MADHUSWAMY ಸೋಲಿನ ಹಿಂದಿನ ಅಸಲಿ ಕಹಾನಿ! ಮೂರೂವರೆ ವರ್ಷದ ಬಳಿಕ ಬಯಲಾಯ್ತು ಸ್ಫೋಟಕ ವಿಚಾರ!

2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿಗೆ ಸೋಲಾಗಿತ್ತು. ಜೆಡಿಎಸ್ನ ಸುರೇಶ್ ಬಾಬು ಗೆದ್ದಿದ್ರು. ಇನ್ನು ಕ್ಷೇತ್ರದಲ್ಲಿ ಪ್ರಭಾವಿ ನಾಯಕ, ಸಚಿವರಾಗಿದ್ರು ಸೋತಿದ್ದು ಯಾಕೆ ಅನ್ನೋ ಚರ್ಚೆ ಆಗಲೂ ಜೋರಾಗಿತ್ತು. ಆದ್ರೆ ಇದೀಗ ಮೂರೂವರೆ ವರ್ಷದ ಬಳಿಕ ಮಾಧುಸ್ವಾಮಿ ಬಾಯಲ್ಲೇ ಅಸಲಿ ರಾಜಕೀಯ ಕಹಾನಿ ಹೊರಬಂದಿದೆ. ಅಷ್ಟಕ್ಕೂ ಅಂದು ಚಿಕ್ಕನಾಯಕನಹಳ್ಳಿಯಲ್ಲಿ ಆಗಿದ್ದೇನು?
ಮಾಧುಸ್ವಾಮಿ ಸೋಲಿಗೆ ಕಾರಣವೇನು?
ಅಂದು ಚಿಕ್ಕನಾಯಕನಹಳ್ಳಿ ಚುನಾವಣೆಯಲ್ಲಿ ತ್ರಿಕೋನ ಫೈಟ್ ಇತ್ತು. ಜೆಡಿಎಸ್ನಿಂದ ಸಿ.ಬಿ. ಸುರೇಶ್ ಬಾಬು, ಬಿಜೆಪಿಯಿಂದ ಜೆ.ಸಿ. ಮಾಧುಸ್ವಾಮಿ, ಕಾಂಗ್ರೆಸ್ನಿಂದ ಕೆ.ಎಸ್. ಕಿರಣ್ ಕುಮಾರ್ ಅಖಾಡದಲ್ಲಿದ್ರು. ಫಲಿತಾಂಶ ಬಂದಾಗ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ಗೆದ್ದು ಬೀಗಿದ್ರು. ಮಾಧುಸ್ವಾಮಿ ಸೋಲಿನ ಆಘಾತ ಅನುಭವಿಸಿದ್ರು.
ಇನ್ನು ಸುರೇಶ್ ಬಾಬುಗೆ ಬಿದ್ದಿದ್ದು 71,036 ಮತ. ಮಾಧುಸ್ವಾಮಿ ಪಡೆದಿದ್ದು 60,994 ಮತ. ಇಬ್ಬರ ಮಧ್ಯೆ ಇರೋ ಅಂತರ ಬರೋಬ್ಬರಿ 10,042 ಮತಗಳು. ಕಾಂಗ್ರೆಸ್ನ ಕಿರಣ್ ಕುಮಾರ್ 50,996 ಮತಗಳನ್ನ ಪಡೆದಿದ್ರು. ಹೀಗಾಗಿ ಮಾಧುಸ್ವಾಮಿ ಸೋಲಿಗೆ ಜೆಡಿಎಸ್ ಗೆಲುವೇ ಕಾರಣ ಅಂತ ಎಲ್ಲರೂ ಅಂದುಕೊಂಡಿದ್ರು.
READ THIS : ಕರ್ನಾಟಕ MLC ಚುನಾವಣೆ ಫಲಿತಾಂಶ – 4 ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು?

