ದಶಕದ ಬಳಿಕ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ – ದೇವರ ಹೆಸರಿನಲ್ಲಿ ನೂತನ CM ಆಗಿ ವಿ.ಡಿ ಸತೀಶನ್ ಪ್ರಮಾಣವಚನ ಸ್ವೀಕಾರ..!

ವಿ.ಡಿ ಸತೀಶನ್ ಅವರು ಇಂದು ಕೇರಳದ ನೂತನ ಮುಖ್ಯಮಂತ್ರಿಯಾಗಿ (CM) ಪ್ರಮಾಣವಚನ ಸ್ವೀಕರಿಸಿದರು. ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ 10 ದಿನಗಳ ಬಳಿಕ ತಿರುವನಂತಪುರಂನಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಸತೀಶನ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಸಂಪುಟ ಸಹೋದ್ಯೋಗಿಗಳು ಪ್ರಮಾಣ ವಚನ ಸ್ವೀಕಾರ
ಸತೀಶನ್ ಜೊತೆಗೆ ಅವರ ಸಂಪುಟ ಸಹೋದ್ಯೋಗಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕರುಗಳಾದ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ.ಮುರಳೀಧರನ್, ಎ.ಪಿ.ಅನಿಲ್ ಕುಮಾರ್, ಪಿ.ಸಿ.ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಎಂ.ಲಿಜು, ಟಿ ಸಿದ್ದಿಕ್, ಕೆ.ಎ.ತುಳಸಿ ಮತ್ತು ಒ.ಜೆ.ಜನೀಶ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಐಯುಎಂಎಲ್ ಐದು ಸಚಿವ ಸ್ಥಾನ ಹೊಂದಿವೆ. ಪಿ.ಕೆ.ಪಿ.ಕೆ.ಕುಂಞಾಲಿ ಕುಟ್ಟಿ, ಕೆ.ಎಂ.ಶಾಜಿ, ವಿ.ಅಬ್ದುಲ್ ಗಫೂರ್, ಎನ್.ಶಂಸುದ್ದೀನ್ ಮತ್ತು ಪಿ.ಕೆ.ಬಶೀರ್ ಸಚಿವ ಸ್ಥಾನ ಪಡೆದಿದ್ದಾರೆ.
READ THIS : ವಿಜಯಲಕ್ಷ್ಮೀಗೆ ಹಾರ್ಟ್ ಬ್ರೇಕ್! ದಚ್ಚು ನೆನೆದು ಭಾವುಕ ಪೋಸ್ಟ್

ಪಕ್ಷದ ಹಿರಿಯ ನಾಯಕರು ಭಾಗಿ – CM
ಇನ್ನು ಪ್ರಮಾಣವಚನ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ವಯನಾಡನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಸತರರ ಭಾಗವಹಿಸಿದ್ದರು.

MUST WATCH : ಬಯೋ ಫಾರೆಸ್ಟ್ ಉಳಿವಿಗೆ ಜನಾಂದೋಲನ ಅಭಿಯಾನಕ್ಕೆ ಮನಸೋತ ಪರಿಸರ ಪ್ರೇಮಿಗಳು




