Darshan ನೆನೆದು ಭಾವುಕ ಪೋಸ್ಟ್ ಹಾಕಿದ ವಿಜಯಲಕ್ಷ್ಮಿ..!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೆ ಹಿನ್ನಡೆಯಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಪ್ರಕರಣದ ಟ್ರಯಲನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಕೆಳಹಂತದ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ದಾಸನಿಗೆ ಇನ್ನೂ ಒಂದು ವರ್ಷ ಜೈಲು ಖಾಯಂ
ನ್ಯಾ. ಪರ್ದಿವಾಲ ಮತ್ತು ನ್ಯಾ. ವಿಜಯ್ ಬಿಷ್ಣೋ ಅವರ ದ್ವಿಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿ, ಪ್ರತಿದಿನ ವಿಚಾರಣೆ ನಡೆಸುವಂತೆ ಸೂಚಿಸಿದೆ. ಜೊತೆಗೆ ಸುಮಾರು 60 ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ. ಇದರಿಂದ ದರ್ಶನ್ ಅವರಿಗೆ ಸದ್ಯಕ್ಕೆ ಜಾಮೀನು ಸಿಗುವ ಸಾಧ್ಯತೆ ಕ್ಷೀಣವಾಗಿದ್ದು, ಇನ್ನೂ ಒಂದು ವರ್ಷ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.

ಭಾನುವಾರ ರಾತ್ರಿ ದಿಢೀರ್ ಪೋಸ್ಟ್!
ಒಂದು ಕಡೆ ದರ್ಶನ್ ಅಭಿಮಾನಿಗಳು ಇದರಿಂದ ಬೇಸರಗೊಂಡಿದ್ದಾರೆ. ಈಗ ವಿಜಯಲಕ್ಷ್ಮಿ ಅವರು ಕೂಡಾ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೌದು ವಿಜಯಲಕ್ಷ್ಮಿ ಭಾನುವಾರ ರಾತ್ರಿ ಸೋಶಿಷಲ್ ಮಿಡಿಯಾದಲ್ಲಿ ಭಾವುಕ ಪೋಸ್ಟ್ವೊಂದನ್ನು ಹಾಕಿ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
Darshan ಅವರ ಬ್ಲ್ಯಾಕ್ & ವೈಟ್ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದು ಅದರೊಂದಿಗೆ ಬ್ರೋಕನ್ ಹಾರ್ಟ್ ಎಮೋಜಿ ಕೂಡಾ ಹಾಕಿದ್ದಾರೆ.

READ THIS : ಬೀದಿಗೆ ಬಂದ ಶಾಸಕ ಸಿ.ಪಿ ಯೋಗೇಶ್ವರ್ ಮನೆಯ ಜಗಳ
“ಇದುಮರೆಯದ ಹಾಡು, ಮೌನಗಳೇ ಸಾಕ್ಷಿಗಳು, ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು” ಎಂದು ವಿಜಯಲಕ್ಷ್ಮಿ ಗಂಡನ ಚಂದನ ಪೊಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಪ್ರಕರಣದಲ್ಲಿ ಮುಂದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಆರೋಪಿಗಳ ವಿರುದ್ಧ ಟ್ರಯಲ್ ಮುಂದುವರಿಯಲಿದ್ದು, ಹೊಸ ನ್ಯಾಯಾಧೀಶರ ನೇಮಕದ ಬಳಿಕ ಮುಂದಿನ ವಾರದಿಂದ ವಿಚಾರಣೆ ವೇಗ ಪಡೆಯುವ ಸಾಧ್ಯತೆ ಇದೆ.
ಪ್ರಾಸಿಕ್ಯೂಷನ್ ಹಾಗೂ ಕಾರಾಗೃಹ ಇಲಾಖೆಯ ವಿರುದ್ಧ ದರ್ಶನ್ ಪರ ವಕೀಲರು ಹಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರೂ, ನ್ಯಾಯಾಲಯ ಯಾವುದೇ ಸಡಿಲಿಕೆ ನೀಡಿಲ್ಲ.
ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ವಾಸ ಅನುಭವಿಸ್ತಿರೋ ನಟ ದರ್ಶನ್ಗೆ ಕಾನೂನು ಹೋರಾಟದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ.

MUST WATCH : SIRAGATEನ 80 FEET ROADಗೆ ಕೊನೆಗೂ ಮುಕ್ತಿ- ಕಾಮಗಾರಿ ಮುಹೂರ್ತ ಫಿಕ್ಸ್ ಮಾಡಿದ ಜಿಲ್ಲಾಡಳಿತ




