ಮಂತ್ರಿ ಸ್ಥಾನಾನೇ ಬೇಡ – ಕೈ ಶಾಸಕ Shadakshari.

ಕರ್ನಾಟಕ ರಾಜಕಾರಣದಲ್ಲಿ ಸಚಿವ ಸಂಪುಟ ರಚನೆ ಹಾಗೂ ವಿಸ್ತರಣೆಯ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸಿದೆ. ಅಧಿಕಾರ ರಾಜಕಾರಣದ ಏರಿಳಿತಗಳ ನಡುವೆ ಜನಪ್ರತಿನಿಧಿಗಳ ಅಸಮಾಧಾನ ಮತ್ತು ದೈವದ ಆಶೀರ್ವಾದದಂತಹ ರೋಚಕ ಸಂಗತಿಗಳು ಮುಂಚೂಣಿಗೆ ಬಂದಿವೆ. ರಾಜ್ಯದ ನೂತನ ರಾಜಕೀಯ ಬೆಳವಣಿಗೆಗಳು ಒಂದು ಕಡೆ ಶಾಸಕರಲ್ಲಿನ ಅಸಮಾಧಾನವನ್ನು ಹೊರಹಾಕುತ್ತಿದ್ದರೆ, ಮತ್ತೊಂದು ಕಡೆ ಪ್ರಮುಖ ನಾಯಕರ ಅಧಿಕಾರ ಪ್ರಾಪ್ತಿಯಲ್ಲಿ ದೇವಸ್ಥಾನಗಳ ಪ್ರಭಾವದ ಚರ್ಚೆಯನ್ನು ಮುನ್ನಲೆಗೆ ತಂದಿವೆ.

ನನ್ನನ್ನು ಮಂತ್ರಿ ಮಾಡಿದರೆ ರಾಜ್ಯ ಸರ್ಕಾರವೇ ಬಿದ್ದು ಹೋಗುತ್ತದೆಯಂತೆ
ತಿಪಟೂರಿನಲ್ಲಿ ನಡೆದ ಶಾಲಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಕೆ ಷಡಕ್ಷರಿ ಅವರು, ಸಚಿವ ಸಂಪುಟ 2.0 ವಿಸ್ತರಣೆಯಲ್ಲಿ ತಮ್ಮನ್ನು ಪರಿಗಣಿಸದಿರುವ ಬಗ್ಗೆ ಬೇಸರ ಹೊರಹಾಕಿದರು. “ನನ್ನನ್ನು ಮಂತ್ರಿ ಮಾಡಿದರೆ ರಾಜ್ಯ ಸರ್ಕಾರವೇ ಬಿದ್ದು ಹೋಗುತ್ತದೆಯಂತೆ ಎಂದು ಕೆಲ ಹಿರಿಯ ನಾಯಕರು ಹೇಳುತ್ತಿದ್ದಾರೆ” ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ, ರಾಜ್ಯದಲ್ಲಿ ಸರ್ಕಾರ ಭದ್ರವಾಗಿರಲಿ ಎಂದು ತಮ್ಮ ಮನಸ್ಸಿನ ನೋವನ್ನು ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಡಿಕೆಶಿ ಸಂಪುಟದಲ್ಲಿ ತುಮಕೂರಿನ ಯಾರ್ಯಾರಿಗೆ ಮಣೆ..?

ಅಧಿಕಾರ ಯೋಗ ಇದ್ದರೆ ಅವಕಾಶ ಸಿಗುತ್ತದೆ
ಕ್ಷೇತ್ರದ ಅನೇಕ ರೈತರು ಮತ್ತು ಸಾರ್ವಜನಿಕರು ನಾನು ಸಚಿವನಾಗಬೇಕು ಮತ್ತು ಅಧಿಕಾರದಲ್ಲಿರಬೇಕು ಎಂದು ಬಯಸಿದ್ದರು. ಈ ಶುಭ ಸಂದರ್ಭದಲ್ಲಿ ಇಂತಹ ರಾಜಕೀಯ ಮಾತುಗಳನ್ನು ಆಡುವುದು ಸೂಕ್ತವಲ್ಲದಿದ್ದರೂ ಮನಸ್ಸಿಗೆ ತೀವ್ರ ನೋವಾದ ಕಾರಣ ಈ ಸತ್ಯವನ್ನು ಸಾರ್ವಜನಿಕರ ಮುಂದೆ ಹಂಚಿಕೊಳ್ಳುತ್ತಿದ್ದೇನೆ ಎಂದು ಶಾಸಕರು ಸ್ಪಷ್ಟಪಡಿಸಿದರು.

ಸರ್ಕಾರದ ಭದ್ರತೆಗೆ ಪ್ರಾರ್ಥಿಸುತ್ತೇನೆ
ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ Shadakshari , “ಹಣೆಬರಹದಲ್ಲಿ ಅಧಿಕಾರ ಯೋಗ ಬರೆದಿದ್ದರೆ ಮುಂದೊಂದು ದಿನ ಖಂಡಿತ ಅವಕಾಶ ಸಿಗುತ್ತದೆ” ಎಂದು ಭಾವುಕರಾಗಿ ಹೇಳಿದರು. ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರೂ ಪಕ್ಷದ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ ಅವರು, ಸರ್ಕಾರದ ಭದ್ರತೆಗೆ ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.
ಇದನ್ನು ನೋಡಿ : PARAMಗೆ ಮತ್ತೆ ಮತ್ತೆ ಅನ್ಯಾಯ ಆಗ್ತಾ ಇದೆ – ಪಕ್ಷಕ್ಕೆ ರಾಜೀನಾಮೆ ನೀಡಲು ಮುಖಂಡರ ಒತ್ತಾಯ




