Bengaluru : ಪೊಲೀಸರಿಗೆ ಕಗ್ಗಂಟಾದ ನೈಸ್ ರಸ್ತೆಯ ಶವ ಪತ್ತೆ ಕೇಸ್..! ಇದು ಅಪಘಾತವೋ ಅಥವಾ ಕೊಲೆಯೋ..?

Bengaluru ನೈಸ್ ರಸ್ತೆಯಲ್ಲಿ ನಡೆದ ಭೀಕರ ಘಟನೆಯೊಂದು ಪೊಲೀಸರಿಗೆ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಯಾವುದೇ ಸುಳಿವು ಇಲ್ಲದೆ ರಸ್ತೆಯಲ್ಲಿ ಸಿಕ್ಕ ಅರ್ಧ ಮೃತದೇಹದ ಜಾಡು ಹಿಡಿದು ಹೊರಟ ಪೊಲೀಸರಿಗೆ ಇನ್ನೂ ಕೂಡ ಯಾವುದೇ ಕ್ಲೂ ಸಿಕ್ಕಿಲ್ಲ.
ಸಂಪೂರ್ಣ ನಜ್ಜುಗುಜ್ಜಾದ ಅರ್ಧ ಮೃತದೇಹ ಪತ್ತೆ!
ಮೇ 4ರಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆಗೆ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮಾಗಡಿ ರೋಡ್ ನ ನೈಸ್ ರಸ್ತೆಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳ ಪರಿಶೀಲನೆ ವೇಳೆ ರಸ್ತೆ ಮೇಲೆ ಅರ್ಧ ದೇಹ ಪತ್ತೆಯಾಗಿದ್ದು, ಘಟನೆಯ ಭೀಕರತೆ ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಮೃತದೇಹವನ್ನು ಸ್ಥಳದಿಂದ ತೆಗೆದು ಶವಗಾರಕ್ಕೆ ಸಾಗಿಸಲಾಗಿದೆ.ವೈದ್ಯರ ಪ್ರಾಥಮಿಕ ಶಂಕೆಯಂತೆ ಮೃತನು ಸುಮಾರು 35 ರಿಂದ 40 ವರ್ಷದ ವ್ಯಕ್ತಿಯಾಗಿರಬಹುದು ಎಂದು ತಿಳಿದುಬಂದಿದೆ..ಆದರೆ ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ.
ಇದನ್ನು ಓದಿ : ಮಜಾಭಾರತ ನಟ ಸಾವು – ಸ್ನೇಹಿತರೊಂದಿಗೆ ಹೋಗಿದ್ದವ ಕೊನೆಯುಸಿರು!

ಅಪಘಾತದಿಂದ ಆದ ಸಾವಾ..?
ಘಟನೆ ನಡೆದು ಒಂದೂವರೆ ತಿಂಗಳಾದರೂ ಮೃತದೇಹದ ಕುರಿತಾದ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ. ಇದು ಅಪಘಾತದಿಂದ ಆದ ಸಾವಾ..? ಅಥವಾ ಮೃತದೇಹವನ್ನ ತಂದು ರಸ್ತೆಗೆ ಎಸೆಯಲಾಗಿದೆಯಾ..? ಬಳಿಕ ಭಾರಿ ವಾಹನಗಳು ಮೃತದೇಹದ ಮೇಲೆ ಹರಿದು ಮೃತದೇಹ ಈ ರೀತಿ ಆಗಿದೆಯಾ..? ಅನ್ನೋ ಸಾಕಷ್ಟು ಆಯಾಮಗಳಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಮಿಸ್ಸಿಂಗ್ ಕೇಸ್ ಗಳ ಜಾಡು ಹಿಡಿದು ಹೊರಟ ಪೊಲೀಸರು
ಅಪಘಾತವೇ ಆಗಿದ್ದರೇ, ಅದಕ್ಕೆ ಕಾರಣವಾದ ವಾಹನವನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸಿದರೂ, ತನಿಖೆ ಇದುವರೆಗೆ ಫಲಕಾರಿಯಾಗಿಲ್ಲ. ಶಂಕಿತ ವಾಹನಗಳನ್ನು ಪರಿಶೀಲನೆಗೆ ಒಳಪಡಿಸಿದರೂ ಯಾವುದೇ ನಿರ್ಣಾಯಕ ಸುಳಿವು ದೊರಕಿಲ್ಲ.ಈ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಮಿಸ್ಸಿಂಗ್ ಪ್ರಕರಣಗಳ ಮಾಹಿತಿಯನ್ನು ಎಲ್ಲಾ ಠಾಣೆಗಳಿಂದ ಸಂಗ್ರಹಿಸುತ್ತಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಇದನ್ನು ನೋಡಿ : ಎಂಟಕ್ಕೂ ಹೆಚ್ಚು ಸಿಲಿಂಡರ್ ಸ್ಪೋಟ ಮೂವರಿಗೆ ಗಂಭೀರ ಗಾಯ




