿ ವಿವರ ಇಲ್ಲಿದೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ವಿವಿಧ ಕೇಂದ್ರಗಳು ಹಾಗೂ ಬಾಹ್ಯಾಕಾಶ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ 244 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಜುಲೈ 27ರಿಂದ ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಖಾಲಿ ಹುದ್ದೆಗಳ ವಿವರ
ಒಟ್ಟು 244 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
- ಅಸಿಸ್ಟೆಂಟ್ (Assistant) – 130 ಹುದ್ದೆಗಳು
- ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ (JPA) – 81 ಹುದ್ದೆಗಳು
- ಅಪ್ಪರ್ ಡಿವಿಷನ್ ಕ್ಲರ್ಕ್ (UDC) – 22 ಹುದ್ದೆಗಳು
- ಸ್ಟೆನೋಗ್ರಾಫರ್ (Stenographer) – 10 ಹುದ್ದೆಗಳು
- ಇತರೆ ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ – 1 ಹುದ್ದೆ

ಶೈಕ್ಷಣಿಕ ಅರ್ಹತೆ
ಅಸಿಸ್ಟೆಂಟ್ ಮತ್ತು UDC ಹುದ್ದೆಗಳು:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿ.
- ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಕಡ್ಡಾಯ.
JPA ಮತ್ತು ಸ್ಟೆನೋಗ್ರಾಫರ್ ಹುದ್ದೆಗಳು:
- ವಾಣಿಜ್ಯ ಅಥವಾ ಸೆಕ್ರೆಟೇರಿಯಲ್ ಅಭ್ಯಾಸದಲ್ಲಿ ಪದವಿ ಅಥವಾ ಡಿಪ್ಲೊಮಾ.
- ಸ್ಟೆನೋಗ್ರಾಫರ್ ಅಥವಾ ಸ್ಟೆನೋ-ಟೈಪಿಸ್ಟ್ ಆಗಿ ಕನಿಷ್ಠ 1 ವರ್ಷದ ಅನುಭವ.
- ಇಂಗ್ಲಿಷ್ ಸ್ಟೆನೋಗ್ರಫಿ ಹಾಗೂ ಕಂಪ್ಯೂಟರ್ ಜ್ಞಾನ ಅಗತ್ಯ.
ಇದನ್ನು ಓದಿ : ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!
ವಯೋಮಿತಿ
ಆಗಸ್ಟ್ 16, 2026ರ ಅನ್ವಯ:
- ಸಾಮಾನ್ಯ ವರ್ಗ – ಗರಿಷ್ಠ 28 ವರ್ಷ
- OBC – 31 ವರ್ಷ
- SC/ST – 33 ವರ್ಷ (ಸರ್ಕಾರದ ನಿಯಮಾನುಸಾರ ವಯೋಸಡಿಲಿಕೆ)
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಮ್ಯಾಟ್ರಿಕ್ಸ್ ಲೆವೆಲ್-4 ಅಡಿಯಲ್ಲಿ ತಿಂಗಳಿಗೆ ₹25,500 ಮೂಲ ವೇತನ ಹಾಗೂ ಕೇಂದ್ರ ಸರ್ಕಾರದ ನಿಯಮಾನುಸಾರ ಇತರೆ ಭತ್ಯೆಗಳು ದೊರೆಯಲಿವೆ.
ಅರ್ಜಿ ಶುಲ್ಕ
- ಸಾಮಾನ್ಯ / OBC ಅಭ್ಯರ್ಥಿಗಳು – ₹500
- SC, ST, PwBD, ಮಾಜಿ ಸೈನಿಕರು ಹಾಗೂ ಮಹಿಳಾ ಅಭ್ಯರ್ಥಿಗಳು – ಯಾವುದೇ ಅರ್ಜಿ ಶುಲ್ಕ ಇಲ್ಲ

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್ಸೈಟ್ ಮೂಲಕ ಆಗಸ್ಟ್ 16, 2026ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ಇದನ್ನು ನೋಡಿ : ಪೊಲೀಸರ ಭರ್ಜರಿ ಕಾರ್ಯಾಚರಣೆ -120 ಕಿ.ಮೀ ಚೇಸ್ ಮಾಡಿ ಕಳ್ಳರ ಬಂಧನ




