Ishan Kishan ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸಿದ್ದಾರೆ.

ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಇಶಾನ್ ಕಿಶನ್ ನಾಲ್ಕು ವರ್ಷಗಳ ಬಳಿಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ Ishan kishan ಆರಂಭದಿಂದಲೇ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು.
ರನ್ಗಳ ಮಳೆ
ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಕ್ರಮಾಂಕ ಬದಲಾವಣೆಯ ಹಿನ್ನೆಲೆಯಲ್ಲಿ ಕಿಶನ್ ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ಪಡೆದಿದ್ದು, ಅದನ್ನು ಅದ್ಭುತವಾಗಿ ಬಳಸಿಕೊಂಡರು. ನಾಯಕ ಶುಭಮನ್ ಗಿಲ್ ಜೊತೆ ಮೂರನೇ ವಿಕೆಟ್ಗೆ 224 ರನ್ಗಳ ಅಮೋಘ ಜೊತೆಯಾಟ ಕಟ್ಟಿದ ಕಿಶನ್, ಜವಾಬ್ದಾರಿಯುತ ಆಟವಾಡುತ್ತಾ ರನ್ಗಳ ಮಳೆ ಹರಿಸಿದರು.

125 ರನ್ಗಳ ಸ್ಫೋಟಕ ಇನ್ನಿಂಗ್ಸ್
ಕೇವಲ 71 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಎರಡನೇ ಏಕದಿನ ಶತಕ ಪೂರೈಸಿದ ಇಶಾನ್ ಕಿಶನ್, ಶತಕದ ವೇಳೆ 14 ಬೌಂಡರಿ ಹಾಗೂ 4 ಸಿಕ್ಸರ್ಗಳನ್ನು ಸಿಡಿಸಿದ್ದರು.
ಇನ್ನಿಂಗ್ಸ್ನಲ್ಲಿ ಒಟ್ಟು 79 ಎಸೆತಗಳನ್ನು ಎದುರಿಸಿದ ಕಿಶನ್, 14 ಬೌಂಡರಿ ಮತ್ತು 7 ಸಿಕ್ಸರ್ಗಳ ನೆರವಿನಿಂದ 125 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಇದನ್ನು ಓದಿ : ಇಶಾನ್ ಕಿಶನ್ಗೆ ಒಲಿದ ತಂಡದ ನಾಯಕತ್ವ
ಆ ಮೂಲಕ ಅವರು ದ್ವಿಶತಕ ಸಿಡಿಸುವ ಅವಕಾಶವನ್ನು ಹೊಂದಿದ್ದರು. ಆದರೆ, ಅವರು ಖರೋಟಿ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಕೊಟ್ಟರು.
ಇವರು ನಾಯಕ ಶುಭಮನ್ ಗಿಲ್ ಅವರ ಜೊತೆಗೆ ಮೂರನೇ ವಿಕೆಟ್ಗೆ 140 ಎಸೆತಗಳಲ್ಲಿ 224 ರನ್ಗಳ ಜೊತೆಯಾಟವನ್ನು ಆಡಿದ್ದರು.

ಅಫ್ಘಾನಿಸ್ತಾನ ವಿರುದ್ಧ ಮೂರನೇ ವೇಗದ ಶತಕ ಬಾರಿಸಿದ Ishan Kishan
ಈ ಶತಕದೊಂದಿಗೆ ಇಶಾನ್ ಕಿಶನ್ ಮತ್ತೊಂದು ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಅತ್ಯಂತ ವೇಗವಾಗಿ ಶತಕ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಈ ಪಟ್ಟಿಯಲ್ಲಿ 57 ಎಸೆತಗಳಲ್ಲಿ ಶತಕ ಬಾರಿಸಿದ್ದ ಇಂಗ್ಲೆಂಡ್ ಮಾಜಿ ನಾಯಕ ಐಯಾನ್ ಮಾರ್ಗನ್ ಮೊದಲ ಸ್ಥಾನದಲ್ಲಿದ್ದರೆ, 63 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನು ನೋಡಿ : CONGRESS ಜನರನ್ನ ಎತ್ತಿ ಕಟ್ಟುತ್ತಿದೆ – ಸರ್ಕಾರದ ವಿರುದ್ಧ VIJAYENDRA ಕಿಡಿ.!





