Modi ರಾಜಕೀಯ ಪರ್ವದ ಹೊಸ ಮೈಲಿಗಲ್ಲು! ನೆಹರು ಸಾರಥ್ಯ vs ಮೋದಿ ಪಥ – ಭಾರತದ ಆಡಳಿತದಲ್ಲಿ ಅಡಗಿದೆ ಅಚ್ಚರಿಯ ವ್ಯತ್ಯಾಸ!

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10, 2026ರಂದು ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ದೀರ್ಘಕಾಲದ ನಿರಂತರ ಅಧಿಕಾರಾವಧಿಯ ದಾಖಲೆಯನ್ನು ಮುರಿದು, ಭಾರತದ ಅತ್ಯಂತ ಹೆಚ್ಚು ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಮೋದಿ ಹೊರಹೊಮ್ಮಲಿದ್ದಾರೆ.

ಮೇ 26, 2014ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ
ಮೇ 26, 2014ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ Modi ಅವರು, ಜೂನ್ 10, 2026ರಂದು 4,399 ದಿನಗಳ ನಿರಂತರ ಅಧಿಕಾರಾವಧಿಯನ್ನು ಪೂರೈಸಲಿದ್ದಾರೆ. ಈ ಮೂಲಕ ನೆಹರು ಅವರ 4,398 ದಿನಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.
ಇದನ್ನು ಓದಿ : ಇಂದು ರಾತ್ರಿ Modi ದೇಶವನ್ನು ಉದ್ದೇಶಿಸಿ ಭಾಷಣ..!!

4,398 ದಿನಗಳ ಕಾಲ ನಿರಂತರವಾಗಿ ಸೇವೆ
ಜವಾಹರಲಾಲ್ ನೆಹರು ಅವರು 1952ರ ಮೇ 13ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ದೇಶದ ಆಡಳಿತ ನಡೆಸಿದ್ದರು. ಅವರ ಈ ದಾಖಲೆ ಕಳೆದ ಆರು ದಶಕಗಳಿಗೂ ಹೆಚ್ಚು ಕಾಲ ಅಚ್ಚಳಿಯದೆ ಉಳಿದಿತ್ತು.

ಇಂದಿರಾ ಗಾಂಧಿ ಅವರ ದಾಖಲೆಯನ್ನು ಹಿಂದಿಕ್ಕಿದ್ದ Modi
ಇದಕ್ಕೂ ಮುನ್ನ 2025ರ ಜುಲೈ 25ರಂದು ಮೋದಿ ಮತ್ತೊಂದು ಮಹತ್ವದ ಮೈಲುಗಲ್ಲು ತಲುಪಿದ್ದರು. ಅಂದು ಅವರು 4,077 ದಿನಗಳ ನಿರಂತರ ಅಧಿಕಾರಾವಧಿಯೊಂದಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ದಾಖಲೆಯನ್ನು ಹಿಂದಿಕ್ಕಿದ್ದರು. ಇಂದಿರಾ ಗಾಂಧಿ ಅವರು 1966ರ ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ ಸುಮಾರು 11 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ಇದನ್ನು ನೋಡಿ : ಶಿರಾದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಶುರು ಮನೆ ಮನೆಗೆ ಬರ್ತಾರೆ ಬಿಎಲ್ಒಗಳು





