ICC Women’s T20 World Cup : ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರದ ರಸದೂಟ ಸಿಗಲಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಇಂದು (ಜೂನ್ 14) ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಇಂಗ್ಲೆಂಡ್ನ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಈ ಪಂದ್ಯಕ್ಕೆ ದೊಡ್ಡ ಪ್ರೇಕ್ಷಕರ ದಂಡು ಹರಿದುಬರುವ ಸಾಧ್ಯತೆಯಿದೆ.
ಇಂಡೋ-ಪಾಕ್ ಹೈವೋಲ್ಟೇಜ್ ಕದನ
ಇದು ಎರಡೂ ತಂಡಗಳಿಗೂ ಟೂರ್ನಿಯ ಮೊದಲ ಪಂದ್ಯವಾಗಿರುವುದರಿಂದ, ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಉಭಯ ತಂಡಗಳು ಕಣಕ್ಕಿಳಿಯಲಿವೆ. ಉಭಯ ತಂಡಗಳ ನಡುವೆ ಹೈ-ವೋಲ್ಟೇಜ್ ಕದನ ಏರ್ಪಡುವ ಸಾಧ್ಯತೆಯಿದೆ.
ಇದನ್ನು ಓದಿ : ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ ಕೇನ್ ವಿಲಿಯಮ್ಸನ್

ಪಾಕ್ ವಿರುದ್ಧ ಭಾರತ ಮೇಲುಗೈ
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದೆ. 2009ರಿಂದ ಈವರೆಗೆ ಉಭಯ ತಂಡಗಳು 16 ಬಾರಿ ಎದುರಾಗಿದ್ದು, ಭಾರತ 13 ಪಂದ್ಯಗಳಲ್ಲಿ ಜಯ ದಾಖಲಿಸಿದೆ.
ಕಳೆದ ವರ್ಷ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆದ್ದಿದ್ದ ಭಾರತ ಮಹಿಳಾ ತಂಡದ ಗುರಿ ಇದೀಗ ಟಿ20 ವಿಶ್ವಕಪ್ ಮೇಲೆ ನೆಟ್ಟಿದೆ.

ICC Women’s T20 World Cup – ಪಿಚ್ ವರದಿ
ಎಡ್ಜ್ಬಾಸ್ಟನ್ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಉತ್ತಮವಾಗಿದೆ. ಇಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ.
ಇದನ್ನು ನೋಡಿ : D.K.SHIVAKUMAR ಜೊತೆ ಸಂಧಾನ ಆಗಿದ್ಯಾ ಸಾರ್? – ಕಾಂಪ್ರಮೈಸ್ ಬಗ್ಗೆ RAJANNA ಹೀಗ್ಯಾಕಂದ್ರು..?





