
HASSAN : ನವವಿವಾಹಿತೆ ನಿಗೂಢ ನಾಪತ್ತೆ – 8 ದಿನಗಳ ಬಳಿಕ ಮೃತದೇಹ ಪತ್ತೆ!
ಹಾಸನ ಜಿಲ್ಲೆಯಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆ ಪ್ರಿಯಾಂಕಾ ಅವರ ಮೃತದೇಹ 8 ದಿನಗಳ ಬಳಿಕ ಪತ್ತೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಬಳಿ ಇರುವ ಹೇಮಾವತಿ ನಾಲೆಯಲ್ಲಿ ಇಂದು ಮೃತದೇಹ ಪತ್ತೆಯಾಗಿದೆ.
8 ದಿನಗಳ ಬಳಿಕ ಮೃತದೇಹ ಪತ್ತೆ!
ಸೆಪ್ಟೆಂಬರ್ 19ರ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ಪತಿ ರಾಜಶೇಖರ್ ಎದುರೇ ಪ್ರಿಯಾಂಕಾ ನಾಲೆಗೆ ಜಿಗಿದಿದ್ದರು ಎನ್ನಲಾಗಿದೆ. ಘಟನೆಯ ಬಳಿಕ ಎಂಟು ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಲ್ಲಿ ಪ್ರಿಯಾಂಕಾ ಅವರಿಗಾಗಿ ಹುಡುಕಾಟ ನಡೆಸಿದ್ದರು.
READ THIS : ಪೊಲೀಸ್ರಿಗೆ ಕಗ್ಗಂಟಾಯ್ತು ರಸ್ತೆಯಲ್ಲಿ ಸಿಕ್ಕ ವ್ಯಕ್ತಿಯ ಅರ್ಧ ಮೃತದೇಹ!

HASSAN – ಪತಿ ರಾಜಶೇಖರ್ ನಾಲೆಗೆ ತಳ್ಳಿದ್ದಾನೆಂದು ಆರೋಪ
ಪತಿ ರಾಜಶೇಖರ್ ನಾಲೆಗೆ ತಳ್ಳಿದ್ದಾನೆಂದು ಪ್ರಿಯಾಂಕಾ ಪೋಷಕರು ಆರೋಪಿಸಿದ್ದರು. ಆಕೆಗೆ ಈಜು ಬರುತ್ತದೆ, ಅವಳಿಗೆ ಮೊದಲೆ ಮದುವೆಯಾಗಿತ್ತು ಎಂದು ರಾಜಶೇಖರ್ ಪೋಷಕರು ಪ್ರತ್ಯಾರೋಪ ಮಾಡಿದ್ದರು. ಹೇಮಾವತಿ ನಾಲೆಯಲ್ಲಿ ನೀರು ನಿಲ್ಲಿಸಿದ ಹಿನ್ನೆಲೆ ಇಂದು ಶ್ರವಣಬೆಳಗೊಳದ ಬಳಿ ಹೇಮಾವತಿ ನಾಲೆಯಲ್ಲಿ ಪ್ರಿಯಾಂಕಾ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಿಯಾಂಕಾ ಸಾವಿನ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
MUST WATCH : NDA ಅಭ್ಯರ್ಥಿ ಪರ ಜಂಟಿ ಪ್ರಚಾರ – SURESH ಪರ ಒಂದಾದ BJP –JDS

