Bengaluru : ಹಲಸಿನ ಹಣ್ಣಿನ ಆಸೆಗೆ ಹೋಯ್ತು ಜೀವ!

ಹಲಸಿನ ಹಣ್ಣಿನ ಆಸೆಗೆ ವಿದ್ಯಾರ್ಥಿಯೊಬ್ಬ ಜೀವ ಕಳೆದುಕೊಂಡಿರುವ ದಾರುಣ ಘಟನೆ Bengaluru ನಗರದ ಜಿಕೆವಿಕೆ ಆವರಣದಲ್ಲಿ ನಡೆದಿದೆ.

ಹಣ್ಣಿನ ಆಸೆಗೆ ಜೀವ ಕಳೆದುಕೊಂಡ ವಿದ್ಯಾರ್ಥಿ!
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಮೂಲದ ಮೃತ ವಿದ್ಯಾರ್ಥಿ ಆಕಾಶ್ ಜಿಕೆವಿಕೆಯಲ್ಲಿ MSC ಅಗ್ರಿಕಲ್ಚರ್ ವ್ಯಾಸಾಂಗ ಮಾಡ್ತಾ ಇದ್ದರು. ರಾತ್ರಿ 12 ರಿಂದ 1 ಗಂಟೆ ಸುಮಾರಿಗೆ ಹಲಸಿನ ಹಣ್ಣನ್ನು ಕೀಳಲು ವಿದ್ಯಾರ್ಥಿ ಆಕಾಶ್ ಮರವನ್ನು ಹತ್ತಿದ್ದು, ಆಯತಪ್ಪಿ ಮರದಿಂದ ಕೆಳಗೆ ಬಿದ್ದದ್ದಾರೆ.
ಇದನ್ನು ಓದಿ : ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿದ್ದ ಯುವಕ ಹೃದಯಾಘಾತದಿಂದ ಸಾವು

ಪೊಲೀಸರು ಭೇಟಿ ನೀಡಿ ಪರಿಶೀಲನೆ
ಕೂಡಲೇ ವಿದ್ಯಾರ್ಥಿಯನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ವಿದ್ಯಾರ್ಥಿ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದುರಂತ ಅಂತ್ಯ ಕಂಡ ಆಕಾಶ್
ರೈತಾಪಿ ಕುಟುಂಬದ ಬಂದು ಸರ್ಕಾರಿ ಸೀಟ್ ಪಡೆದು ವಿದ್ಯಾಭ್ಯಾಸ ಮಾಡ್ತಿದ್ದ ಎಂಎಸ್ಸಿ ಕೃಷಿ ಓದುತ್ತಿದ್ದ ಆಕಾಶ್ ದುರಂತ ಅಂತ್ಯ ಕಂಡಿದ್ದಾರೆ. ಹಲಸಿನ ಹಣ್ಣಿನ ಆಸೆಗೆ ಮರದಿಂದ ಬಿದ್ದು ಜೀವ ಕಳೆದುಕೊಂಡ ಮಗನ ಸಾವಿನ ಸುದ್ದಿ ತಿಳಿದು ಪೋಷಕರು ಶಾಕ್ ಆಗಿದ್ದಾರೆ.
ಇದನ್ನು ನೋಡಿ : ಜೂಜು ಅಡ್ಡೆ ಮೇಲೆ TUMAKURU POLICE RAID – ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ




