ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳು ನಡುವೆ ನಡೆದ ಕೋಳಿ ಪಂದ್ಯ ಗಲಾಟೆಗೆ ಮೂವರು ಚಾಕು ಇರಿತಕ್ಕೆ ಒಳಗಾಗಿದ್ರು. ಇದ್ರಲ್ಲಿ ಅಣ್ಣ-ತಮ್ಮ ಭೀಕರವಾಗಿ ಕೊಲೆಯಾದ್ರೆ, ಮತ್ತೋರ್ವ ಸಹೋದರನ ಸ್ಥಿತಿ ಚಿಂತಾಜನಕವಾಗಿದ್ದು ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಡಬಲ್ ಮರ್ಡರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಚಿಂತಾಮಣಿ ಜನತೆ ಬೆಚ್ಚಿ ಬಿದ್ದಿದ್ದಾರೆ. ಬರ್ಬರ ಹತ್ಯೆಯ ಹಿಂದೆ ಕೊಲೆಪಾತಕರು ಬಾಲಕಿಯರನ್ನು ಮಂಚಕ್ಕೆ ಕರೆದಿದ್ದರು, ಇದಕ್ಕೆ ಒಪ್ಪದಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಕೊಲೆಯಾದ ಅಣ್ಣ- ತಮ್ಮಂದಿರ ಸಹೋದರಿಯರು ಬಯಲು ಮಾಡಿದ್ದಾರೆ.
ಕಳೆದ ಏಪ್ರಿಲ್ 13ರಂದು ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಅಣ್ಣ- ತಮ್ಮನ ಜೋಡಿ ಕೊಲೆಯಾಗಿದ್ದು, ಕೊಲೆ ಕೇಸ್‌ನಲ್ಲಿ 12 ಜನರ ಮೇಲೆ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ರೆ, ಇತ್ತ ಕೊಲೆ ಕೇಸ್‌ಗೆ ಅಕ್ಕ- ತಂಗಿಯರು ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಹೌದು ಪೊಲೀಸರು ಡಬಲ್ ಮರ್ಡರ್ ವಿಚಾರದಲ್ಲಿ ಈಗಾಗಲೇ 5 ಜನರನ್ನು ಬಂಧಿಸಿದ್ದು ಉಳಿದ ಐದು ಜನರ ಬಂಧನಕ್ಕೆ ಬಲೆ ಬೀಸಿದ್ರು. ಈ ನಡುವೆ ದೂರಿನಲ್ಲಿದ್ದ ಇಬ್ಬರು ಆರೋಪಿಗಳ ಹೆಸರನ್ನು ಪ್ರಕರಣದಿಂದ ಪೊಲೀಸರು ತೆಗೆದುಹಾಕಿದ್ದಾರೆ. ಇತ್ತ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಕುರಿತು ಅಕ್ಕ-ತಂಗಿಯರು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಕೊಲೆ ಹಿಂದೆ ಇದೇ ಕಾರಣ ಇರಬಹುದಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ....
ಕೊಲೆ ಪ್ರಕರಣ ಸಂಬಂಧ ಕೊಲೆಯಾದ ಸಹೋದರಿಯರು ಪ್ರತಿಕಾಗೋಷ್ಠಿ ನಡೆಸುವ ಮೂಲಕ ಕೊಲೆ ಅಸಲಿ ಸತ್ಯ ಬಿಚ್ಚಿಟ್ಟಿದ್ದು, ಡಬಲ್ ಮರ್ಡರ್ ನಡೆಯುವುದಕ್ಕೂ ಮುನ್ನ 12 ಜನರ ಆರೋಪಿಗಳ ಗುಂಪಿನಲ್ಲಿ 5 ಜನರು ಬಾಲಕಿಯರನ್ನು ಮಂಚಕ್ಕೆ ಕರೆದಿದ್ದು, ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ರು ಎಂಬ ಸ್ಫೋಟಕ ಸತ್ಯವನ್ನು ಸಹೋದರಿಯರು ಹೊರಹಾಕಿದ್ದಾರೆ. ಇನ್ನು ಬಾಲಕಿಯರಿಗೆ ಕೊಲೆಪಾತಕರು ಹಲವು ಬಾರಿ ಬೆದರಿಕೆ ಹಾಕಿದ್ದು, ಈ ವಿಚಾರವನ್ನು ತಂದೆಯಿಲ್ಲದ ಬಾಲಕಿಯರು ತಮ್ಮ ಮಾವ ಲಿಂಗಮಯ್ಯ ಬಳಿ ಹೇಳಿಕೊಂಡಿದ್ದಾರೆ. ತದನಂತರ ಲಿಂಗಮಯ್ಯ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಗ್ಯಾಂಗ್ ಗೆ ಎಚ್ಚರಿಕೆ ನೀಡಿ ವಾಪಸ್ ಆಗಿದ್ರಂತೆ..
ಅದ್ಯಾವಾಗ ಸಹೋದರಿಯರ ಮಾವ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಕ್ಕೆ ಕೆರಳಿದ ಕಿರಾತಕರು ಮನೆಗೆ ನುಗ್ಗಿ ಬಾಲಕಿಯರ ಮುಂದೆಯೇ ಇಬ್ಬರನ್ನು ದಾರುಣವಾಗಿ ಕೊಚ್ಚಿಕೊಲೆ ಮಾಡಿದ್ದು, ಮತ್ತೋರ್ವ ಯುವಕನಿಗೆ ಗಂಭೀರವಾಗಿ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ರು. ಮೊದಲಿಗೆ ಹಣದ ವಿಚಾರವಾಗಿ ಕೊಲೆ ನಡೆದಿರಬಹುದು ಎಂದು ಭಾವಿಸಲಾಗಿತ್ತು, ಈಗ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು ಆರೋಪಿಗಳು ನೀಡಿದ್ದ ಕಿರುಕುಳ ಬಯಲಾಗಿದೆ.
ಇನ್ನೂ ಡಬಲ್ ಮರ್ಡರ್ ಬಳಿಕ ಕೆಲದಿನಗಳು ಎಸ್ಕೇಪ್ ಆಗಿ ಮತ್ತೆ ರೊಚ್ಚಿಗೆದ್ದ ಆರೋಪಿಗಳು ಬಾಲಕಿಯರನ್ನು ಕರೆದು ನೀವು ಕರೆದ ಕಡೆ ಬರೆದಿದ್ದರೆ ನಿಮ್ಮ ಮನೆಯಲ್ಲಿರೋ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನ್ಯಾಯಕ್ಕಾಗಿ ಹಾಗೂ ಭದ್ರತೆಗಾಗಿ ನೊಂದ ಕುಟುಂಬಸ್ಥರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಪ್ರಗತಿಪರ ಸಂಘಟನೆಗಳ ನೆರವಿನೊಂದಿಗೆ ಸುದ್ದಿಗೋಷ್ಠಿ ನಡೆಸಿ ಸತ್ಯವನ್ನು ಹೊರಹಾಕಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮುದಾಯದ ಮುಖಂಡರು ಆಗ್ರಹಿಸಿದ್ರು.
ಒಟ್ಟಾರೇ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಹೆಣ್ಣುಮಕ್ಕಳಿಗೆ ಈ ಸಮಾಜದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಸದ್ಯ ಈಗಲಾದ್ರು ಪೊಲೀಸರು ಜೋಡಿ ಕೊಲೆ ವಿಚಾರವಾಗಿ ಬಾಲಕಿಯ ದೂರನ್ನು ಪರಿಗಣಿಸಿ, ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಿ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿಕೊಡು ತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ...