
PAVAGADA : ಜಿ.ಪಂ ಕ್ಷೇತ್ರಗಳ ವಾರ್? ಮೀಸಲಾತಿ ಹಂಚಿಕೆಗೆ ಬಂಡಾಯ?!
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತ್ತೆ ರಾಜಕೀಯ ಕಾವು ಶುರುವಾಗಿದ್ದು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಹಾಗೂ ಟಿಕೆಟ್ ಆಕಾಂಕ್ಷಿಗಳು ಸದ್ದಿಲ್ಲದೆ ತಯಾರಿ ನಡೆಸ್ತಿದ್ದಾರೆ. ಇದರ ನಡುವೆ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿ ಬದಲಾವಣೆ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗಿದ್ದು, ಪಾವಗಡ ತಾಲೂಕಿನಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದ್ರಲ್ಲೂ 2015ರ ಮೀಸಲಾತಿಗೂ 2026ರ ಕರಡು ಮೀಸಲಾತಿಗೂ ಹೋಲಿಕೆ ಮಾಡಿದ್ರೆ ಕೆಲವು ಕ್ಷೇತ್ರಗಳಲ್ಲಿ ಭಾರೀ ಬದಲಾವಣೆಯಾಗಿದೆ. ಹಾಗಾದ್ರೆ ಪಾವಗಡದ ಯಾವ ಕ್ಷೇತ್ರದಲ್ಲಿ ಯಾವ ಮೀಸಲಾತಿ ಇದೆ? ಯಾರಿಗೆ ಲಾಭ? ಯಾರಿಗೆ ನಷ್ಟ? ನೋಡೋಣ.

ಬ್ಯಾಡನೂರು ಕ್ಷೇತ್ರ
ಮೊದಲಿಗೆ ಬ್ಯಾಡನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಲೆಕ್ಕಾಚಾರ ನೋಡೋದಾದ್ರೆ, 2015ರಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರ ಇದೀಗ 2026ರ ಕರಡು ಮೀಸಲಾತಿಯಲ್ಲಿ ಬಿಸಿಎಂ ಎ ವರ್ಗಕ್ಕೆ ನಿಗದಿಯಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಬಿಸಿಎಂ ಎ ವರ್ಗದ ಅಭ್ಯರ್ಥಿಗಳಿಗೆ ಚುನಾವಣಾ ಅಖಾಡಕ್ಕಿಳಿಯಲು ಅವಕಾಶ ಸಿಕ್ಕಂತಾಗಿದೆ.
ವರ್ಷ ಮೀಸಲಾತಿ
2015 ಸಾಮಾನ್ಯ (ಮಹಿಳೆ)
2026 ಬಿಸಿಎಂ ಎ
ಕೋಟಗುಡ್ಡ ಕ್ಷೇತ್ರ
ಇನ್ನು ಕೋಟಗುಡ್ಡ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲೂ ಮೀಸಲಾತಿ ಬದಲಾವಣೆಯಾಗಿದೆ. 2015ರಲ್ಲಿ ಬಿಸಿಎಂ ಎಗೆ ಮೀಸಲಾಗಿದ್ದ ಕ್ಷೇತ್ರವನ್ನು ಇದೀಗ ಎಸ್ಟಿ ವರ್ಗಕ್ಕೆ ಮೀಸಲಿಡಲಾಗಿದೆ. ಹೀಗಾಗಿ ಹಿಂದಿನ ಮೀಸಲಾತಿಯ ಆಧಾರದಲ್ಲಿ ಚುನಾವಣಾ ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷಿಗಳ ಲೆಕ್ಕಾಚಾರ ಬದಲಾಗುವ ಸಾಧ್ಯತೆಯಿದೆ.
ವರ್ಷ ಮೀಸಲಾತಿ
2015 ಬಿಸಿಎಂ ಎ
2026 ಎಸ್ಟಿ
READ THIS : 2028ರ ವಿಧಾನಸಭಾ ಚುನಾವಣೆಗೆ ತುಮಕೂರಲ್ಲಿ ಹೊಸ ಲೆಕ್ಕಾಚಾರ!
ಮಂಗಳವಾಡ ಕ್ಷೇತ್ರ
ಇನ್ನು ಮಂಗಳವಾಡ ಕ್ಷೇತ್ರದಲ್ಲೂ ಮೀಸಲಾತಿ ಬದಲಾವಣೆಯಾಗಿದೆ. 2015ರಲ್ಲಿ ಎಸ್ಸಿ ವರ್ಗಕ್ಕೆ ಮೀಸಲಾಗಿದ್ದ ಕ್ಷೇತ್ರವನ್ನು 2026ರಲ್ಲಿ ಬಿಸಿಎಂ ಬಿ ವರ್ಗಕ್ಕೆ ನಿಗದಿಪಡಿಸಲಾಗಿದೆ. ಇದರಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ವರ್ಷ ಮೀಸಲಾತಿ
2015 ಎಸ್ಸಿ
2026 ಬಿಸಿಎಂ ಬಿ

