ಚಿಕ್ಕಬಳ್ಳಾಪುರ :
ಹಣ, ಜಮೀನು ಅಂದರೆ ಹೆಣನೂ ಬಾಯಿ ಬಿಡೋ ಕಾಲ ಇದು. ಇಂಚು ಜಾಗಕ್ಕಾಗಿ ತನ್ನ ಸ್ವಂತದವರನ್ನೇ ಕೊಲೆ ಮಾಡ್ತಿದ್ದಾರೆ. ಇದೀಗ ಜಮೀನಿಗಾಗಿ ಸ್ವಂತದವರನ್ನೇ ಹೀನಾಯವಾಗಿ ಕೊಚ್ಚಿ ಕೊಲೆ ಮಾಡಿರೋ ದುರ್ಘಟನೆಗೆ ಚಿಕ್ಕಬಳ್ಳಾಪುರ ಸಾಕ್ಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊಲೆ, ಸುಲಿಗೆಗಳಂತಹ ಪ್ರಕರಣಗಳು ಹೆಚ್ಚಾಗ್ತಾ ಇದ್ದು, ಜನರನ್ನು ಭಯ ಬೀಳಿಸುವಂತೆ ಮಾಡ್ತಿದೆ. ದಾಯಾದಿಗಳ ನಡುವೆ ಜಮೀನು ವಿವಾದಕ್ಕೆ ಕಲಹ ಸೃಷ್ಟಿಯಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಜಮೀನು ವಿವಾದದಿಂದಲೇ ವ್ಯಕ್ತಿಯೋರ್ವನನ್ನು ಚಾಕು, ಮಚ್ಚುಗಳಿಂದ ಮನಸ್ಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿರೋ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಿಂದ ಇಡೀ ಚಿಕ್ಕಬಳ್ಳಾಪುರವೇ ಬೆಚ್ಚಿಬೀಳುವಂತೆ ಮಾಡಿದೆ. ಬಾಲಕುಂಟಹಳ್ಳಿ ಮೂಲದ ಸುಮಾರು 60 ವರ್ಷದ ಲಕ್ಷ್ಮೀನರಸಪ್ಪ ಎಂಬಾತನನ್ನು ತನ್ನ ಸಂಬಂಧಿಕರೇ ಕೊಚ್ಚಿ ಕೊಲೆ ಮಾಡಿದ್ದು, ರಕ್ತ ಸಿಕ್ತ ದೇಹ ಹಾಗೂ ಇಡೀ ಮನೆ ತುಂಬಾ ರಕ್ತದ ಕಲೆಗಳು ಅಂಟಿದ್ದು ಅಕ್ಕ ಪಕ್ಕದ ಮನೆಯವರು ಶಾಕ್‌ಗೆ ಒಳಗಾಗಿದ್ದಾರೆ.
ಕೆಇಬಿ ಕಾಂಟ್ರಾಕ್ಟ್ ಆಗಿ ಕೆಲಸ ಮಾಡ್ತಾ ಇದ್ದ ಲಕ್ಷ್ಮೀ ನರಸಯ್ಯನನ್ನು ಆರೋಪಿ ನಂದೀಶ್ ಎಂಬಾತ ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕ ಕಡೆ ಕೊಚ್ಚಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಮಾಡಿದ್ದ ಆರೋಪಿ ನಂದೀಶ್‌ನನ್ನು ಬಂಧಿಸಿದ್ದಾರೆ. ಅಲ್ಲದೇ ತನಿಖೆ ಮುಂದುವರೆಸಿದ್ದು ತನಿಖೆ ಬಳಿಕ ಕೊಲೆಗೆ ಅಸಲಿ ಸತ್ಯ ಹೊರಬರಲಿದೆ.