ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.

ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಸರ್ಕಾರವು ಹೊಸ ಕಡ್ಡಾಯ ಹಾಜರಾತಿ ನಿಯಮಗಳನ್ನು ಜಾರಿಗೆ ತಂದಿದ್ದು, ಇನ್ಮುಂದೆ ಪ್ರತಿಯೊಬ್ಬರೂ ಬೆಳಗ್ಗೆ 10:00 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದವರ ಕುರಿತು ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಯ ಮೂಲಕ ಸ್ವಯಂಚಾಲಿತ ವರದಿ ಇಲಾಖಾ ಮುಖ್ಯಸ್ಥರಿಗೆ ರವಾನೆಯಾಗಲಿದೆ.
ಕಡ್ಡಾಯದ ಕಟ್ಟುನಿಟ್ಟಿನ ಆದೇಶ
ದಿನಾಂಕ 04-06-2026 ರಂದು ಮಾನ್ಯ ಮುಖ್ಯಮಂತ್ರಿಗಳು ನಡೆಸಿದ ಸಭೆಯ ತೀರ್ಮಾನದ ಅನ್ವಯ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಜೂನ್ 5, 2026 ರಂದು ಈ ಕುರಿತು ಅತ್ಯಂತ ತುರ್ತು ಮತ್ತು ಕಡ್ಡಾಯದ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ.

‘ಕರ್ತವ್ಯ ಆಪ್’ ಮೂಲಕ ಹಾಜರಾತಿ ಕಡ್ಡಾಯ
ಇ-ಆಡಳಿತ ಇಲಾಖೆಯು ಅಭಿವೃದ್ಧಿಪಡಿಸಿರುವ ‘ಕರ್ತವ್ಯ App’ ಮೂಲಕ ಇನ್ಮುಂದೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಕಡ್ಡಾಯವಾಗಿ ದಾಖಲಿಸಬೇಕು. HRMS ಡೇಟಾ ಆಧಾರದಲ್ಲಿ ಎಲ್ಲಾ ಸಿಬ್ಬಂದಿ ಮಾಹಿತಿಯನ್ನು ಈಗಾಗಲೇ ಆ್ಯಪ್ನಲ್ಲಿ ನೋಂದಾಯಿಸಲಾಗಿದೆ.
ಚೆಕ್-ಇನ್ ಮತ್ತು ಚೆಕ್-ಔಟ್ ಕಡ್ಡಾಯ
ಎಲ್ಲಾ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಪ್ರತಿದಿನ ಬೆಳಗ್ಗೆ 10:00 ಗಂಟೆಗೆ ‘ಕರ್ತವ್ಯ App’ ನಲ್ಲಿ Check In ಮಾಡುವುದು ಹಾಗೂ ಕಚೇರಿಯಿಂದ ಹೊರಡುವಾಗ Check Out ಮಾಡುವುದು ಕಡ್ಡಾಯವಾಗಿದೆ.
ಇದನ್ನು ಓದಿ : ನೆಹರು ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಲು ಮುಂದಾದ Modi

AI ಮೂಲಕ ನಿಗಾ ವ್ಯವಸ್ಥೆ
ಪ್ರತಿದಿನ ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸದ ಸಿಬ್ಬಂದಿಗಳ ವಿವರವನ್ನು AI ಆಧಾರಿತ ವ್ಯವಸ್ಥೆ ಜಿಲ್ಲಾವಾರು ಮತ್ತು ಇಲಾಖಾವಾರು ಸಂಗ್ರಹಿಸಿ ಸ್ವಯಂಚಾಲಿತವಾಗಿ ಸಂಬಂಧಿತ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಲಾಗುತ್ತದೆ. ಇದರಿಂದ ಹಾಜರಾತಿ ಮೇಲ್ವಿಚಾರಣೆ ಮತ್ತಷ್ಟು ಕಟ್ಟುನಿಟ್ಟಾಗಲಿದೆ.
ಪ್ರವಾಸದ ವೇಳೆ OOD ಕಡ್ಡಾಯ
ಕಚೇರಿ ಕೆಲಸದ ನಿಮಿತ್ತ ಪ್ರವಾಸದಲ್ಲಿರುವ ಅಧಿಕಾರಿಗಳು ಆ್ಯಪ್ನಲ್ಲಿರುವ ‘OOD (On Official Duty)’ ಆಯ್ಕೆಯನ್ನು ಬಳಸಿಕೊಂಡು ತಮ್ಮ ಹಾಜರಾತಿಯನ್ನು ದಾಖಲಿಸಬೇಕು. ಈ ದಾಖಲೆಯನ್ನು ಸಂಬಂಧಿತ ಮೇಲಾಧಿಕಾರಿಗಳು ದೃಢೀಕರಿಸಬೇಕಾಗುತ್ತದೆ.

ಮೇಲಧಿಕಾರಿಗಳಿಗೆ ಜವಾಬ್ದಾರಿ
ಇಲಾಖಾ ಮುಖ್ಯಸ್ಥರು ತಮ್ಮ ಲಾಗಿನ್ ಮೂಲಕ ಪ್ರತಿದಿನ ಹಾಜರಾತಿ ವರದಿಯನ್ನು ಪರಿಶೀಲಿಸಿ, ಗೈರು ಹಾಜರಾದ ಅಥವಾ ತಡವಾಗಿ ಬಂದ ಸಿಬ್ಬಂದಿಗೆ ಸೂಕ್ತ ಸೂಚನೆ ನೀಡಬೇಕಾಗಿದೆ.
ಇದನ್ನು ನೋಡಿ : ಖಾತೆ ಸರಿಯಾಗಿಲ್ಲ, ಸಿನಿಯಾರಿಟಿ ಮೇಂಟೆನ್ ಆಗಿಲ್ಲ – ಪಕ್ಷದ ವಿರುದ್ಧ K.H.MUNIYAPPA ಬೇಸರ..!