ಆದ್ರೆ ಈಗ ಮಾಧುಸ್ವಾಮಿ ಹೇಳ್ತಿರೋ ಕಹಾನಿಯೇ ಬೇರೆ!
ಚುನಾವಣೆಗೂ ಮುನ್ನವೇ ಕಾಂಗ್ರೆಸ್ನಿಂದ ಮಾಧುಸ್ವಾಮಿ ಅವರಿಗೆ ಆಹ್ವಾನ ಬಂದಿತ್ತಂತೆ. ಅದು ಸಾಮಾನ್ಯ ಆಹ್ವಾನ ಅಲ್ಲ, ಡಿಕೆ ಬ್ರದರ್ಸ್ ಕಡೆಯಿಂದಲೇ ಕಾಂಗ್ರೆಸ್ಗೆ ಸೆಳೆಯುವ ಪ್ರಯತ್ನ ನಡೆದಿತ್ತಂತೆ. ಆದ್ರೆ ಮಾಧುಸ್ವಾಮಿ ಮಾತ್ರ ಕಾಂಗ್ರೆಸ್ ಸೇರುವ ಪ್ರಸ್ತಾಪಕ್ಕೆ ಒಪ್ಪಲಿಲ್ಲ ಅಂತ ಹೇಳಿದ್ದಾರೆ.
ಇಲ್ಲಿಂದಲೇ ಶುರುವಾಯ್ತಾ ಅಸಲಿ ರಾಜಕೀಯ ಆಟ?
ಇಲ್ಲಿಂದಲೇ ಶುರುವಾಯ್ತಾ ಅಸಲಿ ರಾಜಕೀಯ ಆಟ? ಕಾಂಗ್ರೆಸ್ಗೆ ಬರಲು ಒಪ್ಪದಿದ್ದಕ್ಕೆ ಮಾಧುಸ್ವಾಮಿ ಅವರನ್ನು ಸೋಲಿಸಲೇಬೇಕು ಅನ್ನೋ ಲೆಕ್ಕಾಚಾರ ಶುರುವಾಗಿತ್ತಂತೆ.? ಡಿಕೆ ಬ್ರದರ್ಸ್ ಅದಕ್ಕಾಗಿ ಪ್ರತ್ಯೇಕ ತಂತ್ರ ರೂಪಿಸಿ, ಚುನಾವಣೆಗೆ ಫಂಡಿಂಗ್ ಮಾಡಿದ್ರು ಅಂತ ಮಾಧುಸ್ವಾಮಿ ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದಾರೆ.
ಮಾಧುಸ್ವಾಮಿ ಸೋಲಿಸಲು ಪಣತೊಟ್ಟಿದ್ರಾ ಡಿಕೆ ಬ್ರದರ್ಸ್?
ಹಾಗಾದ್ರೆ ಮಾಧುಸ್ವಾಮಿ ಅವರನ್ನು ಸೋಲಿಸಲು ಡಿಕೆ ಬ್ರದರ್ಸ್ ಯಾಕೆ ಮುಂದಾಗಿದ್ರು? ಕಾಂಗ್ರೆಸ್ಗೆ ಬರುವಂತೆ ಆಹ್ವಾನ ಕೊಟ್ಟಿದ್ದು ಯಾಕೆ? ಆ ಆಹ್ವಾನ ತಿರಸ್ಕರಿಸಿದ್ದೇ ಸೋಲಿಗೆ ಕಾರಣ ಆಯ್ತಾ? ಅಥವಾ ಚುನಾವಣೆಯ ಸ್ಥಳೀಯ ರಾಜಕೀಯ ಲೆಕ್ಕಾಚಾರವೇ ಬೇರೆಯಾಗಿತ್ತಾ? ಅನ್ನೋದು ಪ್ರಶ್ನೆ.
ಇನ್ನು ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಅಂದ್ರೆ, ಮಾಧುಸ್ವಾಮಿ ಸೋತಿದ್ದು ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ವಿರುದ್ಧ. ಆದ್ರೆ ಈಗ ಅವರ ಸೋಲಿನ ಹಿಂದಿನ ರಾಜಕೀಯ ಕಹಾನಿಯಲ್ಲಿ ಕೇಳಿಬರ್ತಿರೋದು ಡಿಕೆ ಬ್ರದರ್ಸ್ ಹೆಸರು. ಅಂದರೆ ಚುನಾವಣೆಯ ಅಖಾಡದಲ್ಲಿ ಕಾಣಿಸಿಕೊಂಡಿದ್ದ ಫೈಟ್ ಒಂದಾದ್ರೆ, ತೆರೆಮರೆಯಲ್ಲಿ ನಡೆದಿದ್ದು ಮತ್ತೊಂದು ಆಟ.

ಚಿಕ್ಕನಾಯಕನಹಳ್ಳಿ ರಾಜಕೀಯದಲ್ಲಿ ಮತ್ತೆ ಸಂಚಲನ
ಒಟ್ನಲ್ಲಿ,ಮಾಧುಸ್ವಾಮಿ ಅವರ ಈ ಹೇಳಿಕೆ ಈಗ ಚಿಕ್ಕನಾಯಕನಹಳ್ಳಿ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದ್ದು, ಅಂದು ಸೋಲಿನ ಹಿಂದಿದ್ದ ಅಸಲಿ ಲೆಕ್ಕಾಚಾರ ಏನು? ಡಿಕೆ ಬ್ರದರ್ಸ್ ಪಾತ್ರ ಇತ್ತಾ? ಅಥವಾ ಇದು ಮಾಧುಸ್ವಾಮಿ ಅವರ ರಾಜಕೀಯ ಆರೋಪವಷ್ಟೇನಾ? ಮೂರೂವರೆ ವರ್ಷದ ಬಳಿಕ ಹೊರಬಂದ ಈ ಸೋಲಿನ ಕಹಾನಿ ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ.
MUST WATCH : ಉತ್ತರಾಖಂಡ್ ದುರಂತಕ್ಕೆ CM DKS ಸಂತಾಪ… ಈ ದುರಂತ ರಾಜ್ಯಕ್ಕೆ ದೊಡ್ಡ ಆಘಾತ.!




