ಅಣ್ಣಮ್ಮ ದೇವಿ ಆಶೀರ್ವಾದ ಪಡೆದ ಸಿಎಂ D.K Shivakumar

ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್ ಅವರು ಒಂದಿಲ್ಲೊಂದು ದೇವಾಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸುತ್ತಾರೆ. ಅದೇ ರೀತಿ CM D. K. Shivakumar ಅವರು ಇಂದು ನಗರ ದೇವತೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆಯನ್ನು ತೀರಿಸಿದರು.

ಹರಕೆ ಹೊತ್ತಿದ್ದ ಡಿಕೆಶಿ
ಮುಖ್ಯಮಂತ್ರಿಯಾಗುವ ಮುನ್ನ ಮಾಡಿಕೊಂಡಿದ್ದ ಹರಕೆಯಂತೆ ದೇವಿ ಸನ್ನಿಧಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ರಾಜ್ಯದ ಮುಖ್ಯಮಂತ್ರಿಯಾದರೆ ಅಣ್ಣಮ್ಮದೇವಿ ಸನ್ನಿಧಾನಕ್ಕೆ ಬಂದು ಹರಕೆ ತೀರಿಸುವುದಾಗಿ ಹರಕೆ ಹೊತ್ತಿದ್ದ ಡಿಕೆಶಿ ಇಂದು ಹರಕೆ ತೀರಿಸಿದ್ದಾರೆ.
ಇದನ್ನು ಓದಿ : ಸಿಎಂ ಆದ ಮೊದಲ ದಿನವೇ ಸಚಿವರಿಗೆ DK Shivakumar ಖಡಕ್ ಎಚ್ಚರಿಕೆ..!!

ಸುಖ, ಶಾಂತಿ ಹಾಗೂ ನೆಮ್ಮದಿ ನೀಡುವಂತೆ ಪ್ರಾರ್ಥನೆ
ಪೂಜೆಯ ವೇಳೆ ದೇವಿಗೆ ಉಪ್ಪು ಮತ್ತು ಮೊಸರು ಸಮರ್ಪಿಸಿ ರಾಜ್ಯದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೀಡುವಂತೆ ಪ್ರಾರ್ಥಿಸಿದರು. ಬಳಿಕ ತಾಯಿ ಅಣ್ಣಮ್ಮದೇವಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಇದೇ ವೇಳೆ ಬಿಸಿಲು ಮಾರಮ್ಮನಿಗೂ ಸಹ ಉಪ್ಪು ಹಾಗೂ ಮೊಸರು ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಿಎಂ D.K Shivakumar ಗೆ ಶುಭಸೂಚನೆ
ವಿಶೇಷ ಪೂಜೆ ನಡೆಯುವ ಸಂದರ್ಭದಲ್ಲಿ ಅಣ್ಣಮ್ಮದೇವಿ ಸನ್ನಿಧಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಭಸೂಚನೆ ಕಂಡುಬಂದಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ. ಪೂಜೆಯ ವೇಳೆ ದೇವಿಯ ಅಲಂಕಾರದಲ್ಲಿದ್ದ ಮಲ್ಲಿಗೆ ಹೂವು ಬಲಭಾಗಕ್ಕೆ ಬಿದ್ದಿದ್ದು, ಅದನ್ನು ಅರ್ಚಕರು ಸಿಎಂ ಕೈಗೆ ಕೊಟ್ಟಿದ್ದಾರೆ.

ಇದನ್ನು ನೋಡಿ : ಕೇಸರಿ ಶಾಲು ಹಂಚಲು ಹೋದ YATHNAL – YATHNALರನ್ನ ವಶಕ್ಕೆ ಪಡೆದ ಪೋಲಿಸರು.!




