Bengaluru : ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ವಾಪಸ್ ಇಲ್ಲ – ಸಚಿವ ಯು.ಟಿ. ಖಾದರ್ ಸ್ಪಷ್ಟನೆ.!

ಜನರ ಆರೋಗ್ಯದ ಹಿತದೃಷ್ಟಿಯಿಂದ ಜಾರಿಗೆ ತರಲಾಗಿರುವ ತಂಬಾಕು ಹಾಗೂ ನಿಕೋಟಿನ್ ಅಂಶವುಳ್ಳ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ ಆದೇಶವನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಯಾವುದೇ ತೊಂದರೆಯಾಗದು ಎಂದು ಭರವಸೆ
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರದ ಈ ಕಠಿಣ ನಿರ್ಧಾರದಿಂದ ರಾಜ್ಯದ ಅಡಕೆ ಬೆಳೆಗಾರರು ಹಾಗೂ ಅಡಕೆ ಮಾರುಕಟ್ಟೆಯ ಮೇಲೆ ಯಾವುದೇ ತೊಂದರೆಯಾಗದು ಎಂದು ಭರವಸೆ ನೀಡಿದರು.
ಇದನ್ನು ಓದಿ : ಕರ್ನಾಟಕದಲ್ಲಿ ಗುಟ್ಕಾ, ತಂಬಾಕು ಪಾನ್ ಮಸಾಲಾ ಬ್ಯಾನ್!

ಕಳಪೆ ಅಡಕೆಯನ್ನೇ ಬಳಸಲಾಗುತ್ತಿತ್ತು
ಗುಟ್ಕಾ ತಯಾರಿಕೆಯಲ್ಲಿ ಸ್ಥಳೀಯ ಅಡಕೆಯ ಬದಲಿಗೆ ನೆಪಾಳ ಹಾಗೂ ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುವ ಕಳಪೆ ಗುಣಮಟ್ಟದ ಅಡಕೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಇದೀಗ ನಿಕೋಟಿನ್ ಮತ್ತು ತಂಬಾಕಿನ ಮೇಲಿನ ನಿರ್ಬಂಧದಿಂದ ಶುದ್ಧ ಅಡಕೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಇದರಿಂದ ಅಡಕೆ ಧಾರಣೆಯೂ ಏರಿಕೆಯಾಗಬಹುದು ಎಂದು ಸಚಿವರು ವಿಶ್ಲೇಷಿಸಿದರು. ಈ ಹಿಂದೆ ಗುಟ್ಕಾ ನಿಷೇಧದ ಸಂದರ್ಭದಲ್ಲೂ ಬೆಲೆ ಕುಸಿಯಲಿದೆ ಎಂದು ಆತಂಕ ವ್ಯಕ್ತವಾಗಿತ್ತು. ಆದರೆ ಕೇವಲ ಮೂರು ತಿಂಗಳ ಅವಧಿಯಲ್ಲಿ ಅಡಕೆ ಧಾರಣೆ ಏರಿಕೆಯಾಗಿತ್ತು.
Bengaluru – ವ್ಯಾಪಾರಿಗಳಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ
ಹೀಗಾಗಿ ಅಡಕೆ ಬೆಳೆಗಾರರು ಕನಿಷ್ಠ ಮೂರು ತಿಂಗಳ ಕಾಲ ಕಾದು ಪರಿಸ್ಥಿತಿಯನ್ನು ಗಮನಿಸಬೇಕು. ಸರ್ಕಾರದ ನಿರ್ಧಾರದ ಸಕಾರಾತ್ಮಕ ಫಲಿತಾಂಶ ತಿಳಿಯಲಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಇನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮವನ್ನು ಬೆಂಬಲಿಸಿದ್ದು, ರೈತರು ಮತ್ತು ವ್ಯಾಪಾರಿಗಳಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನು ನೋಡಿ : ಎರಡನೇ ದಿನದ ಕಲಾಪದಲ್ಲಿ ಕೊನೆ ಸಾಲಿನಲ್ಲಿ ಕುಳಿತ SIDDARAMAIAH




