Gold Rate : ಚಿನ್ನದ ಬೆಲೆ 2 ದಿನದಲ್ಲಿ 45 ರು ಇಳಿಕೆ; ಬೆಳ್ಳಿ ಬೆಲೆ 5-10 ರೂ ಕಡಿಮೆ

ದೇಶೀಯ ಮಾರುಕಟ್ಟೆಯಲ್ಲಿ Gold Rate ಸತತವಾಗಿ ಇಳಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಕೊಂಚ ನೆಮ್ಮದಿ ತಂದಿದೆ. ನೆನ್ನೆ ಗ್ರಾಮ್ಗೆ ₹10 ಇಳಿಕೆಯಾಗಿದ್ದ ಚಿನ್ನದ ದರ, ಇಂದು ಮತ್ತಷ್ಟು ₹35 ಕುಸಿತ ಕಂಡಿದೆ. ಹೀಗಾಗಿ ಕೇವಲ ಎರಡು ದಿನಗಳಲ್ಲಿ ಚಿನ್ನದ ಬೆಲೆ ಗ್ರಾಮ್ಗೆ ಒಟ್ಟು ₹45 ಇಳಿಕೆಯಾಗಿದೆ.
ಬೆಳ್ಳಿ ಬೆಲೆಯೂ ಇಳಿಕೆ
ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯ ಪ್ರವೃತ್ತಿ ಮುಂದುವರಿದಿದೆ. ಇದೇ ವೇಳೆ ಹಲವು ದಿನಗಳ ಬಳಿಕ ಬೆಳ್ಳಿ ಬೆಲೆಯೂ ಇಳಿಕೆಯಾಗಿದ್ದು, ಗ್ರಾಮ್ಗೆ ₹5 ರಿಂದ ₹10ರವರೆಗೆ ಕಡಿಮೆಯಾಗಿದೆ.

ಇಂದಿನ ಚಿನ್ನದ ದರ
ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,42,750 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,55,730ಕ್ಕೆ ತಲುಪಿದೆ.
ಪ್ರತಿ ಗ್ರಾಂ ಚಿನ್ನದ ಬೆಲೆ:
- 24 ಕ್ಯಾರಟ್ ಚಿನ್ನ – ₹15,573
- 22 ಕ್ಯಾರಟ್ ಚಿನ್ನ – ₹14,275
- 18 ಕ್ಯಾರಟ್ ಚಿನ್ನ – ₹11,680

ಇದನ್ನು ಓದಿ : ಮೃತ ವ್ಯಕ್ತಿಯ ATM ಕಾರ್ಡ್ ಬಳಸಿದರೆ ಏನಾಗುತ್ತದೆ..?
ಬೆಳ್ಳಿಯ ದರ
ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ದೇಶದಲ್ಲಿ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ₹275 ಇದ್ದು, 100 ಗ್ರಾಂ ಬೆಳ್ಳಿ ₹27,500ಕ್ಕೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ
ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ರಾಷ್ಟ್ರೀಯ ಸರಾಸರಿಗೆ ಸಮಾನವಾಗಿವೆ.
- 24 ಕ್ಯಾರಟ್ ಚಿನ್ನ (1 ಗ್ರಾಂ) – ₹15,573
- 22 ಕ್ಯಾರಟ್ ಚಿನ್ನ (1 ಗ್ರಾಂ) – ₹14,275
- ಬೆಳ್ಳಿ (1 ಗ್ರಾಂ) – ₹275
- ಬೆಳ್ಳಿ (100 ಗ್ರಾಂ) – ₹27,500

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ Gold Rate (ಪ್ರತಿ ಗ್ರಾಂ)
| ನಗರ | ಬೆಲೆ |
|---|---|
| ಬೆಂಗಳೂರು | ₹14,275 |
| ಚೆನ್ನೈ | ₹14,430 |
| ಮುಂಬೈ | ₹14,275 |
| ದೆಹಲಿ | ₹14,290 |
| ಕೋಲ್ಕತಾ | ₹14,275 |
| ಕೇರಳ | ₹14,275 |
| ಅಹ್ಮದಾಬಾದ್ | ₹14,280 |
| ಜೈಪುರ್ | ₹14,290 |
| ಲಕ್ನೋ | ₹14,290 |
| ಭುವನೇಶ್ವರ್ | ₹14,275 |
ಇದನ್ನು ನೋಡಿ : ಕೇಸರಿ ಶಾಲು ಹಂಚಲು ಹೋದ YATHNAL – YATHNALರನ್ನ ವಶಕ್ಕೆ ಪಡೆದ ಪೋಲಿಸರು.!