ನಾಗಲಮಡಿಕೆ ಕ್ಷೇತ್ರ
ನಾಗಲಮಡಿಕೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 2015ರಲ್ಲೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಈ ಕ್ಷೇತ್ರ 2026ರ ಕರಡು ಮೀಸಲಾತಿಯಲ್ಲೂ ಸಾಮಾನ್ಯ ವರ್ಗಕ್ಕೇ ಮುಂದುವರಿದಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಹಿಂದಿನ ರಾಜಕೀಯ ಆಕಾಂಕ್ಷಿಗಳು ತಮ್ಮ ಸ್ಪರ್ಧೆಯ ಲೆಕ್ಕಾಚಾರವನ್ನು ಮುಂದುವರಿಸಬಹುದಾಗಿದೆ.
ವರ್ಷ ಮೀಸಲಾತಿ
2015 ಸಾಮಾನ್ಯ
2026 ಸಾಮಾನ್ಯ
ವೆಂಕಟಾಪುರ ಕ್ಷೇತ್ರ
ಇನ್ನು ವೆಂಕಟಾಪುರ ಕ್ಷೇತ್ರದ ಮೀಸಲಾತಿಯಲ್ಲೂ ಬದಲಾವಣೆ ಕಂಡುಬಂದಿದೆ. 2015ರಲ್ಲಿ ಎಸ್ಸಿ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರವನ್ನು ಇದೀಗ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಹೀಗಾಗಿ ಮಹಿಳಾ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಮುಂದುವರಿದಿದ್ದರೂ, ಮೀಸಲಾತಿಯ ವರ್ಗದಲ್ಲಿ ಬದಲಾವಣೆಯಾಗಿದೆ.
ವರ್ಷ ಮೀಸಲಾತಿ
2015 ಎಸ್ಸಿ (ಮಹಿಳೆ)
2026 ಸಾಮಾನ್ಯ (ಮಹಿಳೆ)
ಕೊನೆದಾಗಿ ವೈ.ಎಸ್. ಹೊಸಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ 2015ರಲ್ಲಿ ಎಸ್ಟಿ ಮಹಿಳೆಗೆ ಮೀಸಲಾತಿ ನೀಡಲಾಗಿತ್ತು. ಆದ್ರೆ ಈ ಬಾರಿ ಎಸ್ಸಿ ಮಹಿಳೆಗೆ ಮೀಸಲಿಡಲಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಆಯ್ಕೆ ಮತ್ತು ರಾಜಕೀಯ ಲೆಕ್ಕಾಚಾರ ಬದಲಾಗುವ ಸಾಧ್ಯತೆಯಿದೆ.
Y.S ಹೊಸಕೋಟೆ ಕ್ಷೇತ್ರ
ವರ್ಷ ಮೀಸಲಾತಿ
2015 ಎಸ್ಟಿ (ಮಹಿಳೆ)
2026 ಎಸ್ಸಿ (ಮಹಿಳೆ)

ಒಟ್ನಲ್ಲಿ, ಪಾವಗಡ ತಾಲೂಕಿನ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾವಣೆಯಾಗಿದ್ದು, ನಾಗಲಮಡಿಕೆ ಕ್ಷೇತ್ರದಲ್ಲಿ ಮಾತ್ರ ಹಿಂದಿನ ಮೀಸಲಾತಿಯೇ ಮುಂದುವರಿದಿದೆ. ಈ ಬದಲಾವಣೆ ಸ್ಥಳೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಮೀಸಲಾತಿ ಬದಲಾವಣೆಯಿಂದ ಕೆಲವರಿಗೆ ಸ್ಪರ್ಧೆಗೆ ಹೊಸ ಅವಕಾಶ ಸಿಕ್ಕಿದ್ರೆ, ಇನ್ನೂ ಕೆಲವರಿಗೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸುವಂತಾಗಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಯಾವ ಪಕ್ಷದಿಂದ ಕಣಕ್ಕಿಳಿಯಬೇಕು? ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು? ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಮೀಸಲಾತಿ ಆಕಾಂಕ್ಷಿಗಳ ಬಂಡಾಯಕ್ಕೆ ಕಾರಣವಾಗುತ್ತಾ? ಅಥವಾ ಹೊಸ ಮುಖಗಳಿಗೆ ರಾಜಕೀಯ ಪ್ರವೇಶದ ವೇದಿಕೆಯಾಗುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.
MUST WATCH : ಟಗರು ಸೈಲೆಂಟ್.. ಗೌಡ್ರು-ರಾಜಾಹುಲಿ ವೈಲೆಂಟ್! – ಪುತ್ರ ವ್ಯಾಮೋಹ.. ಒಂದಾದ ರಾಜಕೀಯ ವೈರಿಗಳು!




