ಬಿಡದಿ ಟೌನ್ಶಿಪ್ ವಿರೋಧಿಸಿ ಆ.9 ರಿಂದ JDS ಬೃಹತ್ ಪಾದಯಾತ್ರೆ – ಕೇಂದ್ರ ಸಚಿವ ಹೆಚ್ಡಿಕೆ ಚಾಲನೆ

ಬಿಡದಿ ಟೌನ್ಶಿಪ್ ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಹೊಸ ದಿನಾಂಕವನ್ನು ನಿಗದಿಯಾಗಿದೆ. JDS ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೊಸ ದಿನಾಂಕವನ್ನು ಘೋಷಿಸಿದ್ದಾರೆ. ಈ ಹಿಂದೆ ಜೆಡಿಎಸ್ ನಾಯಕಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಪಾದಯಾತ್ರೆಯನ್ನು ಇದೀಗ ಆಗಸ್ಟ್ 9, 10 ಮತ್ತು 11ರಂದು ನಡೆಸಲು ತೀರ್ಮಾನಿಸಲಾಗಿದೆ.

ಬಿಜೆಪಿ ಇಲ್ಲದೆ ಜೆಡಿಎಸ್ ಪಾದಯಾತ್ರೆ
ದೋಸ್ತಿ ಪಕ್ಷವಾಗಿರುವ ಬಿಜೆಪಿಯನ್ನು ದೂರವಿಟ್ಟು ಪಾದಯಾತ್ರೆ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಬಿಡದಿ ಟೌನ್ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಪಕ್ಷವು ಈ ಹೋರಾಟವನ್ನು ಹಮ್ಮಿಕೊಂಡಿದೆ. ಆಗಸ್ಟ್ 9ರಂದು ಭೈರಮಂಗಲದಿಂದ ಪಾದಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ತಲುಪಲಿದೆ. ಅದೇ ದಿನ ಜೆಡಿಎಸ್ ಬೃಹತ್ ಸಮಾವೇಶ ಆಯೋಜಿಸಿದೆ.
ಇದನ್ನು ಓದಿ : JDS ಭದ್ರಕೋಟೆ ಹಾಸನದಲ್ಲಿ ʼದಳಪತಿʼಗಳ ಅಬ್ಬರ
JDS ಪಾದಯಾತ್ರೆ ಕುಮಾರಸ್ವಾಮಿ ಚಾಲನೆ, ದೇವೇಗೌಡರ ಭಾಗಿ
ಇನ್ನು ಪಾದಯಾತ್ರೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಪಾದಯಾತ್ರೆಯಲ್ಲಿ ಒಂದು ದಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭಾಗವಹಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಆಗಸ್ಟ್ 14ರಂದು ವಿಧಾನಸೌಧ ಚಲೋ
ಪಾದಯಾತ್ರೆ ಬಳಿಕ ಆಗಸ್ಟ್ 14ರಂದು ಜೆಡಿಎಸ್ ವತಿಯಿಂದ ವಿಧಾನಸೌಧ ಚಲೋ ಕಾರ್ಯಕ್ರಮ ನಡೆಯಲಿದೆ. ಫ್ರೀಡಂ ಪಾರ್ಕ್ನಿಂದ ವಿಧಾನಸೌಧದವರೆಗೆ ಈ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಇದನ್ನು ನೋಡಿ : ಬರಪೀಡಿತ ಗ್ರಾಮಗಳಿಗೆ ಅಶೋಕ್ ಭೇಟಿ – ರೈತರ ಸಮಸ್ಯೆ ಆಲಿಸಿದ ವಿಪಕ್ಷ ನಾಯಕ





