ಕರ್ನಾಟಕ ವಿರೋಧ ಪಕ್ಷದ ನಾಯಕ R. Ashok ಮಗ ಶರತ್ ಅಶೋಕ್ ಗಿನ್ನೆಸ್ ರೆಕಾರ್ಡ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಾಗರದಾಳದಲ್ಲಿ ಬೃಹತ್ ಭಾರತೀಯ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಮೂಲಕ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್ ಅವರು ಗಿನ್ನೆಸ್ ವಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.

ಗಿನ್ನೆಸ್ ಪ್ರಮಾಣಪತ್ರ ಹಾಗೂ ಪದಕವನ್ನು ಪ್ರದಾನ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸ್ವರಾಜ್ದ್ವೀಪದಲ್ಲಿ ನಡೆದ ಈ ಸಾಹಸಮಯ ಕಾರ್ಯಕ್ರಮದಲ್ಲಿ ಸಾಗರದ ಆಳದಲ್ಲಿ ಅತಿ ದೊಡ್ಡ ಭಾರತೀಯ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಪ್ರಯತ್ನದಲ್ಲಿ ಶರತ್ ಅಶೋಕ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಅಪರೂಪದ ಸಾಧನೆಗಾಗಿ ಅವರಿಗೆ ಅಧಿಕೃತ ಗಿನ್ನೆಸ್ ಪ್ರಮಾಣಪತ್ರ ಹಾಗೂ ಪದಕವನ್ನು ಪ್ರದಾನ ಮಾಡಲಾಗಿದೆ.
ಡಿ.ಕೆ. ಜೋಶಿ ಅವರಿಂದ ಪ್ರಮಾಣಪತ್ರ ಸ್ವೀಕಾರ
ಅಂಡಮಾನ್ ಆಡಳಿತದ ವತಿಯಿಂದ ಲೋಕ್ ನಿವಾಸ್ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸನ್ಮಾನ ಸಮಾರಂಭದಲ್ಲಿ ನಿವೃತ್ತ ಅಡ್ಮಿರಲ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರಿಂದ ಶರತ್ ಅಶೋಕ್ ಅವರು ಗಿನ್ನೆಸ್ ಪ್ರಮಾಣಪತ್ರ ಮತ್ತು ಪದಕವನ್ನು ಸ್ವೀಕರಿಸಿದರು.
ಇದನ್ನು ಓದಿ : ಟನಲ್ ರೋಡ್ ಬಿಡಿ ಸ್ವಾಮಿ, ಶಿಕ್ಷಕರಿಗೆ ಮೊದಲು ಸಂಬಳ ಕೊಡಿ – R ಅಶೋಕ್

R. Ashok – ತಂದೆಯಾಗಿ ಇದು ಅಪಾರ ಹೆಮ್ಮೆ
ಒಬ್ಬ ತಂದೆಯಾಗಿ ಇದು ಅಪಾರ ಹೆಮ್ಮೆ ಮತ್ತು ಭಾವುಕತೆಯ ಕ್ಷಣ ಎಂದು ಹೇಳಿರುವ R. Ashok ಸಾಗರದಾಳದಲ್ಲಿ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿ ಗಿನ್ನೆಸ್ ವಿಶ್ವ ದಾಖಲೆಯ ಭಾಗವಾಗಲು ಅಸಾಧಾರಣ ಧೈರ್ಯ, ಸಮರ್ಪಣೆ, ಶಿಸ್ತು ಮತ್ತು ತಂಡದ ಕಾರ್ಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಶರತ್ ಅಶೋಕ್ ಅವರ ಈ ಸಾಧನೆ ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ಶರತ್, ನೀನು ಇನ್ನಷ್ಟು ಆಳಕ್ಕೆ ಇಳಿಯುತ್ತಾ, ಇನ್ನಷ್ಟು ಎತ್ತರಕ್ಕೆ ಏರುತ್ತಿರು” ಎಂದು ಪುತ್ರನಿಗೆ ಹಾರೈಸಿದ್ದಾರೆ.

ಇದನ್ನು ನೋಡಿ : ಸಿದ್ಧಗಂಗಾ ಮಠದಲ್ಲಿ ಧ್ವಜಾರೋಹಣ ನೆರವೇರಿಸಿದ ಡಾ.ಜಿ.ಪರಮೇಶ್ವರ್




