ಜಮೀರ್ ಪರ ಬೀದಿಗಿಳಿದ ಕಾರ್ಯಕರ್ತರು – DCM ಸ್ಥಾನಕ್ಕೆ ಆಗ್ರಹಿಸಿ ಚಾಮರಾಜಪೇಟೆಯಲ್ಲಿ ಪ್ರತಿಭಟನೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸ್ಥಳೀಯ ನಿವಾಸಿಗಳು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

“ನಮ್ಮ ನಾಯಕ – ನಮ್ಮ ಹೆಮ್ಮೆ”
“ನಮ್ಮ ನಾಯಕ – ನಮ್ಮ ಹೆಮ್ಮೆ” ಹಾಗೂ “I Stand With B.Z. Zameer Ahmed Khan” ಎಂಬ ಘೋಷಣೆಗಳೊಂದಿಗೆ ನಡೆದ ಪ್ರತಿಭಟನೆಯಲ್ಲಿ, ಜಮೀರ್ ಅಹ್ಮದ್ ಖಾನ್ ಅವರ ಪರ ಬೆಂಬಲ ವ್ಯಕ್ತಪಡಿಸಲಾಯಿತು. ಸರ್ವಧರ್ಮಗಳ ಸೇವಕರಾಗಿ ಗುರುತಿಸಿಕೊಂಡಿರುವ ಚಾಮರಾಜಪೇಟೆ ಕ್ಷೇತ್ರದ ಶಾಸಕರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಇನ್ನಷ್ಟು ಮಹತ್ವದ ಸ್ಥಾನಮಾನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನು ಓದಿ : ನನಗೆ ಯಾವುದೇ ಮುನಿಸಿಲ್ಲ, ಯಾವುದೇ ಕಂಡೀಶನ್ ಹಾಕಿಲ್ಲ’ – ಸಚಿವ Zameer Ahmed Khan ಸ್ಪಷ್ಟನೆ..!!

DCM ಹುದ್ದೆ ನೀಡಬೇಕೆಂದು ಬೆಂಬಲಿಗರಿಂದ ಆಘ್ರಹ
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಿ ಮೌನ ಧರಣಿ ನಡೆಸಿದರು. ರಾಜ್ಯದ ಅಭಿವೃದ್ಧಿ, ಅಲ್ಪಸಂಖ್ಯಾತರು ಹಾಗೂ ಬಡವರ ಪರ ಜಮೀರ್ ಅಹ್ಮದ್ ಖಾನ್ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರಿಗೆ DCM ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷದ ನೂರಾರು ಕಾರ್ಯಕರ್ತರು ಪ್ರೊಟೆಸ್ಟ್ನಲ್ಲಿ ಭಾಗಿ
ಇನ್ನು ಪ್ರತಿಭಟನೆಯಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ನಿರ್ದೇಶಕರು, ಹಿರಿಯ ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಮತ್ತು ಡಿಸಿಸಿ ಸದಸ್ಯರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಘಟಕದ ಸದಸ್ಯರು ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದರು.

ಇದನ್ನು ನೋಡಿ : IDSMT ಜಾಗದ ಹೋರಾಟಕ್ಕೆ ಮೊದಲ ಜಯ – ಅಕ್ರಮ ಭೂ ಕಬಳಿಕೆದಾರರಿಗೆ ಉರುಳಾಗುತ್ತಾ?




