Renukaswamy ಅವರ ಶತಾಯುಷಿ ಅಜ್ಜಿ 101ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಅವರ ಅಜ್ಜಿ ಪ್ರಮೀಳಾದೇವಿ ಅವರು ಮೊಮ್ಮಗನ ಸಾವಿನ ಸತ್ಯ ತಿಳಿಯದೆಯೇ ಕೊನೆಯುಸಿರೆಳೆದಿದ್ದಾರೆ.

ರೇಣುಕಾಸ್ವಾಮಿ ಅಜ್ಜಿ ಇನ್ನಿಲ್ಲ!
ರೇಣುಕಾಸ್ವಾಮಿ ಹತ್ಯೆ ನಡೆದು ಒಂದೂವರೆ ವರ್ಷ ಕಳೆದರೂ ಆ ನೋವಿನಿಂದ ಕುಟುಂಬ ಇನ್ನೂ ಹೊರಬಂದಿಲ್ಲ. ಈ ನಡುವೆ ರೇಣುಕಾಸ್ವಾಮಿ ಅವರ ಶತಾಯುಷಿ ಅಜ್ಜಿ ಪ್ರಮೀಳಾದೇವಿ ಅವರು ಬುಧವಾರ ನಿಧನರಾಗಿದ್ದಾರೆ. ರೇಣುಕಾಸ್ವಾಮಿ ಎಂದರೆ ಅಜ್ಜಿ ಪ್ರಮೀಳಾದೇವಿಗೆ ಅಪಾರ ಪ್ರೀತಿ ಇತ್ತು. ಮೊಮ್ಮಗ ಕೂಡ ಅಜ್ಜಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ರೇಣುಕಾಸ್ವಾಮಿ ಹತ್ಯೆಯಾದ ಬಳಿಕವೂ ಅಜ್ಜಿಗೆ ಆ ಸಾವಿನ ಸತ್ಯವನ್ನು ಸಂಪೂರ್ಣವಾಗಿ ತಿಳಿಸಿರಲಿಲ್ಲ ಎನ್ನಲಾಗಿದೆ.
ಇದನ್ನು ಓದಿ : ದರ್ಶನ್ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ಆರಂಭ!

Renukaswamy ಪ್ರಕರಣ ಏನಾಯ್ತು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಬರ್ಬರ ಕೊಲೆ ಹಿಂದಿನ ಆರೋಪಿಯಾಗಿ ಸ್ಯಾಂಡಲ್ವುಡ್ ನಟ ದರ್ಶನ್ ಕೂಡ ಜೈಲು ಸೇರಿದ್ದಾರೆ. ಸುಪ್ರೀಂ ಕೋರ್ಟ್ ಖಡಕ್ ಆದೇಶದ ಮೇರೆಗೆ ಸೆಷನ್ಸ್ ಕೋರ್ಟ್ನಲ್ಲಿ ಸಾಕ್ಷಿಗಳ ವಿಚಾರಣೆ ನಡೆದಿದೆ.

ಇದನ್ನು ನೋಡಿ : ವಿದ್ಯಾರ್ಥಿಗಳ ಜೀವಕ್ಕೆ ಬೆಲೆ ಇಲ್ವಾ – ಕಣ್ಮುಚ್ಚಿ ಕುಳಿತಿದ್ಯಾ ಶಿಕ್ಷಣ ಇಲಾಖೆ.!?




