H.D Devegowda ರಿಗೆ 94ನೇ ಜನ್ಮದಿನದ ಸಂಭ್ರಮ – ಅಪ್ಪನಿಗೆ ಶುಭ ಕೋರಿದ ಎಚ್ಡಿ ಕುಮಾರಸ್ವಾಮಿ

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಇಂದು 94ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. 1933, ಮೇ 18 ರಂದು ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ದೇವೇಗೌಡ ಇದೀಗ 93 ವರ್ಷ ಪೂರೈಸಿದ್ದಾರೆ. ಅಪ್ಪನ ಜನ್ಮದಿನಕ್ಕೆ ಕುಮಾರಸ್ವಾಮಿ ಶುಭ ಕೋರಿದ್ದಾರೆ.

ಭಕ್ತಿಪೂರ್ವಕವಾಗಿ ಜನ್ಮದಿನದ ಶುಭಾಶಯ
ನನ್ನ ಪೂಜ್ಯ ತಂದೆಯವರು, ರಾಷ್ಟ್ರದ ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶ್ರೀಹೆಚ್.ಡಿ ದೇವೇಗೌಡ ಅವರಿಗೆ ಭಕ್ತಿಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ.
READ THIS : ಕೇರಳಂ CM ಆಗಿ ಪ್ರಮಾಣವಚನ ಸ್ವೀಕರಿಸಿದ ವಿ.ಡಿ.ಸತೀಶನ್
ಅವರ ದಾರಿ ತಲೆತಲೆಮಾರಿಗೂ ಮಾದರಿ
ಹೋರಾಟ, ಸಂಘರ್ಷ, ತ್ಯಾಗ. ಸಮರ್ಪಣಾ ಭಾವದಿಂದ ರಾಜಕೀಯದ ಉತ್ತುಂಗಕ್ಕೆ ಏರಿದ ಮಣ್ಣಿನ ಮಗನ ಹೆಜ್ಜೆಗಳು ಅನುಕರಣೀಯ. ಅವರು ತಮ್ಮ ಬದುಕಿನ ಪ್ರತೀಕ್ಷಣವನ್ನು ಜನಸೇವೆಗೆ ಮೀಸಲಿಟ್ಟರು. 94ರ ಈ ವಯಸ್ಸಿನಲ್ಲಿಯೂ ಜನಹಿತಕ್ಕಾಗಿ ಸಂಘರ್ಷದ ಹಾದಿಯನ್ನು ಸವೆಸುತ್ತಿದ್ದಾರೆ.
ಅವರ ದಾರಿ ತಲೆತಲೆಮಾರಿಗೂ ಮಾದರಿ. ಆ ಹಿರಿಯ ಜೀವಕ್ಕೆ ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಸುದೀರ್ಘ ಕಾಲ ರಾಷ್ಟ್ರಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕುಮಾರಸ್ವಾಮಿ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಶುಭಕೋರಿದ್ರು.

MUST WATCH : ಸಮಾವೇಶದ ಬಳಿಕ ಸರ್ಕಾರ ಬದಲಾಗುತ್ತಾ – ಅಂದಿದ್ದಕ್ಕೆ ಗೃಹ ಸಚಿವ PARAM ಏನಂದ್ರು ನೋಡಿ.!?




