
ಬೀದರ್ನ 6 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟ್? BJP ಹೊಡೆತಕ್ಕೆ ಕಾಂಗ್ರೆಸ್ ಕಂಗಾಲಾಗುತ್ತಾ?
2028ರಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುವವರು ಯಾರು?, ಮತ್ತೆ ವಿಧಾನಸೌಧ ಮೇಲೆ ಹಾರಲಿದ್ಯಾ ಕಾಂಗ್ರೆಸ್ ಧ್ವಜ?, ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ-ಜೆಡಿಎಸ್ ಹೊಸ ಲೆಕ್ಕಾಚಾರವೇನು? ಗೊತ್ತಾ?
ಬೀದರ್ನಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲ ಹೋರಾಟ ಫಿಕ್ಸ್
ರಾಜ್ಯ ರಾಜಕಾರಣದಲ್ಲಿ 2028 ವಿಧಾನಸಭಾ ಚುನಾವಣೆ ಮೆಗಾ ಸರ್ವೆ ಮಾಡಲಾಗಿದ್ದು, ಬಸವನಾಡು ಬೀದರ್ನಲ್ಲಿ ಹೇಗಿದೆ ಗೊತ್ತಾ ಮತದಾರರ ಮನದಾಳದ ಮಾತು, ಬಾರ್ ಡೇಟಾ – ವೋಟ್ಇಂಡಿಯಾ ವರದಿ ಪ್ರಕಾರ ಬೀದರ್ ಜಿಲ್ಲೆಯ ಆರು ಕ್ಷೇತ್ರದಲ್ಲಿ ಹೇಗಿದೆ ಗೊತ್ತಾ ಚುನಾವಣೆ ಟ್ರೆಂಡ್? 2028ಕ್ಕೆ ಬೀದರ್ನಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲ ಹೋರಾಟ ಫಿಕ್ಸ್ ಎಂದು ವರದಿ ಹೇಳ್ತಿದೆ.
READ THIS : ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತೀವ್ರ ಮುಖಭಂಗ!

ಬೀದರ್ನ ಆರು ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟ್?
ಆರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ಗೆ ಮೂರು ಸ್ಥಾನ, ಬಿಜೆಪಿಗೆ ಮೂರು ಸ್ಥಾನ ಎಂದ ಸರ್ವೆಯಲ್ಲಿ ಪತ್ತೆಯಾಗಿದೆ. ಭಾಲ್ಕಿ ಕ್ಷೇತ್ರದಲ್ಲಿ ಸಚಿವ ಈಶ್ವರ್ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲ್ತಾರಂತೆ, ಆದೇರೀತಿ ಸೋದರ ಸಂಬಂಧಿ ಸಾಂಪ್ರದಾಯಿಕ ಎದುರಾಳಿ ಪ್ರಕಾಶ್ ಖಂಡ್ರೆ ಸ್ಪರ್ಧೆ ಮಾಡಿದ್ರೆ, ಐದನೇ ಬಾರಿ ಸೋಲೋದು ಫಿಕ್ಸ್ ಎನ್ನಲಾಗ್ತಿದೆ. ಬೀದರ್ ಕ್ಷೇತ್ರದಲ್ಲಿ ಮತ್ತೆ ಮಾಜಿ ಸಚಿವ ರಹೀಂ ಖಾನ್ ಗೆಲುವು ಫಿಕ್ಸ್ ಎನ್ನಲಾಗಿದೆ.
ಬಿಜೆಪಿಯಿಂದ ಸೂರ್ಯಕಾಂತ್ ನಾಗಮಾರಪ್ಪಿ ಮೂರನೇ ಬಾರಿ ಎದುರಾಳಿಯಾಗುವ ಸಾಧ್ಯತೆ ಇದೆ. ಇನ್ನೂ ಹುಮ್ನಾಬಾದ್ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಗೆಲ್ತಾರಂತೆ, ಬಿಜೆಪಿಯ ಹಾಲಿ ಶಾಸಕ ಸಿದ್ದು ಪಾಟೀಲ್ಗೆ ಸೋಲು ಫಿಕ್ಸ್ ಎನ್ನಲಾಗಿದೆ. ಬೀದರ್ ದಕ್ಷೀಣದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ 2028ಕ್ಕೂ ಗೆಲುವು ಕಷ್ಟ ಕಷ್ಟ ಎನ್ನಲಾಗಿದೆ. ಇನ್ನೂ ಬಿಜೆಪಿಯ ಹಾಲಿ ಶಾಸಕ ಶೈಲೇಂದ್ರ ಬೆಲ್ದಾಳೆ ಅತೀ ಕಡಿಮೆ ಅಂತರದಲ್ಲಿ ಗೆಲ್ಲುವ ಸಾಧ್ಯತೆಯಿದ್ಯಂತೆ.

ಕಾಂಗ್ರೆಸ್ನಿಂದ ಯಾರಾಗ್ತಾರೆ ಅಭ್ಯರ್ಥಿಯಾಗ್ತಾರೆ ಎಂ
ಇನ್ನೂ ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ನಾರಾಯಣ ರಾವ್ ಪತ್ನಿ ಇಲ್ಲ ವಿಜಯ್ ಸಿಂಗ್ ಸ್ಪರ್ಧೆ ಫಿಕ್ಸ್ ಎನ್ನಲಾಗಿದೆ. ಇನ್ನೂ ಬಿಜೆಪಿಯ ಹಾಲಿ ಶಾಸಕ ಶರಣುಸಲಗಾರ ಮತ್ತೊಮ್ಮೆ ಅದೃಷ್ಠ ಪರೀಕ್ಷೆಗೆ ಇಳಿಯಲಿದ್ದು ಅವರೆ ಗೆಲ್ಲುವ ಸಾಧ್ಯತೆಯಿದ್ಯಂತೆ.
ಇನ್ನೂ ಔರಾದ್ ಮಾಜಿ ಸಚಿವ ಪ್ರಭು ಚೌವ್ಹಾಣ್ ಗೆಲುವು ಫಿಕ್ಸ್ ಎನ್ನಲಾಗಿದೆ. ಇನ್ನೂ ಕಾಂಗ್ರೆಸ್ನಿಂದ ಯಾರು ಅಭ್ಯರ್ಥಿಯಾಗ್ತಾರೆ ಎಂಬುದೇ ಕದನ ಕುತೂಹಲವಾಗಿದೆ.
ಕಳೆದ ಬಾರಿ ಭೀಮ್ ಸೇನ್ ರಾವ್ ಸಿಂಧೆ ಸ್ಪರ್ಧೆ ಮಾಡಿದ್ರು. ಅವರಿಗೆ ಟಿಕೆಟ್ ಪಕ್ಕಾ ಎಂದ್ರು ಲಾಸ್ಟ್ ಮೂಮೆಂಟ್ ಚೇಂಜ್ ಆಗಬಹುದು.
MUST WATCH : ಕಾಂಗ್ರೆಸ್ ಕಚ್ಚಾಟ ನೋಡಿದ್ರೆ – ಏನ್ ಬೇಕಾದ್ರೂ ಆಗಬಹುದು..?




