Ramayana ಟ್ರೇಲರ್ ನೋಡಿ ಪಾಕಿಸ್ತಾನಿ ಮಂದಿ ಫಿದಾ – ಯಶ್ ನಟನೆಗೆ ಮೆಚ್ಚುಗೆ!

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಗಡಿ ದಾಟಿ ಪಾಕಿಸ್ತಾನದಲ್ಲೂ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಜುಲೈ 30ರಂದು ಬಿಡುಗಡೆಯಾದ ಟ್ರೇಲರ್ನ ದೃಶ್ಯ ವೈಭವ ಮತ್ತು ತಾರಾಗಣದ ಅಭಿನಯವನ್ನು ಪಾಕಿಸ್ತಾನದ ಹಲವು ಯೂಟ್ಯೂಬರ್ಗಳು ಹಾಗೂ ಕಂಟೆಂಟ್ ಕ್ರಿಯೇಟರ್ಗಳು ಮೆಚ್ಚಿಕೊಂಡಿದ್ದಾರೆ.
‘ಹಾಲಿವುಡ್ ಮಟ್ಟದ VFX’ ಎಂದ ಪಾಕಿಸ್ತಾನಿ ಯೂಟ್ಯೂಬರ್
ಪಾಕಿಸ್ತಾನದ ಜನಪ್ರಿಯ ಯೂಟ್ಯೂಬರ್ ಮಾವಿಯಾ ಉಮರ್ ಫಾರೂಕಿ ಟ್ರೇಲರ್ ವೀಕ್ಷಿಸಿದ ಬಳಿಕ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದು, “ಪಾಕಿಸ್ತಾನಿ ಪ್ರೇಕ್ಷಕನಾಗಿ ಹೇಳುವುದಾದರೆ, Ramayana ಟ್ರೇಲರ್ ಅದ್ಭುತವಾಗಿದೆ.
ಇಷ್ಟೊಂದು ದೊಡ್ಡ ಬಜೆಟ್ನ ಸಿನಿಮಾ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹಾಲಿವುಡ್ ಮಟ್ಟದ VFX ಬಳಸಲಾಗಿದೆ.
ಇದು ಭಾರತೀಯ ಸಿನಿಮಾ ಮತ್ತು ಹಿಂದೂ ಧರ್ಮದ ಇತಿಹಾಸವನ್ನು ತೋರಿಸುವ ಚಿತ್ರ. ಪಾಕಿಸ್ತಾನಿಯಾಗಿದ್ದರೂ ಈ ಟ್ರೇಲರ್ ನನ್ನಲ್ಲಿ ರೋಮಾಂಚನ ಮೂಡಿಸಿದೆ” ಎಂದು ಹೇಳಿದ್ದಾರೆ.

₹4,000 ಕೋಟಿ ಬಜೆಟ್ ಎಂದ ನೆಟ್ಟಿಗರು
ಮಾವಿಯಾ ಉಮರ್ ಚಿತ್ರವನ್ನು ₹1,000 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದರೂ, ಭಾರತೀಯ ನೆಟ್ಟಿಗರು ಕಾಮೆಂಟ್ಗಳ ಮೂಲಕ ಚಿತ್ರದ ಒಟ್ಟು ಬಜೆಟ್ ಸುಮಾರು ₹4,000 ಕೋಟಿ ಎಂದು ಮಾಹಿತಿ ನೀಡಿದ್ದಾರೆ.
ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ಮೆಗಾ ಚಿತ್ರಕಾವ್ಯದ ಮೊದಲ ಭಾಗ ಈ ವರ್ಷದ ದೀಪಾವಳಿ ವೇಳೆಗೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇದನ್ನು ಓದಿ : ಪುಷ್ಪ 2 ದಾಖಲೆ ಮುರಿದ ರಾಮಾಯಣ? ದೊಡ್ಡ ಮೊತ್ತಕ್ಕೆ ಮ್ಯೂಸಿಕ್ ಹಕ್ಕು ಮಾರಾಟ

ಯಶ್-ರಣಬೀರ್ ಎಂಟ್ರಿಗೆ ಮೆಚ್ಚುಗೆ
ಟ್ರೇಲರ್ನಲ್ಲಿ ರಾವಣನ ಪಾತ್ರದಲ್ಲಿ ಯಶ್ ಹಾಗೂ ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರ ಲುಕ್ ಮತ್ತು ಎಂಟ್ರಿ ದೃಶ್ಯಗಳು ಪಾಕಿಸ್ತಾನಿ ಪ್ರೇಕ್ಷಕರ ಗಮನ ಸೆಳೆದಿವೆ. ಮಾವಿಯಾ ಉಮರ್, “ರಣಬೀರ್ ಕಪೂರ್ ಮತ್ತು ಯಶ್ ಅವರ ನಡುವಿನ ನಟನಾ ಪೈಪೋಟಿ ನೋಡಲು ಕಾತುರನಾಗಿದ್ದೇನೆ” ಎಂದು ಹೇಳಿದ್ದಾರೆ.
ಇನ್ನೊಬ್ಬ ಪಾಕಿಸ್ತಾನಿ ಯೂಟ್ಯೂಬರ್ ಹಸ್ನಾತ್ ಖಾನ್, “ರಾವಣನ ಪಾತ್ರದಲ್ಲಿ ಯಶ್ ಅವರ ಲುಕ್ ಅದ್ಭುತವಾಗಿದೆ. ಗ್ರಾಫಿಕ್ಸ್, VFX ಮತ್ತು ಸಾಹಸ ದೃಶ್ಯಗಳ ವಿನ್ಯಾಸ ಅತ್ಯುತ್ತಮವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರೀ ನಿರೀಕ್ಷೆ ಮೂಡಿಸಿರುವ Ramayana
ನಿತೇಶ್ ತಿವಾರಿ ನಿರ್ದೇಶನದ ಈ ಬಹುಭಾಷಾ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನು ನೋಡಿ : ಫೋಸ್ ಕೊಟ್ರೆ ಆಗಲ್ಲ ಮುಖ್ಯಮಂತ್ರಿಗಳೇ – DKS ವಿರುದ್ಧ KUMARASWAMY ಹೀಗ್ಯಾಕಂದ್ರು?





