Politics : ಸಚಿವ ಸಂಪುಟ ರಚನೆಯ ಕಸರತ್ತು ಕ್ಲೈಮೆಕ್ಸ್ ಹಂತಕ್ಕೆ – ಸಚಿವಕಾಂಕ್ಷಿಗಳಿಗೆ ದಿಢೀರ್ ಶಾಕ್ ಕೊಟ್ಟ ಹೈಕಮಾಂಡ್

Politics : ನಾಳೆ ನೂತನ ಸಿಎಂ ಪಟ್ಟಾಭಿಷೇಕ ನಡೆಯಲಿದ್ದು, ಸಚಿವ ಸಂಪುಟ ರಚನೆಯ ಕಸರತ್ತು ಕ್ಲೈಮೆಕ್ಸ್ ಹಂತಕ್ಕೆ ತಲುಪಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಬೆಂಬಲಿಗರ ನಡುವೆ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಶುರುವಾಗಿದೆ.
ಸಚಿವಕಾಂಕ್ಷಿಗಳಿಗೆ ಹೈಕಮಾಂಡ್ ಬಿಗ್ ಶಾಕ್
ಸಚಿವ ಸ್ಥಾನಕ್ಕಾಗಿ ಸಿದ್ದರಾಮಯ್ಯ ಒಂದು ಲೀಸ್ಟ್, ಡಿಕೆಶಿ ಒಂದು ಲೀಸ್ಟ್, ಹೈಕಮಾಂಡ್ ಒಂದು ಪಟ್ಟಿ ಮಾಡಿಕೊಂಡಿದ್ದು, ಅಳೆದು ತೂಗಿ ಸಚಿವ ಸ್ಥಾನ ನೀಡಲು ಪ್ಲಾನ್ ಮಾಡಲಾಗಿತ್ತು. ಸಚಿವ ಸ್ಥಾನ ಸಿಗುತ್ತೆ ಅಂತಾ ಆಸೆ ಇಟ್ಟುಕೊಂಡಿದ್ದ ಸಚಿವಕಾಂಕ್ಷಿಗಳಿಗೆ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಹೌದು, ಸಂಪುಟದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹೈಕಮಾಂಡ್ ಹೊಸ ತಂತ್ರ ನಡೆಸಿದ್ದು, ಏಜ್ ಬೇಸ್ಡ್ ಫಾರ್ಮುಲಾ ಸೂತ್ರ ಅಳವಡಿಕೊಳ್ತಿದೆ ಎಂದು ಹೇಳಲಾಗ್ತಿದೆ.

ಏಜ್ ಬೇಸ್ಡ್ ಫಾರ್ಮುಲಾ
ಡಿಕೆಶಿ ಸಂಪುಟದಲ್ಲಿ ಯುವಕರು ಮತ್ತು ಹಿರಿಯರನ್ನ ಸಮತೋಲನಗೊಳಿಸಲು ಹೈಕಮಾಂಡ್ ಈ ಪ್ಲಾನ್ ಮಾಡಿದೆ. ಈ ಬಾರಿ ದೆಹಲಿ ನಾಯಕರು ಸಂಪುಟ ರಚನೆಗೆ ಹೊಸ ಸೂತ್ರ ಅನುಸರಿಸುತ್ತಿದೆ ಎಂದು ಹೇಳಲಾಗ್ತಿದೆ. ಹೌದು ಸಂಪುಟದಲ್ಲಿ ಯುವಕರು ಮತ್ತು ಹಿರಿಯ ನಾಯಕರ ನಡುವೆ ಸಮಾನವಾಗಿ ಸಚಿವ ಸ್ಥಾನ ಹಂಚಿಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ.
ಡಿಕೆಶಿ ಸಂಪುಟಕ್ಕೆ ಹೈಕಮಾಂಡ್ ಏಜ್ ಬೇಸ್ಡ್ ಫಾರ್ಮುಲಾ ತಂತ್ರಗಾರಿಕೆಯನ್ನು ಬಳಸುತ್ತಿದೆ. 45 ವರ್ಷದೊಳಗಿನ ಶಾಸಕರಿಗೆ ಒಟ್ಟು 10 ಸಂಪುಟ ಸ್ಥಾನ ಮೀಸಲು ಹಾಗೂ 50 ರಿಂದ 70 ವರ್ಷದ ಹಿರಿಯ ಶಾಸಕರಿಗೆ 20 ಸ್ಥಾನ ಮೀಸಲು ಇಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ. ಹೈಕಮಾಂಡ್ನ ಹೊಸ ತಂತ್ರಗಾರಿಕೆಯಿಂದ ಸಚಿವಾಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿದೆ. ಹಿರಿಯರಿಗೆ ಸ್ಥಾನ ತಪ್ಪುವ ಸಾಧ್ಯತೆ ಇದ್ದು. ಸಂಪುಟ ಹಂಚಿಕೆ ಸೂತ್ರದ ಬೆನ್ನಲ್ಲೇ ಕೈ ನಾಯಕರಲ್ಲಿ ಲೆಕ್ಕಾಚಾರ ಶುರುವಾಗಿದೆ.
ಇದನ್ನು ಓದಿ : ಡಿಕೆ ಶಿವಕುಮಾರ್ ಪ್ರಮಾಣವಚನ – ನಾಳೆ ಅರ್ಧ ದಿನ ರಜೆ ಘೋಷಣೆ

