ಬೆಂಗಳೂರು : ಕಳ್ಳತನ ಮಾಡಿ ಮಕ್ಕಳ ಫೀಸ್‌ ಕಟ್ಟಿದ ಆಧುನಿಕ ರಾಬಿನ್ ಹುಡ್

ಆರೋಪಿ ಶಿವರಪ್ಪನ್‌ ಅಲಿಯಾಸ್ ಶಿವು
ಆರೋಪಿ ಶಿವರಪ್ಪನ್‌ ಅಲಿಯಾಸ್ ಶಿವು
ಬೆಂಗಳೂರು ನಗರ

ಬೆಂಗಳೂರು : ಕಳ್ಳತನ ಮಾಡಿ 20 ಮಕ್ಕಳ ಶಾಲಾ-ಕಾಲೇಜು ಫೀಸ್‌ ಕಟ್ಟಿದ್ದ ಮೂವರು ಖತರ್ನಾಕ್ ಕಳ್ಳರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೇಗೂರು ನಿವಾಸಿ ಶಿವರಪ್ಪನ್‌ ಅಲಿಯಾಸ್‌ ಶಿವು, ವಿವೇಕ್‌ ಹಾಗೂ ಅನಿಲ್‌ ಎಂಬ ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಆಧುನಿಕ ರಾಬಿನ್‌ ಹುಡ್‌ ಎನಿಸಿಕೊಂಡ ಶಿವು ಆತನ ಗ್ಯಾಂಗ್‌ ನೊಂದಿಗೆ ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ಕನ್ನ ಹಾಕಿ, ಕದ್ದ ಚಿನ್ನಾಭರಣವನ್ನು ತಮಿಳುನಾಡಿನಲ್ಲಿ ಸುಮಾರು 22 ಲಕ್ಷಕ್ಕೆ ಮಾರಾಟ ಮಾಡಿ, ಬಂದ ಹಣದಲ್ಲಿ ಅನಿಲ್‌ ಮತ್ತು ವಿವೇಕ್‌ ಗೆ ತಲಾ ₹4 ಲಕ್ಷ ರೂ ಬೆಲೆಯ ಆಟೋಗಳನ್ನು ಕೊಡಿಸಿದ್ದಾನೆ. ನಂತರ ಉಳಿದ ₹14 ಲಕ್ಷದ ಹಣದಲ್ಲಿ ಏರಿಯಾದ 20 ಬಡ ಮಕ್ಕಳ ಶಾಲಾ-ಕಾಲೇಜು ಫೀಸ್‌ ಕಟ್ಟಿದ್ದಾನೆ.

ಈ ಮನೆಗಳ್ಳರ ಬೆನ್ನತ್ತಿದ ಬ್ಯಾಡರಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದು, ಬಂಧಿತರಿಂದ 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಸೀಜ್‌ ಮಾಡಿ ವಶಪಡಿಸಿಕೊಂಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews