ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ Petrol ಮತ್ತು Diesel ದರ ಮತ್ತೆ ಏರಿಕೆಗೊಂಡಿದೆ. ಬೆಂಗಳೂರಿನಲ್ಲಿ ಇತ್ತೀಚಿನ ಇಂಧನ ಬೆಲೆಗಳು ಮತ್ತು 10 ದಿನಗಳಲ್ಲಿ 4ನೇ ಬಾರಿ ನಡೆದ ದರ ಏರಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇಶದ ಗ್ರಾಹಕರಿಗೆ ಮತ್ತೆ ತೈಲ ಶಾಕ್ ಎದುರಾಗಿದ್ದು, ಕೇಂದ್ರ ಸರ್ಕಾರ ಸೋಮವಾರ (ಮೇ 25) Petrol ಮತ್ತು Diesel ದರವನ್ನು ಮತ್ತೊಮ್ಮೆ ಹೆಚ್ಚಿಸಿದೆ. ಕಳೆದ 10 ದಿನಗಳಲ್ಲಿ ಇದು 4ನೇ ಬಾರಿಗೆ ನಡೆದ ಇಂಧನ ದರ ಏರಿಕೆ ಆಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ಇಂಧನ ದರಗಳು ನಿರಂತರವಾಗಿ ಏರುತ್ತಿವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮೇ 15ರಿಂದ ಹಂತ ಹಂತವಾಗಿ ದರವನ್ನು ಹೆಚ್ಚಿಸುತ್ತಿವೆ.
MUST READ : Dina Bhavishaya : ದಿನ ಭವಿಷ್ಯ 25 ಮೇ 2026..

ಇತ್ತೀಚಿನ ದರ ಏರಿಕೆ
- ಪೆಟ್ರೋಲ್: ಪ್ರತಿ ಲೀಟರ್ಗೆ ₹2.61 ಏರಿಕೆ
- ಡೀಸೆಲ್: ಪ್ರತಿ ಲೀಟರ್ಗೆ ₹2.71 ಏರಿಕೆ
ಬೆಂಗಳೂರು ನಗರದಲ್ಲಿ ಇಂಧನ ದರಗಳು ಹೊಸ ಮಟ್ಟ ತಲುಪಿವೆ:
- ಪೆಟ್ರೋಲ್ ಬೆಲೆ: ₹110.89 ಪ್ರತಿ ಲೀಟರ್
- ಡೀಸೆಲ್ ಬೆಲೆ: ₹98.80 ಪ್ರತಿ ಲೀಟರ್

ಕಳೆದ ಕೆಲವು ದಿನಗಳಲ್ಲಿ ನಡೆದ ದರ ಏರಿಕೆಗಳು ಹೀಗಿವೆ:
- ಮೇ 15: ಪೆಟ್ರೋಲ್ ಮತ್ತು ಡೀಸೆಲ್ ₹3 ಏರಿಕೆ
- ಮೇ 23: ಪೆಟ್ರೋಲ್ ₹0.87, ಡೀಸೆಲ್ ₹0.91 ಏರಿಕೆ
- ಮೇ 25: ಪೆಟ್ರೋಲ್ ₹2.61, ಡೀಸೆಲ್ ₹2.71 ಏರಿಕೆ

ನಿರಂತರವಾಗಿ ಇಂಧನ ದರ ಏರಿಕೆಯಾಗುತ್ತಿರುವುದರಿಂದ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪದೇ ಪದೇ ದರ ಏರಿಸಿದರೆ ಹೇಗೆ?” ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರಿಕೆಯಾಗುತ್ತಿವೆ. ಇದರ ಪರಿಣಾಮವಾಗಿ ಭಾರತದಲ್ಲಿಯೂ ಇಂಧನ ದರ ಹೆಚ್ಚಳವಾಗುತ್ತಿದೆ ಎಂದು ತೈಲ ಕಂಪನಿಗಳು ತಿಳಿಸಿದ್ದಾರೆ.
MUST WATCH : ತುಮಕೂರಿಗರೇ ಇನ್ಮುಂದೆ ಕೂಲ್ ಆಗಿ ಬೆಂಗಳೂರಿಗೆ ಹೋಗ್ಬಹುದು- ಬೆಂಗಳೂರು- ತುಮಕೂರು ನಡುವೆ VAJRA VOLVO BUS ಸೇವೆ ಆರಂಭ




