ಆಟೋಚಾಲಕನಿಗೆ ಚಾಕು ಇರಿದು ಬರ್ಬರ Murder – ನಾಲ್ವರು ದುರ್ಷರ್ಮಿಗಳಿಂದ ಭೀಕರ ಕೃತ್ಯ.!

ಬೆಂಗಳೂರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಆಟೋ ಚಾಲಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ Murder ಮಾಡಿರುವ ಘಟನೆ ಚಿಕ್ಕಬಾಣಾವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಯ್ಯದ್ ಶಫಿ ಕೊಲೆಯಾದ ಆಟೋ ಚಾಲಕ ಎಂದು ಗುರುತಿಸಲಾಗಿದೆ.
ಮೂತ್ರ ವಿಸರ್ಜನೆ ವಿಚಾರಕ್ಕೆ ಶುರುವಾದ ಜಗಳ
ಚಿಕ್ಕಬಾಣಾವಾರದ ಮೀನಾ ಬಾರ್ ಮುಂಭಾಗ ಈ ಕೊಲೆ ನಡೆದಿದ್ದು, ಕೊಲೆಯಾದ ಶಫಿ ಬಾರ್ ಮುಂದೆ ಆಟೋದಲ್ಲೇ ಕುಳಿತು ಸ್ನೇಹಿತನ ಜೊತೆ ಮಾತಾಡ್ತಿದ್ದನಂತೆ ಈ ವೇಳೆ ಕುಡಿದು ಬಂದ ದರ್ಶನ್ ಅಲಿಯಾಸ್ ದಾಸ ಎಂಬಾತ ಆಟೋ ಬಳಿಯೇ ಮೂತ್ರ ವಿಸರ್ಜನೆ ಮಾಡಲು ಬಂದಿದ್ದಾನೆ. ಈ ವೇಳೆ ದರ್ಶನ್ ಡ್ರೈವರ್ ಶಪಿಗೆ ಏನೋ ಗುರಾಯಿಸ್ತೀಯಾ ಅಂತ ಗಲಾಟೆ ಮಾಡಿದ್ದು, ಆತನ ಜೊತೆಗಿದ್ದ ಸ್ನೇಹಿತರು ಕೂಡ ಶಫಿ ಜೊತೆ ಕಿರಿಕ್ ಮಾಡಿದ್ದಾರೆ ಎನ್ನಲಾಗ್ತಿದೆ.́

READ THIS : ಭೀಕರ ರಸ್ತೆ ಅಪಘಾತ – ಬೈಕ್ ಸವಾರನಿಗೆ ಗಂಭೀರ ಗಾಯ
ಡ್ರ್ಯಾಗರ್ನಿಂದ ಇರಿದು ಆಟೋ ಚಾಲಕನ Murder
ಇನ್ನು ಗಲಾಟೆ ತಾರಕಕ್ಕೇರುತ್ತಿದ್ದಂತೆ ದರ್ಶನ್ ತನ್ನ ಬಳಿ ಇದ್ದ ಡ್ರ್ಯಾಗರ್ನಿಂದ ಶಫಿ ಮೇಲೆ ಅಟ್ಯಾಕ್ ಮಾಡಿದ್ದು, ತೀವ್ರ ರಕ್ತ ಸ್ರಾವದಿಂದ ಶಫಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ದರ್ಶನ್ ಜೊತೆ ಇನ್ನೂ ಮೂವರು ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ನಾಲ್ವರು ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಬಾಣಾವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸದ್ಯ ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ದರ್ಶನ್ ಸೇರಿ ಆತನ ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದು, ಕೊಲೆ ಸಂಬಂಧ ಚಿಕ್ಕಬಾಣಾವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MUST WATCH : ದೇಶದಲ್ಲಿ ದೊಡ್ಡ ಸಂಚು ನಡೀತಿದೆ – SIR ಪ್ರಕ್ರಿಯೆ ಬಗ್ಗೆ DKS ಆತಂಕ..!




