ಗೃಹ ಖಾತೆಯನ್ನು ಕಳೆದುಕೊಳ್ತಾರಾ ಪರಂ? Tumkur ನ ಯಾವ ಶಾಸಕರಿಗೆ ಸಚಿವ ಸ್ಥಾನ?

ನಾಳೆ ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲು ವೇದಿಕೆ ಸಜ್ಜಾಗುತ್ತಿದ್ದು, ಇನ್ಮುಂದೆ ರಾಜ್ಯದಲ್ಲಿ ಡಿಕೆ ಹವಾ ಶುರುವಾಗಲಿದೆ. ಸಿಎಂ ನೇತೃತ್ವದ ಸಚಿವ ಸಂಪುಟಕ್ಕೆ ಎಂಟ್ರಿ ಕೊಡಲು ಈಗಾಗಲೇ ಹಿರಿಯ ಶಾಸಕರು ಸೇರಿ ಅನೇಕ ಶಾಸಕರು ಲಾಭಿ ಮಾಡ್ತಿದ್ದು,ಯಾರಿಗೆಲ್ಲಾ ಸಚಿವ ಸ್ಥಾನ ಒಲಿಯಲಿದೆ ಅನ್ನೋದು ಮಾತ್ರ ಇನ್ನೂ ಅಸ್ಪಷ್ಟವಾಗಿದೆ..ಈ ನಡುವೆ ಕಲ್ಪತರು ನಾಡು ತುಮಕೂರಿನಲ್ಲೂ ಸಚಿವಾಕಾಂಕ್ಷಿಗಳ ದಂಡು ಹೈಕಮಾಂಡ್ ಮುಂದೆ ನಾ ಮುಂದು ತಾ ಮುಂದು ಎಂದು ಲಾಭಿ ನಡೆಸುತ್ತಿದ್ದಾರೆ.

ಪರಮೇಶ್ವರ್ಗೆ ಗೃಹ ಖಾತೆ ಕೈ ತಪ್ಪಲಿದ್ಯಾ..?
ಇದೀಗ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೇರಲು ತುಮಕೂರಿನ ನಾಲ್ವರು ಶಾಸಕರು ರೇಸ್ ನಲ್ಲಿದ್ದು,,ಜಿಲ್ಲೆಯಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಹಿರಿಯ ಶಾಸಕ ಡಾ.ಜಿ.ಪರಮೇಶ್ವರ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದು, ಡಿಸಿಎಂ ಜೊತೆಗೆ ಒಂದು ಪ್ರಬಲ ಖಾತೆ ನೀಡುವಂತೆ ಬ್ಯಾಟ್ ಬೀಸಿದ್ದಾರೆ.

ಗೃಹ ಖಾತೆ ಕೊಡದಿದ್ರೆ ಶಾಸಕನಾಗಿ ಇರುವ ನಿರ್ಧಾರ
ಸದ್ಯ ಪರಮೇಶ್ವರ್ ಗೆ ಹೈಕಮಾಂಡ್ ಸ್ಪೀಕರ್ ಸ್ಥಾನವನ್ನ ಆಫರ್ ಮಾಡಿದೆ ಅನ್ನೋ ಮಾತುಗಳು ಸಹ ಕೇಳಿ ಬರ್ತಿದೆ. ಸ್ಪೀಕರ್ ಅಥವಾ ಗೃಹ ಇಲಾಖೆ ಬದಲಿಗೆ ಬೇರೊಂದು ಖಾತೆ ನೀಡಿ ಕ್ಯಾಬಿನೇಟ್ ಗೆ ಸೇರಿಸಿಕೊಳ್ಳೋ ಪ್ಲಾನ್ ಕೂಡ ನಡೆದಿದೆ ಎನ್ನಲಾಗಿದೆ. ಸ್ಪೀಕರ್ ಅಥವಾ ಬೇರೊಂದು ಖಾತೆಯ ಆಫರ್ ಗೆ ಪರಮೇಶ್ವರ್ ನೋ ಅನ್ನೋ ಮೂಲಕ ಕಾದುನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಪರಮೇಶ್ವರ್ ಅವರು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಹಾಗೇನಾದರೂ ಖಾತೆ ಬದಲಿಸಿ ಡಿಸಿಎಂ ನೀಡದಿದ್ದಲ್ಲಿ, ಕೇವಲ ಶಾಸಕನಾಗಿಯೇ ಉಳಿಯುತ್ತೇನೆ ಅನ್ನೋ ಸಂದೇಶವನ್ನ ಪರಮೇಶ್ವರ್ ಹೈಕಮಾಂಡ್ಗೆ ರವಾನಿಸಿದ್ದಾರೆ ಎನ್ನಲಾಗ್ತಿದೆ.

