
POLITICS : H.D ದೇವೇಗೌಡ್ರನ್ನ ಭೇಟಿಯಾದ B.S ಯಡಿಯೂರಪ್ಪ – ದೋಸ್ತಿಗಳ ಮಧ್ಯೆ ಶುರುವಾಯ್ತು ರಾಜಕೀಯ ಲೆಕ್ಕಾಚಾರ!
ರಾಜಕೀಯದಲ್ಲಿ ಯಾರು ಮಿತ್ರರು ಅಲ್ಲ, ಯಾರು ಶತ್ರುಗಳು . ಶತ್ರುವಿನ ಶತ್ರು ಮಿತ್ರ ಎಂಬ ಮಾತಿನಂತೆ ಈ ಹಿಂದೆ ರಾಜಕೀಯ ಬದ್ಧ ವೈರಿಗಳಾಗಿದ್ದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿದ್ದು, ರಾಜ್ಯರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಭೇಟಿ ವೇಳೆ ಏನೆಲ್ಲಾ ಚರ್ಚೆ ಆಯ್ತು?
ಹಾಗಾದ್ರೆ, ದೇವೇಗೌಡರ ಭೇಟಿ ವೇಳೆ ಏನೆಲ್ಲಾ ಚರ್ಚೆ ಆಯ್ತು? 2028ರ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಬಗ್ಗೆ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಎನ್ಡಿಯ ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆ್ಯಕ್ಟಿವ್ ಆಗಿದ್ದು, ಪುತ್ರ ವಿವೈ ವಿಜಯೇಂದ್ರನ ಮತ್ತಷ್ಟು ಬಲಪಡಿಸಲು ಮುಂದಾಗಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಯಡಿಯೂರಪ್ಪ ಅವರು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ.
READ THIS : 2028ಕ್ಕೆ ಬಸವನಾಡಲ್ಲಿ ದೋಸ್ತಿ ಆರ್ಭಟ – ಬಿಜೆಪಿ ಹೊಡೆತಕ್ಕೆ ಕಾಂಗ್ರೆಸ್ ಕಂಗಾಲು?

ದೋಸ್ತಿಗಳ ಮಧ್ಯೆ ಶುರುವಾಯ್ತು ರಾಜಕೀಯ ಲೆಕ್ಕಾಚಾರ!
ಹೌದು.. ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಇದೇ ವೇಳೆ ಪ್ರಸಕ್ತ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಚರ್ಚೆ ಮಾಡಿದ್ದಾರೆ. ಸೈಲೆಂಟ್ ಆಗಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಯಾವಾಗ ಪರಿಷತ್ನ ನಾಲ್ಕು ಕ್ಷೇತ್ರಗಳಲ್ಲೂ ಎನ್ಡಿಎ ಗೆಲ್ಲುತ್ತಿದ್ದಂತೆಯೇ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಬಿಎಸ್ವೈ ಪುಲ್ ಖುಷ್ ಆಗಿದ್ದು, ಇದೇ ಖುಷಿಯಲ್ಲಿ ಪುತ್ರನಿಗೆ ಮತ್ತಷ್ಟು ಬೂಸ್ಟ್ ನೀಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಿತ್ರ ಪಕ್ಷದ ಮುಖ್ಯಸ್ಥ ದೇವೇಗೌಡ ಅವರನ್ನು ಭೇಟಿ ಮಾಡಿ ರಾಜಕೀಯ ಆಗು ಹೋಗುಗಳ ಬಗ್ಗೆ ಚರ್ಚಿಸಿದ್ದಾರೆ.
ವಿಜಯೇಂದ್ರ ವಿರೋಧಿ ಬಣವೇ ಸೃಷ್ಟಿ
ಬಿಜೆಪಿಯಲ್ಲೇ ಕೆಲವರು ವಿಜಯೇಂದ್ರ ಅವರನ್ನು ಮುಂದುವರಿಸಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಪಕ್ಷದಲ್ಲೇ ವಿಜಯೇಂದ್ರ ವಿರೋಧಿ ಬಣವೇ ಸೃಷ್ಟಿಯಾಗಿದೆ.
ಇನ್ನೊಂದೆಡೆ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಇದೆ. ಹೀಗಾಗಿ ಮುಂದೆ ಏನೆಲ್ಲಾ ಬದಲಾವಣೆ ಆಗುತ್ತೋ ಎನ್ನುವ ದೃಷ್ಟಿಯಿಂದ ಮುಂಜಾಗ್ರತಾವಾಗಿ ಈಗಿನಿಂದಲೇ ಮಿತ್ರ ಪಕ್ಷದ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವ ಪಯತ್ನ ಇದಾಗಿದೆ ಎನ್ನಬಹುದು.

MUST WATCH : ಉತ್ತರಾಖಂಡ್ ದುರಂತಕ್ಕೆ CM DKS ಸಂತಾಪ… ಈ ದುರಂತ ರಾಜ್ಯಕ್ಕೆ ದೊಡ್ಡ ಆಘಾತ.!



