
Gold Rate ನಲ್ಲಿ ಇಂದು ಕೊಂಚ ಇಳಿಕೆ; 14 ಸಾವಿರ ರೂಪಾಯಿ ಗಡಿಯಿಂದ ಕೆಳಗಿಳಿದ ಬೆಲೆ
ಶುಕ್ರವಾರ ಕೊಂಚ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ತುಸು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹15 ಇಳಿಕೆಯಾಗಿದ್ದು, ₹13,995ಕ್ಕೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹16 ಕಡಿಮೆಯಾಗಿದ್ದು, ₹15,268ಕ್ಕೆ ಇಳಿದಿದೆ.
ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್ Gold Rate 8 ಗ್ರಾಂಗೆ ₹1,11,960, 10 ಗ್ರಾಂಗೆ ₹1,39,950 ಹಾಗೂ 100 ಗ್ರಾಂಗೆ ₹13,99,500 ಇದೆ. 24 ಕ್ಯಾರಟ್ ಚಿನ್ನದ ದರ 8 ಗ್ರಾಂಗೆ ₹1,22,144, 10 ಗ್ರಾಂಗೆ ₹1,52,680 ಹಾಗೂ 100 ಗ್ರಾಂಗೆ ₹15,26,800 ಇದೆ.
READ THIS : ಚಿನ್ನ ಖರೀದಿಸೋರಿಗೆ ಶಾಕ್ – ಮತ್ತೆ ದಿಢೀರ್ ಏರಿದ ಚಿನ್ನದ ಬೆಲೆ!

ವಿವಿಧ ನಗರಗಳಲ್ಲಿ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹14,000 | ₹15,273 |
| ಮುಂಬೈ | ₹13,995 | ₹15,268 |
| ದೆಹಲಿ | ₹14,010 | ₹15,283 |
| ಕೋಲ್ಕತಾ | ₹13,995 | ₹15,268 |
| ಹೈದರಾಬಾದ್ | ₹13,995 | ₹15,268 |
ಚೆನ್ನೈನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,000 ಇದ್ದರೆ, 24 ಕ್ಯಾರಟ್ ಚಿನ್ನ ₹15,273ಕ್ಕೆ ಲಭ್ಯವಿದೆ. ಮುಂಬೈ, ಕೋಲ್ಕತಾ ಹಾಗೂ ಹೈದರಾಬಾದ್ನಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹13,995 ಮತ್ತು 24 ಕ್ಯಾರಟ್ ಚಿನ್ನದ ದರ ₹15,268 ಇದೆ. ದೆಹಲಿಯಲ್ಲಿ 22 ಕ್ಯಾರಟ್ ಚಿನ್ನ ₹14,010 ಹಾಗೂ 24 ಕ್ಯಾರಟ್ ಚಿನ್ನ ₹15,283 ಇದೆ.

ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಚಿನ್ನದ ಬೆಲೆ ಇಳಿಕೆಯಾಗಿದ್ದರೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಬೆಳ್ಳಿ ಪ್ರತಿ ಗ್ರಾಂಗೆ ₹245ರಂತೆ ಇದೆ. 10 ಗ್ರಾಂ ಬೆಳ್ಳಿಗೆ ₹2,450 ಹಾಗೂ ಒಂದು ಕೆ.ಜಿ. ಬೆಳ್ಳಿಗೆ ₹2,45,000 ಪಾವತಿಸಬೇಕಾಗಿದೆ.
MUST WATCH : ರೈತರ ಮನವಿಗೆ ಸಾರಿಗೆ ಇಲಾಖೆ ಸ್ಪಂದನೆ APMC ಬಳಿ ಬಸ್ ನಿಲುಗಡೆಗೆ ಚಾಲನೆ





