RCB vs GT : IPL 2026 ಟೂರ್ನಿಯು ಇದೀಗ ಅತ್ಯಂತ ರೋಮಾಂಚಕ ಹಾಗೂ ನಿರ್ಣಾಯಕ ಘಟ್ಟವನ್ನು ತಲುಪಿದ್ದು, ಪ್ಲೇ ಆಫ್ ಪಂದ್ಯಗಳಿಗೆ ಕೌಂಟ್ಡೌನ್ ಆರಂಭವಾಗಿದೆ.

ಇಂದು ಧರ್ಮಶಾಲಾದಲ್ಲಿ ನಡೆಯಲಿರುವ ಐಪಿಎಲ್ 2026ರ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಮುಖಾಮುಖಿಯಾಗಲಿವೆ. ಆದರೆ ಈ ಹೈವೋಲ್ಟೇಜ್ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.
ಧರ್ಮಶಾಲಾದಲ್ಲಿ ಮೋಡ ಕವಿದ ವಾತಾವರಣ
ಹವಾಮಾನ ವರದಿ ಪ್ರಕಾರ, ಧರ್ಮಶಾಲಾದಲ್ಲಿ 14ರಿಂದ 25 ಶೇಕಡಾ ಮಟ್ಟಿಗೆ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಸುಮಾರು 80 ಶೇಕಡಾ ಇದೆ ಎಂದು ಅಂದಾಜಿಸಲಾಗಿದೆ. ಇದರಿಂದ RCB vs GTಪಂದ್ಯ ನಡೆಯುವ ಕುರಿತು ಅನುಮಾನಗಳು ಮೂಡಿವೆ.

ಪಂದ್ಯ ರದ್ದಾದರೆ RCB ಗೆ ಲಾಭ
ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ, ಲೀಗ್ ಹಂತದಲ್ಲಿ ಉತ್ತಮ ರನ್ರೇಟ್ ಹೊಂದಿರುವ ಆರ್ಸಿಬಿಗೆ ಲಾಭವಾಗಲಿದೆ. ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ಗಿಂತ ಮೇಲಿರುವ ಕಾರಣ ಆರ್ಸಿಬಿ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.
ಐಪಿಎಲ್ ನಿಯಮಗಳ ಪ್ರಕಾರ, ಕ್ವಾಲಿಫೈಯರ್-1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್-2 ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ.
ಹೀಗಾಗಿ ಪಂದ್ಯ ನಡೆಯದ ಪರಿಸ್ಥಿತಿಯಲ್ಲಿ ಲೀಗ್ ಹಂತದ ಅಂಕಪಟ್ಟಿಯ ಆಧಾರದ ಮೇಲೆ ಮುಂದಿನ ಹಂತಕ್ಕೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನು ಓದಿ : ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ RCB ಸಂಭಾವ್ಯ ಪ್ಲೇಯಿಂಗ್ XI

ಸೋತ ತಂಡಕ್ಕೂ ಇನ್ನೊಂದು ಅವಕಾಶ
ಐಪಿಎಲ್ ಮಾದರಿಯಂತೆ, ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಕ್ವಾಲಿಫೈಯರ್-1ಗೆ ಅರ್ಹತೆ ಪಡೆಯುತ್ತವೆ.
ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ. ಆದರೆ ಸೋತ ತಂಡಕ್ಕೆ ಕ್ವಾಲಿಫೈಯರ್-2 ಮೂಲಕ ಮತ್ತೊಮ್ಮೆ ಫೈನಲ್ ಪ್ರವೇಶಿಸಲು ಅವಕಾಶ ಸಿಗಲಿದೆ.
ಸೂಪರ್ ಓವರ್ ಸಾಧ್ಯತೆ
ಮಳೆಯಿಂದ ಪಂದ್ಯ ವ್ಯತ್ಯಯವಾದರೆ ಮತ್ತು ಸಂಪೂರ್ಣ ಇನ್ನಿಂಗ್ಸ್ ನಡೆಸಲು ಸಾಧ್ಯವಾಗದಿದ್ದರೆ, ಐಪಿಎಲ್ ನಿಯಮಗಳ ಪ್ರಕಾರ ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸುವ ಸಾಧ್ಯತೆಯೂ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




