Tumkur : ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ.

Tumkur ನಗರದ ಯುವಕನಿಗೆ ವಿದೇಶಿ ಶಂಕಿತ ಉಗ್ರನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಹಲವು ಉಗ್ರ ಚಟುವಟಿಕೆಗಳಿಗೆ ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧಾರದ ಮೇರೆಗೆ ತುಮಕೂರಿನ ಶ್ರೀರಾಮ ನಗರ ನಿವಾಸಿಯಾದ ಅಲ್ಲಾ ಬಕ್ಷು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕಿತ ಉಗ್ರನ ಜೊತೆ ತುಮಕೂರಿನ ಯುವಕನ ಲಿಂಕ್
ಶಂಕಿತ ಉಗ್ರನ ಜೊತೆ ತುಮಕೂರಿನ ಅಲ್ಲಾ ಬಕ್ಷು ಎಕ್ಸ್ ಖಾತೆ ಮುಖಾಂತರ ನಿರಂತರವಾಗಿ ಸಂಪರ್ಕಹೊಂದಿದ್ದು, ದೇಶದ ಭದ್ರತೆಗೆ ಧಕ್ಕೆ ಬರುವ ರೀತಿ ಚಾಟ್ ಹಾಗೂ ಸಮುದಾಯಕ್ಕೆ ಸೀಮಿತವಾಗಿ ದೇಶದೊಳಗೆ ಆದ ಬೆಳವಣಿಗೆ ಸಂಬಂಧಿತ ಪ್ರಚೋಧನಾತ್ಮಕ ಸಂದೇಶಗಳು ಮಾಡುತ್ತಿದ್ದ ಎಂದು ಹೇಳಲಾಗ್ತಿದೆ. ಈ ಸಂಬಂಧ ಅಲ್ಲಾ ಬಕ್ಷು ಚಟುವಟಿಕೆ ಮೇಲೆ ಕೇಂದ್ರ ತನಿಖಾ ತಂಡ ನಿಗಾ ಇಟ್ಟಿದ್ದು, ಉಗ್ರ ಚಟುವಟಿಕೆಗಳು ಖಚಿತವಾಗ್ತಿದ್ದಂತೆ ತುಮಕೂರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ಬೆನ್ನಲ್ಲೇ ತುಮಕೂರು ನಗರ ಠಾಣೆಯ ಇನ್ಸ್ಪೆಕ್ಟರ್ ಅವಿನಾಶ್ ನೇತೃತ್ವದ ಟೀಂ ರೇಡ್ ಮಾಡಿದ್ದು, ಉಗ್ರನ ಜೊತೆ ಲಿಂಕ್ ಹೊಂದಿದ್ದ ಅಲ್ಲಾ ಬಕ್ಷುನನ್ನು ಕ್ಯಾತ್ಸಂದ್ರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಲ್ದೇ ಅಲ್ಲಾ ಬಕ್ಷು ಜೊತೆ ಮತ್ತೊಬ್ಬ ಕೂಡ ಸಂಪರ್ಕದಲ್ಲಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನು ಓದಿ : ತೋಟದಲ್ಲಿ ದಲಿತ ಮಹಿಳೆಯ ಶವ ಪತ್ತೆ! ಕೊಲೆಯೋ..? ಸಹಜ ಸಾವೋ?

ದೇಶ ವಿರೋಧಿ ಚಟುವಟಿಕೆಗಳ ಮೇಲೆ ನಿಗಾ ಇಟ್ಟ ಖಾಕಿ
ಶಾಂತವಾಗಿದ್ದ ತುಮಕೂರಿನಲ್ಲಿ ದೇಶದ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಬೆನ್ನಲ್ಲೇ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಮತ್ತಷ್ಟು ಸಂಗತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಇತ್ತ ತುಮಕೂರಿನಲ್ಲಿ ಮತ್ತಷ್ಟು ಭದ್ರತೆ ಕೈಗೊಳ್ಳಲಾಗಿದೆ

ಇದನ್ನು ನೋಡಿ : ಬೆಂಗಳೂರಲ್ಲಿ ಪೊಲ್ಯೂಷನ್ ಹೆಚ್ಚುತ್ತಿದೆ ಪ್ರತಿಯೊಬ್ಬರೂ ಗಿಡ ನೆಟ್ಟು ಪರಿಸರ ಉಳಿಸೋಣ