13 ಮಂದಿ ಹೆಸರನ್ನು ಹೈಕಮಾಂಡ್ ಫೈನಲ್
ಇನ್ನು ಡಿಕೆಶಿ ಸಂಪುಟದಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಇದ್ದ ಕೆಲ ನಾಯಕರಿಗೆ ಹೈಕಮಾಂಡ್ ಮಣೆ ಹಾಕಿದೆ ಅಂತಾ ಹೇಳಲಾಗ್ತಿದೆ. ಒಟ್ಟು 13 ಮಂದಿ ಹೆಸರನ್ನು ಹೈಕಮಾಂಡ್ ಫೈನಲ್ ಮಾಡಿದೆ ಎಂದು ಹೇಳಲಾಗ್ತಿದೆ. ಅದ್ರಲ್ಲಿ ಯಾರ್ಯಾರು ಅಂತಾ ನೋಡೊದಾದ್ರೆ,

ಸಂಭಾವ್ಯ ಸಚಿವರ ಪಟ್ಟಿ
1. ಪರಮೇಶ್ವರ್
2. ಸತೀಶ್ ಜಾರಕಿಹೊಳಿ
3. ಎಂ.ಬಿ ಪಾಟೀಲ್
4. ಈಶ್ವರ್ ಖಂಡ್ರೆ
5. ರಾಮಲಿಂಗ ರೆಡ್ಡಿ
6. ಕೆಜೆ ಜಾರ್ಜ್
7. ಪ್ರಿಯಾಂಕ್ ಖರ್ಗೆ
8. ಯತೀಂದ್ರ ಸಿದ್ದರಾಮಯ್ಯ
9. ಶಿವರಾಜ ತಂಗಡಗಿ
10. ರೂಪಾ ಶಶಿಧರ್
11. ಯುಟಿ ಖಾದರ್
12. ಲಕ್ಷ್ಮಣ ಸವದಿ
13. ಸಂತೋಷ್ ಲಾಡ್
ಸೇರಿ ಮುಂತಾದವರಿಗೂ ಮಂತ್ರಿಭಾಗ್ಯ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಈ ಹೊಸ ಸೂತ್ರದ ಬೆನ್ನಲ್ಲೇ ಯಾರಿಗೆ ಸ್ಥಾನ ಸಿಗಲಿದೆ, ಯಾರನ್ನು ಕೈಬಿಡಲಾಗಿದೆ ಅನ್ನೋದನ್ನ ನಾಳೆ ಗೊತ್ತಾಗಲಿದೆ.
ಇದನ್ನು ನೋಡಿ : ನಾಳೆ DKS ಪ್ರಮಾಣವಚನ ಸ್ವೀಕಾರ – ಬೆಂಗಳೂರಲ್ಲಿ ಹೇಗಿದೆ ಗೊತ್ತಾ ಬಂದೋಬಸ್ತ್.?




