ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಇಂದು D.K ಶಿವಕುಮಾರ್ ಭೇಟಿ.

ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್ ಅವರು ರಾಜ್ಯದ ಒಂದಿಲ್ಲೊಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸುತ್ತಾರೆ. ನಿನ್ನೆಯಷ್ಟೇ ಅಣ್ಣಮ್ಮ ದೇವಿ ದರ್ಶನ ಪಡೆದಿದ್ದ ಡಿಕೆಶಿ, ಇಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ.

ಆರಾಧ್ಯ ದೈವ ಅಜ್ಜಯ್ಯನ ಪೀಠಕ್ಕೆ ಪೂಜೆ ಸಲ್ಲಿಕೆ
ಇಂದು ಸಂಜೆ 5 ಗಂಟೆಗೆ ಮಠಕ್ಕೆ ಆಗಮಿಸಲಿರುವ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ದೈವ ಅಜ್ಜಯ್ಯನ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಮಠದಲ್ಲೇ ತಂಗಿ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸಲಿದ್ದಾರೆ.

D.K ಅವರ ಆಡಳಿತದ ಬಗ್ಗೆ ಶಿವಯೋಗೀಶ್ವರ ಸ್ವಾಮೀಜಿ ಹೇಳಿದ್ದೇನು?
ಇತ್ತೀಚೆಗೆ D.K ಶಿವಕುಮಾರ್ ಅವರ ಆಡಳಿತ ಮತ್ತು ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ್ದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ, ಶಾಸ್ತ್ರದ ಪ್ರಕಾರ ಎಲ್ಲಾ ದೋಷಗಳನ್ನು ಪರಿಗಣಿಸಿಕೊಂಡು ಮುನ್ನಡೆಯುವಂತೆ ಸಲಹೆ ನೀಡಿದ್ದರು. ಜೊತೆಗೆ ಶ್ರೀಮಠದ ಆಶೀರ್ವಾದ ಸದಾ ಡಿ.ಕೆ. ಶಿವಕುಮಾರ್ ಅವರೊಂದಿಗೆ ಇರುತ್ತದೆ ಎಂದು ಹೇಳಿದ್ದರು.
ಇದನ್ನು ಓದಿ : ಹರಕೆ ತೀರಿಸಿದ ಸಿಎಂಗೆ ಅಣ್ಣಮ್ಮ ದೇವಿ ಶುಭಸೂಚನೆ – ಡಿಕೆಶಿ ಇಷ್ಟಾರ್ಥ ಈಡೇರುತ್ತಾ?

ಸ್ವಾಮೀಜಿ ಅವರು, “ರಾಜ್ಯವನ್ನು ಮುನ್ನಡೆಸುವ ನಾಯಕನಾಗಿ, ರೈತರು ಮತ್ತು ಬಡವರ ಪರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯಾಗಿ ಅವರು ಹೊರಹೊಮ್ಮುತ್ತಾರೆ. ಶ್ರೀಮಠದ ಧರ್ಮಧ್ವಜವನ್ನು ನೀಡಿ ಆಶೀರ್ವದಿಸುವ ಸಮಯ ಸಮೀಪದಲ್ಲಿದೆ. ಜನರ ಪ್ರೀತಿ ಮತ್ತು ವಿಶ್ವಾಸದಿಂದ ಅವರ ಬದುಕು ಇನ್ನಷ್ಟು ಯಶಸ್ವಿಯಾಗಲಿ” ಎಂದು ಆರ್ಶಿವಾದ ಮಾಡಿದ್ದರು.

ಇದನ್ನು ನೋಡಿ : ಶಂಕಿತ ಉಗ್ರನಿಗೂ ತುಮಕೂರಿಗೂ ನಂಟು – ಆರೋಪಿಗಳ ಫೋಟೋ ಪ್ರಜಾಶಕ್ತಿ ಟಿವಿಯಲ್ಲಿ ಮಾತ್ರ




