DL ಕಳೆದು ಹೋಗಿದ್ಯಾ? ಮರಳಿ ಪಡೆಯಲು ಹೀಗೆ ಮಾಡಿ.

ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಚಾಲನಾ ಪರವಾನಗಿ ( DL ) ಅತ್ಯಂತ ಪ್ರಮುಖ ಕಾನೂನು ದಾಖಲೆಯಾಗಿದೆ. ಆದರೆ, ಕೆಲವೊಮ್ಮೆ ಅಜಾಗರೂಕತೆಯಿಂದ ಅಥವಾ ಬೇರೆ ಯಾವುದೇ ಕಾರಣಗಳಿಂದ ಈ ಅಮೂಲ್ಯವಾದ ದಾಖಲೆ ಕಳೆದುಹೋಗಬಹುದು ಅಥವಾ ಹರಿದು ಹಾಳಾಗಬಹುದು. ಇಂತಹ ಸಂದರ್ಭದಲ್ಲಿ ಜನರು ಆರ್ಟಿಒ (RTO) ಕಚೇರಿಗೆ ಅಲೆಯಲು ಅಥವಾ ಮಧ್ಯವರ್ತಿಗಳ (ದಲ್ಲಾಳಿಗಳ) ಕಾಟಕ್ಕೆ ಹೆದರಿ ಗಾಬರಿಯಾಗುವುದು ಸಾಮಾನ್ಯ.
ಜಸ್ಟ್ ಹೀಗೆ ಮಾಡಿ `ಡುಪ್ಲಿಕೇಟ್ ಲೈಸೆನ್ಸ್’ ಪಡೆಯಿರಿ!
ಆದರೆ ಈಗ ಭಾರತ ಸರ್ಕಾರದ ಪರಿವಾಹನ ಸೇವಾ ಪೋರ್ಟಲ್ ಮೂಲಕ ಮನೆಯಲ್ಲೇ ಕುಳಿತು ಡುಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಆರ್ಟಿಒ ಕಚೇರಿಗೆ ಪದೇಪದೇ ಭೇಟಿ ನೀಡುವ ಅಗತ್ಯವೇ ಇರುವುದಿಲ್ಲ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು ಕಾನೂನುಬಾಹಿರ. ಒಂದು ವೇಳೆ ತಪಾಸಣೆ ವೇಳೆ ಸಿಕ್ಕಿಬಿದ್ದರೆ ಸಾವಿರಾರು ರೂಪಾಯಿ ದಂಡ ಪಾವತಿಸಬೇಕಾಗಬಹುದು. ಆದ್ದರಿಂದ ಲೈಸೆನ್ಸ್ ಕಳೆದುಹೋದ ತಕ್ಷಣ ಹೊಸ ಡುಪ್ಲಿಕೇಟ್ DLಗೆ ಅರ್ಜಿ ಸಲ್ಲಿಸುವುದು ಸೂಕ್ತ.

ಆನ್ ಲೈನ್ ಅರ್ಜಿ ಸಲ್ಲಿಕೆ ಮಾಡೋದೇಗೆ?
ಮೊದಲಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಲ್ಲಿ Online Services ವಿಭಾಗದಲ್ಲಿ Driving Licence Related Services ಆಯ್ಕೆಯನ್ನು ಕ್ಲಿಕ್ ಮಾಡಬೇಕು
ನಂತರ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸೇರಿದಂತೆ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ‘Apply for Duplicate DL’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಹಳೆಯ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ ಹಾಗೂ ಜನ್ಮ ದಿನಾಂಕ ನಮೂದಿಸಿ. ಬಳಿಕ ಪರದೆಯ ಮೇಲೆ ಕಾಣಿಸುವ ಮಾಹಿತಿಯನ್ನು ಪರಿಶೀಲಿಸಿ ದೃಢೀಕರಿಸಿ.
ಲೈಸೆನ್ಸ್ ಕಳೆದುಹೋಗಿದೆಯೇ ಅಥವಾ ಹಾಳಾಗಿದೆಯೇ ಎಂಬ ಕಾರಣವನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಕಳುವಾಗಿದ್ದರೆ ಪೊಲೀಸ್ FIR ಪ್ರತಿಯನ್ನು ಅಪ್ಲೋಡ್ ಮಾಡುವುದು ಕಡ್ಡಾಯ.
ಅರ್ಜಿಯ ಕೊನೆಯ ಹಂತದಲ್ಲಿ ನಿಗದಿತ ಸರ್ಕಾರಿ ಶುಲ್ಕವನ್ನು ಯುಪಿಐ, ನೆಟ್ ಬ್ಯಾಂಕಿಂಗ್ ಅಥವಾ ಇತರೆ ಆನ್ಲೈನ್ ಪಾವತಿ ವಿಧಾನಗಳ ಮೂಲಕ ಪಾವತಿಸಬೇಕು.

DL ಕಳೆದು ಹೋಗಿದ್ಯಾ? ಹೀಗೆ ಮಾಡಿ ಮರಳಿ ಪಡೆಯಿರಿ
ಅರ್ಜಿ ಸಲ್ಲಿಕೆಯ ಬಳಿಕ ನಿಮಗೆ ಅಪ್ಲಿಕೇಶನ್ ನಂಬರ್ ದೊರೆಯುತ್ತದೆ. ಇದರ ಮೂಲಕ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಹೊಸ ಡುಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಅನ್ನು ನಿಮ್ಮ ನೋಂದಾಯಿತ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಲಾಗುತ್ತದೆ.
ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದರೆ ಅಥವಾ ಹಾಳಾದರೆ ಗಾಬರಿಯಾಗುವ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೊಸ ಡುಪ್ಲಿಕೇಟ್ DL ಪಡೆಯಬಹುದು.

ಇದನ್ನು ನೋಡಿ : ಸೈಲೆಂಟ್ ಹಾಗೆ DKS ಕುರ್ಚಿ ಕಿತ್ಕೊಂಡ್ರು – ಹೀಗ್ಯಾಕಂದ್ರು BJP ರಾಜ್ಯಾಧ್ಯಕ್ಷ VIJAYENDRA ?



