ನಟಿ ರಮ್ಯಾ, ವಿಜಯಲಕ್ಷ್ಮಿ ಬಳಿಕ ಐಶ್ವರ್ಯ ಸಿಂಧೋಗಿಗೂ ಅಶ್ಲೀಲ ಕಮೆಂಟ್ – FIR ದಾಖಲು

ಸೋಶಿಯಲ್ ಮಿಡಿಯಾಗಳಲ್ಲಿ ನಟಿಯರ ವಿರುದ್ಧ ಅಶ್ಲೀಲ ಕಾಮೆಂಟ್ಗಳು ಹಾಗೂ ಸೈಬರ್ ಕಿರುಕುಳದ ಪ್ರಕರಣಗಳು ಹೆಚ್ಚಾಗ್ತಿದ್ದು, ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಐಶ್ವರ್ಯ ಸಿಂಧೋಗಿ ಕೂಡ ಇದೇ ರೀತಿಯ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇದನ್ನು ಓದಿ : ನಿರ್ದೇಶಕ ಅನೀಶ್ ಕಿಡ್ನಾಪ್ ಕೇಸ್ – ನಟಿ Aishwarya ಸೇರಿ 11 ಆರೋಪಿಗಳು ಅರೆಸ್ಟ್!

ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್
ನಟಿ ಐಶ್ವರ್ಯ ಸಿಂಧೋಗಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್ಗಳಿಗೆ ನಿರಂತರವಾಗಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಪರಿಚಯವಿರುವ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಈ ಹಿಂದೆಯೂ ಇದೇ ವ್ಯಕ್ತಿ ಐಶ್ವರ್ಯ ಅವರಿಗೆ ಬೆದರಿಕೆ ಹಾಕಿದ್ದು,ಆ ವೇಳೆ ಕೇಸ್ ದಾಖಲಾಗಿತ್ತು. ಈಗ ಅದೇ ವ್ಯಕ್ತಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

FIR ದಾಖಲು!
ನಮಗೆ ತೊಂದರೆ ನೀಡುತ್ತಿರುವ ಆ ನಕಲಿ ಖಾತೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಐಶ್ವರ್ಯಾ ಮನವಿ ಮಾಡಿದ್ದಾರೆ. ನಟಿಯ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನು ನೋಡಿ : ಚೆನ್ನಮ್ಮರ ಅಗಲಿಕೆ ತುಂಬಲಾರದ ನಷ್ಟ – ಕಂಬನಿ ಮಿಡಿದ ಶಾಸಕ ಎಸ್.ಆರ್. ಶ್ರೀನಿವಾಸ್




