Murder : ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ಗಂಡ – ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ.

ಮದುವೆ ಅನ್ನೋದು ಪವಿತ್ರ ಬಂಧ. ಆದರೆ ಇತ್ತೀಚೆಗೆ ಕೆಲ ಗಂಡಸರು, ಹೆಂಗಸರು ಮದುವೆ ಎಂಬ ಸುಂದರ ಬಂಧಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಮದುವೆ ಆಗಿ ಮಕ್ಕಳಿದ್ದರು ಪರಸ್ತ್ರಿ, ಪರ ಪುರುಷರ ಮೋಹಕ್ಕೆ ಒಳಗಾಗಿ, ಕಟ್ಟಿಕೊಂಡ ಗಂಡ ಹೆಂಡ್ತಿಯರನ್ನೇ ಕೊಲೆ ಮಾಡುವ ಮಟ್ಟಕ್ಕೆ ಹೋಗ್ತಾ ಇದ್ದಾರೆ. ಈಗ ಅಂತಹದ್ದೇ ಪ್ರಕರಣ ಬೆಂಗಳೂರು ಹೊರವಲಯದ ಹೆಸರಘಟ್ಟ ಸಮೀಪದ ಲಿಂಗನಹಳ್ಳಿಯಲ್ಲಿ ನಡೆದಿದೆ.
ಮದುವೆ ಎಂಬ ಸುಂದರ ಬಂಧಕ್ಕೆ ದ್ರೋಹ
ಕೊಲೆಯಾದವನನ್ನು ಪಶ್ಚಿಮ ಬಂಗಾಳ ಮೂಲದ 25 ವರ್ಷದ ಆಭಿಜಿತ್ ಪಂಡಿತ್ ಎನ್ನಲಾಗಿದೆ. ಈತ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ಮೂರು ವರ್ಷಗಳ ಹಿಂದೆ ಅರ್ಚನಾ ಚೌಹಾನ್ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆರಂಭದಲ್ಲಿ ಇವರ ದಾಂಪತ್ಯ ಚೆನ್ನಾಗಿಯೇ ಇತ್ತು. ಆದ್ರೆ ಇತ್ತೀಚೆಗೆ ಅರ್ಚನಾಗೆ ಪರ್ಸೂಲ್ ಪಾಲ್ ಎಂಬ ಯುವಕನ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಈ ವಿಚಾರ ಆಭಿಜಿತ್ಗೆ ತಿಳಿದು ಆಗಾಗ ಮನೆಯಲ್ಲಿ ಜಗಳವಾಗ್ತಿತಂತೆ. ಪತ್ನಿಗೆ ಹಲವು ಬಾರಿ ಆತ ಬುದ್ಧಿವಾದ ಹೇಳಿದ್ರೂ ಆಕೆ ಮಾತ್ರ ಆತನ ಜೊತೆ ಸ್ಬೇಹ ಮುಂದುವರಿಸಿದ್ಳಂತೆ.

ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ
ಇನ್ನು ತಮ್ಮ ಸಂಬಂಧಕ್ಕೆ ಆಭಿಜಿತ್ನಿಂದ ಅಡ್ಡಿಯಾಗ್ತಿದೆ ಎಂದು ತಿಳಿದ ಆರೋಪಿಗಳು, ಆತನನ್ನು ಮುಗಿಸಲು ಸಂಚು ರೂಪಿಸಿದ್ದಾರೆ.
ಬಳಿಕ ಮೇ 27ರಂದು ಆಭಿಜಿತ್ನನ್ನು ಕರೆಸಿಕೊಂಡ ಪರ್ಸೂಲ್ ಪಾಲ್, ಆತನ ಜೊತೆ ಮದ್ಯ ಸೇವಿಸಿ, ಬಳಿಕ ತನ್ನಿಬ್ಬರು ಸ್ನೇಹಿತರ ಸಹಾಯದಿಂದ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ Murder ಮಾಡಿದ್ದಾನೆ.
ಬಳಿಕ ಶವವನ್ನು ಹೆಸರಘಟ್ಟ ಸಮೀಪದ ಲಿಂಗನಹಳ್ಳಿ ಕೆರೆಯ ಬಳಿ ಕೊಂಡೊಯ್ದು ಹೂತು ಹಾಕಿದ್ದಾರೆ.

ಇದನ್ನು ಓದಿ : ಕ್ಷುಲಕ ವಿಚಾರಕ್ಕೆ ಆಟೋ ಚಾಲಕನ ಬರ್ಬರ Murder!
ಮಿಸ್ಸಿಂಗ್ ಡ್ರಾಮಾ ಬಳಿಕ ಬಯಲಾಯ್ತು Murder ರಹಸ್ಯ.!
ಇನ್ನು ಘಟನೆ ಬಳಿಕ ಪತಿ ನಾಪತ್ತೆಯಾಗಿರುವುದಾಗಿ ಅರ್ಚನಾ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪತ್ನಿಯ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು.
ಆದರೆ ವಿಚಾರಣೆ ವೇಳೆ ಪತ್ನಿಯ ಹೇಳಿಕೆಗಳಲ್ಲಿ ಹಲವು ಅನುಮಾನಗಳು ಮೂಡಿದ್ದವು. ಇದರ ಬೆನ್ನಲ್ಲೇ ಪೊಲೀಸರು ಪರ್ಸೂಲ್ ಪಾಲ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.
ಪತ್ನಿ ಮತ್ತು ಪ್ರಿಯಕರ ಅರೆಸ್ಟ್, ಇನ್ನಿಬ್ಬರಿಗಾಗಿ ಶೋಧ
ಇನ್ನು ಆರೋಪಿಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಲಿಂಗನಹಳ್ಳಿ ಕೆರೆಯ ಬಳಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೂತಿಟ್ಟಿದ್ದ ಆಭಿಜಿತ್ನ ಶವ ಪತ್ತೆಯಾಗಿದ್ದು, ಹಲವು ದಿನಗಳಾಗಿದ್ದ ಕಾರಣ ಶವ ಕೊಳೆತ ಸ್ಥಿತಿಯಲ್ಲಿತ್ತು.
ಸದ್ಯ ರಾಜಾನುಕುಂಟೆ ಪೊಲೀಸರು ಪತ್ನಿ ಅರ್ಚನಾ ಚೌಹಾನ್ ಹಾಗೂ ಆಕೆಯ ಪ್ರಿಯಕರ ಪರ್ಸೂಲ್ ಪಾಲ್ನನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಇದನ್ನು ನೋಡಿ : ಮಾಜಿ MLC KIDNAP CASE – 3 ಕೋಟಿ ಡಿಮ್ಯಾಂಡ್ ಮಾಡಿದ್ದ ನಾಲ್ವರು ARREST.!