ಟಿಬಿ ಜಯಚಂದ್ರ ಕ್ಯಾಬಿನೇಟ್ ಸೇರಲು ಲಾಭಿ
ಇನ್ನು ಸಿದ್ದರಾಮಯ್ಯ ಕ್ಯಾಬಿನೇಟ್ ನಲ್ಲಿ ಅವಕಾಶ ವಂಚಿತರಾಗಿದ್ದ ಶಿರಾ ಶಾಸಕ ಟಿಬಿ ಜಯಚಂದ್ರ, ಇದೀಗ ಡಿಕೆ ಶಿವಕುಮಾರ್ ಕ್ಯಾಬಿನೇಟ್ ಸೇರೋಕೆ ಅಣಿಯಾಗಿದ್ದಾರೆ. ಈ ಹಿಂದೆ ಸಂಪುಟ ದರ್ಜೆಯ ದೆಹಲಿ ಪ್ರತಿನಿಧಿ ಸ್ಥಾನಮಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಟಿಬಿ ಜಯಚಂದ್ರ ಇದೀಗ ಕ್ಯಾಬಿನೇಟ್ ಸೇರಲು ಶತಾಯಗತಾಯ ಲಾಭಿ ನಡೆಸುತ್ತಿದ್ದಾರೆ. ಟಿಬಿ ಜಯಚಂದ್ರ ಕಾನೂನು ಮಂತ್ರಿಯಾಗಿ ಈ ಬಾರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಅನ್ನೋ ಸುದ್ದಿ ಶಿರಾ ಕ್ಷೇತ್ರ ಸೇರಿದಂತೆ ತುಮಕೂರು ಜಿಲ್ಲೆಯಾದ್ಯಂತ ಹರಿದಾಡುತ್ತಿದೆ. ಈ ಜೊತೆಗೆ ಸಂಭಾವ್ಯ ಸಚಿವರುಗಳ ಪಟ್ಟಿಯಲ್ಲೂ ಟಿಬಿ ಜಯಚಂದ್ರ ಹೆಸರು ಕೇಳಿಬಂದಿದೆ.

ರಂಗನಾಥ್ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ
ಇನ್ನೂ ಗುಬ್ಬಿ ಶಾಸಕ,ಡಿಕೆ ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರೋ ಎಸ್.ಆರ್.ಶ್ರೀನಿವಾಸ್ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸಂಭಾವ್ಯ ಸಚಿವರ ಲಿಸ್ಟ್ ನಲ್ಲಿ ಕೂಡ ಎಸ್.ಆರ್.ಶ್ರೀನಿವಾಸ್ ಅವರ ಹೆಸರು ಕೇಳಿಬಂದಿದ್ದು,,ಇಂದು ರಾತ್ರಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಮನವೊಲಿಕೆಗೂ ಶ್ರೀನಿವಾಸ್ ಮುಂದಾಗಿದ್ದಾರೆ. ಇತ್ತ ರಂಗನಾಥ್ ಡಿಕೆ ಸಂಬಂಧಿಕರು ಕೂಡ ಆಗಿದ್ದು, ಈ ಬಾರಿ ರಂಗನಾಥ್ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.
ಇದನ್ನು ಓದಿ : ಹಳೆ ಬೇರು, ಹೊಸ ಚಿಗುರು ಫಾರ್ಮುಲಾ – 8ಕ್ಕೂ ಹೆಚ್ಚು ಯುವ ನಾಯಕರಿಗೆ ಮಂತ್ರಿಗಿರಿ?

