Tiptur : ಶಾಸಕ ಷಡಕ್ಷರಿ ವಿರುದ್ದ ಜಾತಿ ನಿಂದನೆಯ ಆರೋಪ ಕೇಳಿಬಂದಿದೆ.

Tiptur ಶಾಸಕ ಷಡಕ್ಷರಿ ವಿರುದ್ದ ಜಾತಿ ನಿಂದನೆಯ ಆರೋಪವೊಂದು ಕೇಳಿಬಂದಿದೆ. ಮೇ.27 ರಂದು ತಿಪಟೂರಿನಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ ಮುಂದೆ ಛಲವಾದಿ ಯುವ ಬ್ರಿಗೇಡ್ ತಾಲ್ಲೂಕು ಘಟಕದ ಅಧ್ಯಕ್ಷ ಮಧುಸೂದನ್ ಎಂಬುವರು ಚಪ್ಪಲಿಯಿಂದ ಹೊಡೆದುಕೊಂಡಿದ್ದರು.
ನಿಮಗೆ ಮತ ಹಾಕಿದ್ದಕ್ಕೆ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು
ಶಾಸಕ ಷಡಕ್ಷರಿ ಸಭೆಗೆ ತಡವಾಗಿ ಬಂದರು ಅನ್ನೋ ಕಾರಣಕ್ಕೆ ಶುರುವಾದ ವಾಗ್ವಾದ,ಇದೀಗ ಜಾತಿ ನಿಂದನೆ ದೂರು ನೀಡೋವರೆಗೂ ಬಂದು ಮುಟ್ಟಿದೆ. ನಿಮಗೆ ಮತ ಹಾಕಿದ್ದಕ್ಕೆ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಎಂದು ಸಭೆಯಲ್ಲಿ ಮಧುಸೂದನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಚಪ್ಪಲಿಯಿಂದ ಹೊಡೆದುಕೊಂಡ ಮುಖಂಡ
ನಿಗದಿಪಡಿಸಿದ್ದ ಸಭೆಗೆ ಶಾಸಕರು ತಡವಾಗಿ ಬಂದಿದ್ದನ್ನು ಅಲ್ಲಿದ್ದ ಪರಿಶಿಷ್ಟ ಸಮುದಾಯದ ಮುಖಂಡರು ಪ್ರಶ್ನಿಸಿದ್ದರು.ಈ ವೇಳೆ ಶಾಸಕರು ಮತ್ತು ಮುಖಂಡರ ಮಧ್ಯೆ ಮಾತಿನ ಚಕಮಕಿ ಸಹ ಉಂಟಾಗಿದೆ.
ಶಾಸಕ ಷಡಕ್ಷರಿ ಅವರ ಮೇಲೆ ಸಿಟ್ಟಾದ ಮಧುಸೂದನ್ ಚಪ್ಪಲಿಯಿಂದ ಹೊಡೆದುಕೊಂಡಿದ್ದರು.

ಎಸ್ಸಿ, ಎಸ್ಟಿ ಸಭೆಯಲ್ಲಿ ನಡೆದ ಗಲಾಟೆಯೇ ಈ ಆರೋಪಕ್ಕೆ ಕಾರಣ..?
ಸಭೆಯಲ್ಲಿದ್ದ ಅಧಿಕಾರಿಗಳು ಹಾಗೂ ಮುಖಂಡರು ಪರಿಸ್ಥಿತಿಯನ್ನ ತಿಳಿಗೊಳಿಸಿ ಸಭೆಯನ್ನ ಮುಂದುವರೆಸಿದ್ದರು. ಇದಾದ ಬಳಿಕ ಮೇ.31 ರಂದು ಛಲವಾದಿ ಯುವ ಬ್ರಿಗೇಡ್ ತಾಲ್ಲೂಕು ಘಟಕದ ಅಧ್ಯಕ್ಷ ಮಧುಸೂದನ್ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ಷಡಕ್ಷರಿ ವಿರುದ್ದ ದೂರು ದಾಖಲಿಸಿದ್ದಾರೆ. ಶಾಸಕರು ಸಾರ್ವಜನಿಕವಾಗಿ ಅವಾಚ್ಯ ಪದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ. ಎಸ್ಸಿ,ಎಸ್ಟಿ ಕಾಯ್ದೆ ಅಡಿ ಕೇಸು ದಾಖಲಿಸಿ ನನಗೆ ರಕ್ಷಣೆ ಕಲ್ಪಿಸಿ, ಶಾಸಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಧುಸೂದನ್ ದೂರು ನೀಡಿದ್ದಾರೆ.
ಇದನ್ನು ಓದಿ : ನನ್ನನ್ನು ಮಂತ್ರಿ ಮಾಡಿದ್ರೆ ಸರ್ಕಾರ ಬಿದ್ದೋಗುತ್ತಂತೆ – ಕೆ. ಷಡಕ್ಷರಿ

ಪೊಲೀಸ್ ಠಾಣೆ ಮೆಟ್ಟಿಲೇರಿದ ಮುಖಂಡನ ರಂಪಾಟ!
ಮಧುಸೂದನ್ ದೂರಿನನ್ವಯ ತಿಪಟೂರು ಪೊಲೀಸ್ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲಾ.
ಶಾಸಕರ ವಿರುದ್ದದ ಈ ಆರೋಪಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು,ಸಭೆಯಲ್ಲಿ ನಡೆದ ಇಬ್ಬರ ನಡುವಿನ ವಾಗ್ವಾದವೇ ಈ ಜಾತಿ ನಿಂದನೆ ಆರೋಪಕ್ಕೆ ಕಾರಣ ಎನ್ನಲಾಗ್ತಿದೆ.

ಇದನ್ನು ನೋಡಿ : ಇನ್ನೆರಡು ವರ್ಷ ಮಾತ್ರ ಅವಧಿ ಇದೆ – ವೇಗವಾಗಿ ಕೆಲಸ ಮಾಡ್ತೇನೆ ಎಂದ PARAM.!




