ಕೋಟ್ಯಂತರ ಭಾರತೀಯರು ಬಳಸುವ Facebook , ಇನ್ಸ್ಟಾ, ವಾಟ್ಸಾಪ್ನಲ್ಲಿ ಪ್ರೀಮಿಯಮ್ ಸರ್ವಿಸ್ ಆರಂಭವಾಗುತ್ತಿದೆ.

Facebook , ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಬಳಕೆದಾರರಿಗೆ ಮೆಟಾ ಸಂಸ್ಥೆ ಮಹತ್ವದ ಘೋಷಣೆ ಮಾಡಿದೆ. ಹೊಸ “ಪ್ಲಸ್” ಸಬ್ಸ್ಕ್ರಿಪ್ಷನ್ ಯೋಜನೆಗಳನ್ನು ಜಾಗತಿಕವಾಗಿ ಪರಿಚಯಿಸಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಪಡೆಯಲು ಬಳಕೆದಾರರು ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ.
ಮೆಟಾ ಕಂಪನಿಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರು ಹೇಳಿದ್ದೇನು?
ಮೆಟಾ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥೆ Naomi Gleit ಈ ಯೋಜನೆಗಳನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ ಸಾಮಾನ್ಯ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಬಳಕೆ ಎಂದಿನಂತೆ ಉಚಿತವಾಗಿಯೇ ಮುಂದುವರಿಯಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಸಬ್ಸ್ಕ್ರಿಪ್ಷನ್ ದರಗಳು
- Instagram Plus – ತಿಂಗಳಿಗೆ $3.99 (ಸುಮಾರು ₹377)
- Facebook Plus – ತಿಂಗಳಿಗೆ $3.99 (ಸುಮಾರು ₹377)
- WhatsApp Plus – ತಿಂಗಳಿಗೆ $2.99 (ಸುಮಾರು ₹282)
ಇದನ್ನು ಓದಿ : `WhatsApp’ ಬಳಕೆದಾರರೇ ಎಚ್ಚರ – ಈ ಮೆಸೇಜ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

ಹಣ ಪಾವತಿಸುವ ಇನ್ಸ್ಟಾ, ಫೇಸ್ಬುಕ್ “ಪ್ಲಸ್” ಬಳಕೆದಾರರಿಗೆ ಏನೆಲ್ಲಾ ಸಿಗಲಿದೆ?
ಇನ್ಸ್ಟಾಗ್ರಾಮ್ ಪ್ಲಸ್ ಮತ್ತು ಫೇಸ್ಬುಕ್ ಪ್ಲಸ್ ಬಳಕೆದಾರರಿಗೆ ಸ್ಟೋರಿ ರಿವಾಚ್ ಮಾಹಿತಿ, ಸ್ಟೋರಿ ವೀಕ್ಷಕರ ಬಗ್ಗೆ ಹೆಚ್ಚುವರಿ ಅಂಕಿ-ಅಂಶಗಳು, ರಹಸ್ಯವಾಗಿ ಸ್ಟೋರಿ ವೀಕ್ಷಿಸುವ ಸೌಲಭ್ಯ, ಹೆಚ್ಚುವರಿ ಕಸ್ಟಮೈಸೇಶನ್ ಸೇರಿದಂತೆ ಹಲವು ವಿಶೇಷ ಫೀಚರ್ಗಳು ದೊರೆಯಲಿವೆ.
WhatsApp Plus ಬಳಕೆದಾರರಿಗೆ ಕಸ್ಟಮ್ ಥೀಮ್ಗಳು, ಕಸ್ಟಮ್ ರಿಂಗ್ಟೋನ್ಗಳು, ಹೆಚ್ಚುವರಿ ಪಿನ್ ಚಾಟ್ಗಳು, ಪ್ರೀಮಿಯಂ ಸ್ಟಿಕ್ಕರ್ಗಳು ಹಾಗೂ ವೈಯಕ್ತಿಕಗೊಳಿಸುವ ಹಲವು ಆಯ್ಕೆಗಳು ಲಭ್ಯವಾಗಲಿವೆ.
ಮೆಟಾ ಸಂಸ್ಥೆ ಈ ವರ್ಷ AI ಡೇಟಾ ಸೆಂಟರ್ಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಭಾರಿ ಹೂಡಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಹೊಸ ಆದಾಯ ಮೂಲಗಳನ್ನು ಹುಡುಕುತ್ತಿದೆ. ಜಾಹೀರಾತು ಆದಾಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಚಂದಾದಾರಿಕೆ ಮಾದರಿಯತ್ತ ಸಾಗುತ್ತಿರುವುದಾಗಿ ವರದಿಗಳು ತಿಳಿಸಿವೆ.
Meta One ಯೋಜನೆ
- Meta One Plus – $7.99
- Meta One Premium – $19.99
- ಸುಧಾರಿತ AI ಸೇವೆಗಳು
- ಇಮೇಜ್ ಮತ್ತು ವಿಡಿಯೋ ಜನರೇಷನ್ ಸೌಲಭ್ಯ

ಭವಿಷ್ಯದಲ್ಲಿ ಎಲ್ಲಾ ಸಬ್ಸ್ಕ್ರಿಪ್ಷನ್ ಸೇವೆಗಳನ್ನು ‘Meta One’ ಹೆಸರಿನ ಅಡಿಯಲ್ಲಿ ಒಗ್ಗೂಡಿಸಲು ಕಂಪನಿ ಯೋಜಿಸಿದ್ದು, AI ಬಳಕೆದಾರರು, ಕ್ರಿಯೇಟರ್ಗಳು ಹಾಗೂ ಉದ್ಯಮಗಳಿಗಾಗಿ ಪ್ರತ್ಯೇಕ ಪ್ರೀಮಿಯಂ ಯೋಜನೆಗಳನ್ನೂ ಪರಿಚಯಿಸಲು ಮುಂದಾಗಿದೆ.
ಇದನ್ನು ನೋಡಿ : ಬೆಳಗ್ಗೆ ಎದೆಉರಿ ಅಂದಿದ್ದ ಬಾಲಕ.. – ಆಸ್ಪತ್ರೆಗೆ ಕರೆದೊಯ್ಯುವ ವೇಳೆಯೇ ಕೊನೆಯುಸಿರು