ನಾನು ಸಚಿವ ಸ್ಥಾನದ ಆಕಾಂಕ್ಷಿ
ನಾನು ಸಚಿವ ಸ್ಥಾನದ ಆಕಾಂಕ್ಷಿ ಅನ್ನೋ ಮೂಲಕ ತಿಪಟೂರು ಕ್ಷೇತ್ರದ ಶಾಸಕ ಷಡಕ್ಷರಿ ಕೂಡ ಸಚಿವ ಸ್ಥಾನಕ್ಕೆ ಟವಲ್ ಹಾಕಿದ್ದಾರೆ. ಲಿಂಗಾಯತ ಕೋಟದಡಿ ಸಚಿವ ಸ್ಥಾನಕ್ಕೆ ಡಿಮ್ಯಾಂಡ್ ಇಟ್ಟಿರೋ ಷಡಕ್ಷರಿ, ಈ ಬಾರಿ ಮಂತ್ರಿಯಾಗೋ ಕನಸು ಹೊತ್ತಿದ್ದಾರೆ. ಷಡಕ್ಷರಿಗೆ ಗೆ ಸಚಿವ ಸ್ಥಾನ ನೀಡಬೇಕೆಂದು ಈಗಾಗಲೇ ಕ್ಷೇತ್ರದ ಮುಖಂಡರು, ಸ್ವಾಮೀಜಿಗಳು ಬ್ಯಾಟ್ ಬೀಸಿದ್ದಾರೆ.

ಐವರಲ್ಲಿ ಇಬ್ಬರಿಗೆ ಮಾತ್ರ ಮಂತ್ರಿಗಿರಿ
ಅದೇನೆ ಆಗಲಿ ಡಾ.ಜಿ.ಪರಮೇಶ್ವರ್, ಟಿಬಿ ಜಯಚಂದ್ರ, ಎಸ್.ಆರ್.ಶ್ರಿನಿವಾಸ್, ಷಡಕ್ಷರಿ, ರಂಗನಾಥ್ ಸಚಿವ ಸ್ಥಾನದ ರೇಸ್ ನಲ್ಲಿದ್ದು, ಐವರಲ್ಲಿ ಇಬ್ಬರಿಗೆ ಮಂತ್ರಿಗಿರಿ ಸಿಗಲಿದೆ ಎನ್ನಲಾಗಿದೆ. ಹಿರಿಯ ಶಾಸಕ ಡಾ.ಜಿ.ಪರಮೇಶ್ವರ್ ಹೆಸರು ಈಗಾಗಲೇ ಮುಂಚೂಣಿಯಲಿದ್ದು,,ಅವರೊಟ್ಟಿಗೆ ಸಚಿವ ಸ್ಥಾನ ಪಡೆಯಲಿರುವ ಇನ್ನೋರ್ವ ಶಾಸಕ ಯಾರು ಅನ್ನೋದನ್ನ ಕಾದುನೋಡ್ಬೇಕಿದೆ.
ಇದನ್ನು ನೋಡಿ : ನಾನು ಮಂತ್ರಿ ಆದ್ರೆ ಸರ್ಕಾರ ಬಿದ್ದೋಗುತ್ತೆ ಅಂತೆ – ಹಾಗಾದ್ರೆ ಮಂತ್ರಿ ಸ್ಥಾನನೇ ಬೇಡ ಎಂದ SHADKSHARI




