ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಗ್ರಾಮದಲ್ಲಿ ಇರುವ ರೇಷ್ಮೆ ನೂಲು ಶೆಡ್ ನಲ್ಲಿ ಬಾಯ್ಲರ್ ಸ್ಪೋಟಗೊಂಡು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಹಾರ ಮೂಲದ ಯುವಕ ಮೊಹಮ್ಮದ್ ಶಹನೋಜ್ ಆಲಂ (27 ) ಮೃತ ದುರ್ದೈವಿಯಾಗಿದ್ದಾನೆ.
ಹೊಸಪೇಟೆ ಬಳಿಯ ರೇಷ್ಮೆ ನೂಲು ಶೆಡ್ ನಲ್ಲಿ ಬಾಯ್ಲರ್ ಭಾರಿ ಶಬ್ದದೊಂದಿಗೆ ಸಿಡಿದಿದ್ದು, ಕೆಲಸ ಮಾಡ್ತಿದ್ದ ಕಾರ್ಮಿಕ ಸಂಪೂರ್ಣ ಸುಟ್ಟು ಕರಕಲಾಗಿದ್ದಾನೆ, ಇನ್ನು ಮೃತ ಯುವಕ ಬಿಹಾರ ಮೂಲದಿಂದ ಬಂದು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇನ್ನು ಈ ದುರ್ಘಟನೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.
ಇನ್ನು ಸ್ಥಳೀಯವಾಗಿ ಈ ರೇಷ್ಮೆ ನೂಲು ಶೆಡ್ ಅಧಿಕೃತವಾಗಿದೆಯೋ ಅಥವಾ ಅನಧಿಕೃತವಾಗಿದೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಸದ್ಯ ಘಟನೆ ಸಂಬಂದ ಸ್ಥಳೀಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.