ಶಿರಾ:
ಶಿರಾ ತಾಲ್ಲೂಕಿನಸೀಬಿ ಅರಣ್ಯ ಪ್ರದೇಶದಲ್ಲಿ ನಡೆದಿರುವ ಅಕ್ರಮ ಮಂಜೂರಾತಿ ರದ್ದುಪಡಿಸಲು ಮತ್ತು ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿವರ ವಿರುದ್ಧ ಕಾನೂನು ಕ್ರಮಕೈಗೊಂಡು ಅರಣ್ಯ ಭೂಮಿ ರಕ್ಷಿಸುವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಹೌದು, ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ಸೀಬಿ ಅರಣ್ಯ ಪ್ರದೇಶಕ್ಕೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಭೇಟಿ ನೀಡಿ ಮಾತನಾಡಿದ ಅವರು ಈ ಸೀಬಿ ಅರಣ್ಯ ಭೂಮಿಗೆ ಭಾರಿ ಮೌಲ್ಯವಿದೆ. ಆದ್ದರಿಂದ ಭೂಕಬಳಿಕೆದಾರರ ಕಣ್ಣು ಈ ಭೂಮಿಯ ಮೇಲೆ ಬಿದ್ದು ಒತ್ತುವರಿ ಯತ್ನ ನಡೆದಿದೆ. ಆ ಕಾರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರವಹಿಸಬೇಕು. ಈಗಾಗಲೇ ಸ್ಥಳದ ಭೂ ಮಾಲೀಕತ್ವದ ವಿಚಾರ ನ್ಯಾಯಾದಲ್ಲಿದ್ದು, ಯಾವುದೇ ಕಾರಣಕ್ಕೂ ಅತಿಕ್ರಮಣವಾಗದಂತೆ ಎಚ್ಚರವಹಿಸಿ ಎಂದರು.
ಇನ್ನು ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಎಸಿಎಫ್ ಮಲ್ಲಿಕಾರ್ಜುನ್, ವಲಯ ಅರಣ್ಯಾಧಿಕಾರಿ ನವನೀತ್, ಸತೀಶ್, ವಕೀಲ ಸೂರ್ಯ ಮುಕುಂದರಾಜ್, ತಹಶೀಲ್ದಾರ್ ಸಚ್ಚಿದಾನಂದ ಕುಚನೂರು, ಸಿಪಿಐ ರಾಘವೇಂದ್ರ, ಪಿಎಸ್‌ಐ ರವೀಂದ್ರ ಹಾಜರಿದ್ದರು.